________________
೯ ನೆಯ ಪ್ರಕರಣ ಸೂರ್ಯನ ಸಂಸಾರ ಅಥವಾ ಗ್ರಹಗಳು ಸೂರ್ಯನು ಒಬ್ಬ ಗೃಹಸ್ಥನೆಂದು ಭಾವಿಸಿದರೆ, ಆತನ ಸುತ್ತಲೂ ತಿರುಗುವವರು ಅವನ ಕುಟುಂಬಿಕರೆಂದು ಹೇಳಬಹುದು. ಮನುಷ್ಯನ ಕುಟುಂಬದಲ್ಲಿಯಂತೆ, ಸೂರ್ಯನ ಮನೆತನದಲ್ಲಿಯೂ ಸಣ್ಣ ದೊಡ್ಡವರಿರುವರು. ಸೂರ್ಯನ ಸುತ್ತಲೂ ಒಟ್ಟು ಎಂಟು ಗ್ರಹಗಳಿರು ವುವು. ಅವು ಯಾವುವೆಂದರೆ:-(೧) ಬುಧ, (೨) ಶುಕ್ರ, (೩) ಭೂಮಿ, (೪) ಮಂಗಳ, (೫) ಗುರು, (೬) ಶನಿ, (೭) ಯುರೇನಸ್, (೮) ನೆಪ್ಯೂನ್, ಮಂಗಳ ಮತ್ತು ಗುರುಗಳ ನಡುವೆ ೭೦೦ ಕುದ ಗ್ರಹಗಳ ಗುಂಪೊಂದು ಇರುವುದು. ಇವೆಲ್ಲವೂ ಕ್ರಮವಾಗಿ ಸೂರ್ಯನಿಂದ ಕೆಲವು ಅಂತರದ ಮೇಲೆ ಸೂರ್ಯನ ಸುತ್ತಲೂ ನಿಯಮಿತಕಾಲದಲ್ಲಿ ಪ್ರದಕ್ಷಿಣೆಹಾಕುವವು. ಅಲ್ಲದೆ, ತಮ್ಮ ಸುತ್ತಲೂ ತಾವು ತಿರುಗುವವು. ಇವುಗಳಲ್ಲಿ ಮೂರು ಭಾಗಗಳನ್ನು ಮಾಡಬಹುದು. ಬುಧ, ಶುಕ್ರ, ಸೃದ್ಧಿ ಮತ್ತು ಮಂಗಳ ಇವುಗಳದೊಂದು ಗುಂಪು, ಅದರ ತರುವಾಯ ಎರಡುಸಾವಿರಕ್ಕಿಂತ ಹೆಚ್ಚು ಚಿಕ್ಕ ಚಿಕ್ಕ ಗ್ರಹಗಳದೊಂದು ದೊಡ್ಡ ತಂಡ. ಅವಾದ ಬಳಿಕ ಗುರು, ಶನಿ, ಯುರೇನಸ್ ಮತ್ತು ನೆಮ್ರನ್-ಈ ನಾಲ್ಕು ಗ್ರಹಗಳದೊಂದು ಗುಂಪು ಮೊದಲನೆಯ ಗುಂಪಿನೊಳಗಿನ ಗ್ರಹಗಳು ಸಾಮಾನ್ಯಾಕಾರದವು. ಎರಡನೆಯ ಗುಂಪಿನೊಳಗಿನ ಗ್ರಹಗಳು ತೀರ ಚಿಕ್ಕವು. ಮೂರನೆಯ ಗುಂಪಿನೊಳಗಿನ ಗ್ರಹಗಳು ತೀರ ದೊಡ್ಡವು. ಈ ಗ್ರಹಗಳಲ್ಲಿ ಕೆಲವುಗಳಿಗೆ ಉಪಗ್ರಹಗಳು ಇರುತ್ತವೆ. ಅವು ಆಯಾ ಗ್ರಹದ ಸುತ್ತಲೂ ತಿರುಗುತ್ತವೆ. ಬುಧ ಮತ್ತು ಶುಕ್ರರಿಗೆ ಉಪಗ್ರಹಗಳಿರುವುದಿಲ್ಲ. ಪೃಥ್ವಿಯ ಸುತ್ತಲೂ ಚಂದ್ರನೆಂಬುದೊಂದು ಉಪಗ್ರಹವಿರುವುದು. ಮಂಗಳನ ಸುತ್ತಲೂ ಚಂದ್ರನಿಗಿಂತ ಬಹಳ ಚಿಕ್ಕವಾದ ಎರಡು ಉಪಗ್ರಹಗಳಿರುತ್ತವೆ. ಚಿಕ್ಕ ಚಿಕ್ಕ ಗ್ರಹಗಳಿಗೆ ಉಪಗ್ರಹಗಳಿರುವುದಿಲ್ಲ. ದೊಡ್ಡ ಗ್ರಹಗಳಲ್ಲಿ ಗುರುವಿಗೆ ೯ ಉಪಗ್ರಹಗಳಿರುತ್ತವೆ; ಅವುಗಳಲ್ಲಿ ೪ ದೊಡ್ಡವು, ೫ ಸಣ್ಣವು. ಶನಿಗೆ ಹತ್ತು ಉಪಗ್ರಹಗಳಿರುತ್ತವೆ; ಅಲ್ಲದೆ ಅದರ