ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಮ್ಮ ಮನೆ ಇದ್ದಾಗ ಈಗಿನಗಿಂತ ಬಹಳ ಮಳೆಯಾಗುತ್ತಿದ್ದಿತು. ಗಾಳಿಯ ಬಹಳ ಆದುದರಿಂದ ಈ ಅಗ್ನಿ ಪಾಷಾಣಗಳು ಸವೆದು ಅದರ ಪುಡಿಯು ಆಗಿನ ಸಮುದ್ರಗಳಲ್ಲಿ ಕೂಡಿಬೀಳುವುದು. ಮೊದಲು ಒಂದು ತರ ; ಅದರಮೇಲೆ ಮತ್ತೊಂದು ; ಆಮೇಲೆ ಇನ್ನೊಂದು. ಹೀಗೆ ಅನೇಕ ತರಗಳಾಗಲು ಕೆಳಗಿನ ತರವು ಒತ್ತಲ್ಪಟ್ಟು ಗಟ್ಟಿಯಾಗುವುದು, ಎಂದರೆ ಕಲ್ಲಾಗುವುದು. ಆ ತರವು ಕುಳಿತಾಗ ಅದರಲ್ಲಿ ಸಿಕ್ಕ ಜೀವಜಂತುಗಳ ಅವಶೇಷಗಳು ಅದರಲ್ಲಿ ಉಳಿಯುವವು. ಮುಂದೆ ಈ ಸಮುದ್ರಗಳೆಲ್ಲ ಒಣಗಲು ಈ ಕಲ್ಲುಗಳೆಲ್ಲ ಹೊರಗೆ ಬರುವವು. ಈಗ ನಾವು ನೋಡುವ ಕಲ್ಲುಗಳೆಲ್ಲ ಹೀಗೆ ಆದವುಗಳೆ. ಭೂಮಿಯ ಅಂತರ್ಭಾಗವು ಆರುತ್ತ ಹೋದಂತೆ ಮೇಲ್ಬಾಗದ ಮೇಲೆ ನಿರಿಗೆಗಳು ಬೀಳುವವು. ಇವೇ ಪರ್ವತಗಳಾಗುವವು. ಮೊದಲು ಭೂಮಿಯ ಎಲ್ಲ ಭಾಗದಮೇಲೆ ಹರಡಿದ ಸಮುದ್ರವು ಬದಿಗಾಗಿ ಕೆಲವು ಭೂಖಂಡಗಳಾಗುವವು; ನದಿಗಳಾಗುವವು. ಈ ನದಿಗಳು ತಮ್ಮ ಉಗಮ ಸ್ನಾನದಿಂದ ತಂದುಬಿಟ್ಟ ರೇವೆಯಿಂದ ಈಗ ನಾವು ನೋಡುವ ಬೆಳೆಯುಳ್ಳ ಪ್ರದೇಶಗಳಾಗುವವು. ಹೀಗೆ ನಾವು ನೋಡುವ ಮಣ್ಣು ಎರಡುಸಾರಿ ಕುಟ್ಟಿದ ಕಲ್ಲಿನ ಪುಡಿಯಾಗಿದೆ. ಈ ಮಣ್ಣಿನಲ್ಲಿಯೆ ಗಿಡಗಂಟಿಗಳು ಬೆಳೆಯುವವು. ಈ ಉದ್ದಿಜಗಳೆ ಪ್ರಾಣಿಗಳ ಜೀವನ, ಈ ಭೂಮಿಯಮೇಲೆ ಜೀವನವು ಪ್ರಾರಂಭವಾಗಿ ಮೂರು ಲಕ್ಷ ವರುಷಗಳು ಆಗಿರುತ್ತವೆಂದು ಭೂಗರ್ಭಶಾಸ್ತ್ರವು ಹೇಳುತ್ತದೆ. ಭೂಮಿಯು ತನ್ನ ಸುತ್ತಲೂ ೨೪ ಗಂಟೆಗಳಲ್ಲಿ ಒಂದು ಸುತ್ತು ತಿರುಗುತ್ತದೆ. ಆಗ ನಮಗೆ ಆಕಾಶವೆಲ್ಲವೂ ತಿರುಗಿದಂತೆ ಕಾಣುತ್ತದೆ. ಇದಕ್ಕೆ ದೈನಂದಿನ ಗತಿಯೆನ್ನುತ್ತಾರೆ. ಅದು ಸೂರ್ಯನ ಸುತ್ತಲೂ ೩೬೫ ದಿವಸಗಳಲ್ಲಿ ಒಂದು ಸುತ್ತು ತಿರುಗುತ್ತದೆ. ಇದಕ್ಕೆಯೆ ವರ್ಷವೆನ್ನುತ್ತಾರೆ. ಮೊತ್ತಮೊದಲು ಭೂಮಿಯು ಸೂರ್ಯನಿಂದ ಇಷ್ಟು ದೂರದಲ್ಲಿದ್ದಿದ್ದಿಲ್ಲ. ಆಗ ಈ ಅವಧಿಗಳು ಇದಕ್ಕೂ ಬಹಳ ಸಣ್ಣವಿದ್ದವು. ಪ್ರತಿ ನೂರುವರುಷಕ್ಕೆ ದಿವಸದ ಅಳತೆಯು ೪ ಸೆಕಂಡುಗಳಿಂದ ದೊಡ್ಡದಾಗುವುದೆಂದು ತಿಳಿದು ಬಂದಿದೆ.