________________
೫೭ ನಮ್ಮ ಮನೆ ಹಾರಿಹೋಗುವುದು. ಆದುದರಿಂದ ರಾತ್ರಿಗಳು ದೊಡ್ಡವಿದ್ದಾಗ ಆಯಕ್ಕಿಂತ ವ್ಯಯವು ಹೆಚ್ಚಾಗುವುದರಿಂದ ಭೂಮಿಯು ದುಡ್ಡನ್ನು ಕಳೆದುಕೊಂಡ ದರಿದ್ರನಂತೆ ಚಳಿಯಲ್ಲಿ ನಡುಗುವುದು. ಅದೇ, ಹಗಲುಗಳು ದೊಡ್ಡವಿದ್ದಾಗ ದಿನಾಲು ಸೂರ್ಯನಿಂದ ಬಂದ ಉಷ್ಣತೆಯನ್ನು ಸಂಗ್ರಹಿಸಿ ಅರ್ಧಿಷ್ಟ (ದುಡ್ಡಿನ ಕಾವು) ವಿದ್ದ ಶ್ರೀಮಂತನಂತೆ ಸುಖಬಡುವುದು. ಮಳೆಗಾಲವು ನಿಜವಾದ ಋತುವಲ್ಲ. ನಮ್ಮಲ್ಲಿ ಮಳೆಗಳು ಕೆಲವು ತಿಂಗಳು ಮಾತ್ರ ಬೀಳುವುದರಿಂದ, ಅದಕ್ಕೆ ನಾವು ಮಳೆಗಾಲವೆನ್ನುತ್ತೇವೆ. ವಿಲಾಯತಿಯಲ್ಲಿ ಹನ್ನೆರಡು ತಿಂಗಳೂ ಮಳೆ ಬೀಳ ತ್ತಿರುವುದು, ಮಳೆ ಬೀಳಬೇಕಾದರೆ ಮೋಡಗಳು ಬರಬೇಕಾಗುವುದು. ಈ ಮೋಡಗಳು ಆಗಬೇಕಾದರೆ ಸಮುದ್ರದ ನೀರ ಕಾಯಬೇಕಾಗುವುದು. ವೈಶಾಖದವರೆಗೆ ಹೀಗೆ ಮೋಡಗಳು ಹ ಟ್ಟುವವು. ಜೈಷದಿಂದ ಅವು ನಮ್ಮಲ್ಲಿ ಬರಲಾರಂಭಿ ಸುವವು. ಆಶ್ವಿನದವರೆಗೆ ನಾಲ್ಕು ತಿಂಗಳು ಮಳೆಗರೆಯುತ್ತಿರುವವು. ಬೇಸಿಗೆಯಲ್ಲಿ ಎಳೆಬೇಸಿಗೆ (ವಸಂತ), ತೀಕ್ಷ್ಯ ಬೇಸಿಗೆ (ಗ್ರೀಷ್ಮ), ಮುದಿಬೇಸಿಗೆ (ವರ್ಷಋತು) ಎಂದೂ, ಚಳಿಗಾಲದಲ್ಲಿ ಮರಿಚಳಿ (ಶರದೃತು), ಬಲಿತ ಚಳಿ (ಹೇಮಂತಋತು), ಹಲ್ಲುಬಿದ್ದ ಚಳಿ (ಶಿಶಿರಋತು) ಎಂದೂ ಮರು ಮೂರು ಭಾಗಗಳನ್ನು ಮಾಡುವರು. ಇರಲಿ, ಒಟ್ಟಿಗೆ ನಮ್ಮ ಭೂಮಿಯು ಅತ್ಯಂತ ಸೋಜಿಗವಾದ ವಸ್ತು ವಾಗಿದೆ. ಸೂರ್ಯನ ಸುತ್ತಲೂ ಭೂಮಿಯಂತಹ ಅನೇಕ ಗ್ರಹಗಳು ತಿರುಗುತ್ತಿದ್ದರೂ ಮನುಷ್ಯನ ಆವಾಸಕ್ಕೆ ಯೋಗ್ಯವಾದ ಸ್ಥಾನವೆಂದರೆ ಇದೊಂದೆ. ಇದು ದೇವರ ಎಂತಹ ಮಹಿಮೆಯು !