ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಮ್ಮ ಮನೆ ೫೩ ಭೂಮಿಯು ಹಿಂದಿನಕಾಲದಲ್ಲಿ ಈಗಿನಂತೆ ಘನರೂಪ ಪದಾರ್ಧವಾಗಿರಲಿಲ್ಲ ವೆಂಬುದು, ಕಲ್ಲಿನ ಆಕಾರವು ಅದನ್ನು ನಾವು ಎಷ್ಟು ತಿರುಗಿಸಿದರೂ ಬದಲಾಗದು. ಅದೆಯೇ, ನಾವು ಮೇಣದ ಗುಂಡನ್ನು ಗರಗರನೆ ತಿರುಗಿ ಸಿದರೆ, ಅದು ಹೀಗೆ ಚಪ್ಪಟೆಯಾಗುವುದು. ಬಹಳ ದಿವಸಗಳ ಹಿಂದೆ ಭೂಮಿಯೆಲ್ಲವೂ ಹೀಗೆ ಕಾಯ್ದು ಕರಗಿದ ಕಲ್ಲುಗಳ ರಸದಿಂದ ಮಾಡಿ ದೊಂದು ಮೇಣದ ಮುದ್ದೆಯಾಗಿತ್ತೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಆಗ ಭೂಮಿಯಮೇಲೆ ಪ್ರಾಣಿಗಳು ಇದ್ದಿಲ್ಲ; ಗಿಡಗಂಟೆಗಳಿದ್ದಿಲ್ಲ; ಹವೆ-ನೀರು ಇದ್ದಿಲ್ಲ; ಕಲ್ಲುಮಣ್ಣುಗಳಿದ್ದಿಲ್ಲ. ಎಲ್ಲೆಲ್ಲಿ ನೋಡಿದರೂ ಸಳಸಳನೆ ಕುದಿಯುವ 'ಲಾವಾ' ಎಂಬ ಕಲ್ಲಿನ ರಸವು ! ಈ ಭೂಗೋಲವು ಎಲ್ಲಿಂದ ಬಂದಿತು ? ಈ ವಿಷಯದಲ್ಲಿ ಎರಡು ಮತಗಳಿವೆ. ಸೂರ್ಯನು ಈಗಿನ ಸ್ಥಿತಿಗೆ ಬರುವ ಮೊದಲು ಇದಕ್ಕಿಂತಲೂ ಬಹಳ ವಿಸ್ತ್ರತನಾಗಿದ್ದನೆಂದೂ, ಆತನು ತನ್ನ ಸುತ್ತಲು ತಾನು ವೇಗದಿಂದ ತಿರುಗುವಾಗ ಆತನ ಹೊರಬದಿಗೆ ಇದ್ದ ಕೆಲಭಾಗಗಳು ಸಿಡಿದುಹೋಗಿ ಭೂಮಿ, ಗುರು ಮುಂತಾದ ಗ್ರಹಗಳಾದವೆಂದೂ, ಆ ಸಿಡಕಲಗಳು ಕೂಡ ತಮ್ಮ ಸುತ್ತಲು ತಾವು ತಿರುಗುತ್ತ ಸೂರ್ಯನ ಸುತ್ತಲೂ ತಿರುಗ ಹತ್ತಿರುವವೆಂದೂ ಮೊದಲಿನ ಮತವು. ಆದರೆ ಇದಕ್ಕೆ ಒಂದು ಆಕ್ಷೇಪ ಬರುತ್ತದೆ. ಅದೇನೆಂದರೆ, ಹೀಗಿದ್ದಲ್ಲಿ ಗುರು, ಶನಿ ಮುಂತಾದ ಈಗ ಪೃಥ್ವಿಗಿಂತಲೂ ದೂರದಲ್ಲಿರುವ ಗ್ರಹಗಳು ಮೊದಲು ಸಿಡಿದು ಗಟ್ಟಿಯಾಗಿರ ಬೇಕಾಗಿತ್ತು, ಆದರೆ ನಿಜಸ್ಟಿತಿಯು ಹಾಗಿರುವುದಿಲ್ಲ. ಅವು ಸೃದ್ಧಿ ಗಿಂತಲೂ ಇನ್ನೂ ಕಾಯ್ದೆ ಇರುತ್ತವೆ. ಮತ್ತೊಂದು ಮತವೇನೆಂದರೆ, ಸೂರ್ಯನು ಹೀಗೆ ಸಂಕುಚಿತನಾಗುತ್ತಲೂ ಕಾಯುತ್ತಲೂ ಹೋದ ಹಾಗೆಲ್ಲ ಅವನ ಶರೀರದಲ್ಲಿ ಭಯಂಕರವಾದ ಅಲ್ಲೋಲಕಲ್ಲೋಲಗಳುಂಟಾ ಗುತ್ತವೆಂದೂ, ಆಗ ಒಮ್ಮೊಮ್ಮೆ ದೊಡ್ಡದೊಡ್ಡ ತುಂಡುಗಳು ತೋಫಿನ ಗುಂಡುಗಳಂತೆ ಹಾರಿ ಹೋಗುತ್ತವೆಂದೂ, ಅವೆ ಮುಂದೆ ಗ್ರಹಗಳಾದ ವೆಂದೂ ಹೇಳುತ್ತಾರೆ. ಇದರಿಂದ ಭೂಮಿ ಮುಂತಾದ ಸಣ್ಣ ಗ್ರಹಗಳು ಮೊದಲು (ಸೂರ್ಯನು ಅಷ್ಟು ಕಾಯದೆ ಇರುವಾಗ) ಹಾರಿದ್ದರಿಂದ ಸಮೀಪಕ್ಕೆ ಉಳಿದವೆಂದೂ ಬರಬರುತ್ತ ಗುರುವಿನಂತಹ ಬೃಹಧೃಹಗಳು