ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಬಹಳ ವೇಗದಿಂದ ಹಾರಿಹೋದುದರಿಂದ ದೂರ ಉಳಿದು ಇನ್ನೂ ಪೂರ್ಣ ವಾಗಿ ಆರಿಲ್ಲವೆಂದೂ ಇವರು ಹೇಳುವರು. ಹೀಗೆ ಗ್ರಹಗಳು ಸೂರ್ಯನಿಂದ ಹಾರಿಹೋದ ಸ್ಥಳದಲ್ಲಿ ಸೂರ್ಯನ ಶರೀರದಲ್ಲಿ ದೊಡ್ಡದೊಡ್ಡ ತಗ್ಗುಗ ಳಿರುವವೆಂದೂ, ಇವೇ ನಮಗೆ ಸೂರ್ಯನ ಮೇಲಿನ ಕಲೆಗಳಂತೆ ಕಾಣುತ್ತ ವೆಂದೂ ಇವರು ಹೇಳುತ್ತಾರೆ. ಸೂರ್ಯನಿಂದ ಗ್ರಹಗಳು ಹಾರಿ ಹೋದಂತೆಯೆ ಚಂದ್ರ ಮುಂತಾದ ಉಪಗ್ರಹಗಳು ಗ್ರಹಗಳಿಂದ ಹಾರಿ ಹೋದ ತುಣುಕುಗಳೆ, ಚಂದ್ರನೂ ಹೀಗೆ ಸೃದ್ಧಿಯಿಂದ ಹಾರಿಹೋದ ಒಂದು ತುಂಡೆ. ಆ ಹಾರಿಹೋದ ಸ್ಥಳದಲ್ಲಿಯ ತಗ್ಗೆ ಈಗಿನ ಪ್ಯಾಸಿಫಿಕ್ ಮಹಾಸಾಗರವು. ಈ ತರಹದ ತಗ್ಗುಗಳು ಅಥವಾ ಕಲೆಗಳು ಸೂರ್ಯನ ಮಧ್ಯಭಾಗದಲ್ಲಿಯೆ ಬಹಳ ಇರುತ್ತವೆ. ಸೂರ್ಯನ ಧುವಗಳ ಮೇಲೆ ತೀರ ಕಡಿಮೆ. ಹಾಗೆಯೆ ಪ್ಯಾಸಿಫಿಕ್ ಸಾಗರವೂ ಭೂಮಿಯ ನಟ್ಟನಡುವೆ ಟೊಂಕದ ಹತ್ತರವಿರುವುದು, ಹೇಗೆಯೇ ಇರಲಿ; ಮುಂದೆ ಭೂಗೋಲವು ಆರಹತ್ತಿತು. ಅದರ ಹೊರಭಾಗವು ಮೊದಲು ಘನರೂಪವಾಯಿತು ; ಎಂದರೆ ಗಟ್ಟಿಯಾಯಿತು. ಅದರಿಂದ ಒಳಗಿರುವ ದ್ರವರೂಪ ಪದಾರ್ಧಕ್ಕೆ ಅದೇ ಕವಚವಾಯಿತು. ಮತ್ತು ಮುಂದೆ ಭೂಮಿಯ ಆರೋಣವನ್ನೂ ನಿಲ್ಲಿಸಿತು. ಈಗಲೂ ಭೂಮಿಯ ೫೦ ಮೈಲುಗಳ ದಪ್ಪವಾದ ತೊಗಟೆಯು ಮಾತ್ರ ಗಟ್ಟಿಯಾಗಿ ರುವುದು, ಒಳಗಿನ ಕಲ್ಲಿನ ರಸವನ್ನು ನಾವು ಜ್ವಾಲಾಮುಖಿಗಳಲ್ಲಿ ಕಾಣ ಬಹುದು. ಭೂಕಂಪಗಳೆಂದರೆ ಈ ರಸದ ತೆರೆಗಳ ಅಲ್ಲೋಲವೆ. ಹೀಗೆ ಲಾವಾರಸವು ಆರಿ ಆದ ಕಲ್ಲುಗಳೆಂದರೆ ನಾವು ನೋಡುವ ಕಲ್ಲುಗಳಲ್ಲ. ಅವು ನೆಲದ ಕೆಳಗೆ ಬಹಳ ದೂರದಲ್ಲಿರುವವು. ಅದಕ್ಕೆ ಅಗ್ನಿ ಪಾಷಾಣ (Igneous rocks) ಗಳೆನ್ನುವರು. ಇವುಗಳಲ್ಲಿ ತರಗಳು ಇರುವುದಿಲ್ಲ. ಇದಕ್ಕೆ ವಿರುದ್ಧವಾಗಿ ನಾವು ನೋಡುವ ಕಲ್ಲುಗಳಿಗೆ ಪದರುಗಲ್ಲು (Stratihed rocks) ಗಳೆನ್ನುವರು. ಇವು ನಿಜವಾಗಿ ಕಲ್ಲುಗಳಲ್ಲ; ಮಣ್ಣಿನ ಹಲಿಗೆಗಳು. ಈ ಮಣ್ಣೆಲ್ಲ ಎಲ್ಲಿಂದ ಬಂದಿತು ? ಈಗ ಸಹ ಮೇಲಿನ ಕಲ್ಲುಗಳು ಮಳೆಗಾಳಿಗಳಿಂದ ಒಡೆದು ಮಣ್ಣು ಆಗುವುದನ್ನು ನಾವು ನೋಡಬಹುದು. ಕೋಟ್ಯವಧಿ ವರುಷಗಳ ಹಿಂದೆ ಭೂಮಿಯಮೇಲೆಲ್ಲ ಅಗ್ನಿಪಾಷಾಣಗಳೆ