ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ನೆಯ ಪ್ರಕರಣ ಆಕಾಶರಾಜ ಅಥವಾ ಸೂರ್ಯ ಹಗಲಿನಲ್ಲಿ ಸೂರ್ಯನು ಆಕಾಶದಲ್ಲಿ ಏಕಛತ್ರಾಧಿಪತಿಯಾಗಿರುವನು. ಅವನ ಬೆಳಕಿನಲ್ಲಿ ಎಲ್ಲ ನಕ್ಷತ್ರಗಳೂ ಗ್ರಹಗಳೂ ಅಡಗಿಹೋಗು ವವು ನಮಗೆ ಸೂರ್ಯನಿಂದ ಆಗುವಷ್ಟು ಉಪಯೋಗವು ಆಕಾಶದಲ್ಲಿಯ ಬೇರೆಯಾವ ಜ್ಯೋತಿಯಿಂದಲೂ ಆಗುವುದಿಲ್ಲ. ಸೂರ್ಯನ ಹೊರತು ಉಳಿದ ಎಲ್ಲ ಪದಾರ್ಥಗಳು ನಾಶವಾದರೂ ನಮ್ಮ ಜೀವಿತದಲ್ಲಿ ಹೆಚ್ಚು ಕಡಿಮೆ ಯಾಗುವುದಿಲ್ಲ. ಆದರೆ ಸೂರ್ಯನು ಇಲ್ಲದಂತಾದರೆ ಮಾತ್ರ ನಾವು ಬಹಳ ದಿವಸ ಬದುಕಲಾರೆವು. ಪೃಥ್ವಿಯೊಳಗಿನ ಎಲ್ಲ ಜೀವನಗಳಿಗೂ ಆಧಾರನೆ ಇವನು. ಸೂರ್ಯನಿಂದ ನಮಗೆ ಆಗುವ ದೃಶ್ಯಲಾಭಗಳೆಂದರೆ, ಬೆಳಕು ಮತ್ತು ಶಕೆ. ಇವಗಳು ನಮಗೆ ಎಷ್ಟು ಆವಶ್ಯಕವಿರುವವೆಂಬು ದನ್ನು ಬೇರೆ ಹೇಳಬೇಕಾಗಿಲ್ಲ. ಗಿಡಗಂಟಿಗಳು ಸಹ ಸೂರ್ಯನು ಮುಳು ಗಿದ ಕೂಡಲೆ ತಮ್ಮ ಎಲೆಗಳನ್ನು ಮುಚ್ಚಿಕೊಳ್ಳುತ್ತವೆ. ಮನೆಯೊಳಗಿನ ಸಸಿಗಳು ತಮ್ಮ ಎಲೆಗಳನ್ನು ಕಿಡಕಿಯ ಕಡೆಗೆ ತಿರುಗಿಸುತ್ತವೆ. ಕೆಲವು ದಿವಸ ಆ ಸಸಿಗಳು ಕತ್ತಲೆಯಲ್ಲಿ ಉಳಿದರೆ, ಅವುಗಳ ಹಸಿರು ಬಣ್ಣವು ಹಾರಿ ಹೋಗಿ ಅವು ನಿಜವಾಗುವವು, ಮತ್ತು ಮುಂದೆ ಕೆಲವು ದಿವಸ ಗಳಾದನಂತರ ಅವು ಸತ್ತುಹೋಗುವವು. ಹಸಿರು ಬಣ್ಣವು ವನಸ್ಪತಿಗಳ ಜೀವವು. ಪ್ರಾಣಿಗಳದಾದರೂ ಇದೇ ಸ್ಥಿತಿ. ಕತ್ತಲೆಯಲ್ಲಿಯೆ ಇರುವ ಮನುಷ್ಯನು ಬೆಳ್ಳಗಾಗಿ ಕ್ಷೀಣನಾಗುವನು. ಸೂರ್ಯಪ್ರಕಾಶದಲ್ಲಿ ಎಲ್ಲ ರೋಗ ಜಂತುಗಳು ಸಾಯುವುದರಿಂದ, ಬೆಳಕಿನಲ್ಲಿರುವ ಮನುಷ್ಯನು ನಿರೋಗಿಯಾಗಿರುವನು. ಸೂರ್ಯ ನಮಸ್ಕಾರದ ಮಹತ್ವವು ಈಗ ಯಾರಿಗೆ ಗೊತ್ತಿಲ್ಲ? ಈ ವಿಷಯವಾಗಿ ಪಾಶ್ಚಾತ್ಯರು ಹೊಸ ಶೋಧಗಳನ್ನು ಮಾಡಿ ಸೂರ್ಯಕಿರಣಗಳಿಂದ ಅನೇಕ ರೋಗಗಳನ್ನು ನೆಟ್ಟಗೆ ಮಾಡುವುದೊಂದು ಶಾಸ್ತ್ರವನ್ನು ಸಿದ್ಧಪಡಿಸುತ್ತಿರುವರು. ಬೆಳಕಿನಂತೆಯೆ ಸೂರ್ಯನ ಉಷ್ಣತೆಯಾದರೂ ನಮಗೆ ಅತ್ಯವಶ್ಯವು. ಇದು ಇಲ್ಲವಾದರೆ ಭೂಮಿಯೆಲ್ಲವೂ ಬರ್ಫಾಚ್ಛಾದಿತವಾಗುವುದು.