ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೂರ್ಯನ ಸಂಸಾರ ಅಥವಾ ಗ್ರಹಗಳು ಸುತ್ತಲೂ ಚಿಕ್ಕ ಚಿಕ್ಕ ಉಪಗ್ರಹಗಳ ದೊಡ್ಡ ಗುಂಪೇ ತಿರುಗು ತಿರುತ್ತದೆ. ಯುರೇನಸದ ಸುತ್ತಲೂ ನಾಲ್ಕು, ನೆಪ್ಪನದ ಸುತ್ತಲೂ ಒಂದು-ಹೀಗೆ ಉಪಗ್ರಹಗಳಿರುತ್ತವೆ. ಹೀಗೆ ಸೂರ್ಯನ ಸಂಸಾರದ ವಿಸ್ತಾರವು ಬಹಳ ದೊಡ್ಡದಿರುವುದು. ಇವುಗಳಲ್ಲಿ ಗುರು ಗ್ರಹದಂತಹ ೮೦ ಸಾವಿರ ಮೈಲು ವ್ಯಾಸವುಳ್ಳ ಗುರು (ದೊಡ್ಡ) ಗ್ರಹವಿದ್ದರೆ ಮಂಗಳನ ಉಪಗ್ರಹಗಳ ವ್ಯಾಸವು ೫೦ ಮೈಲುಗಳನ್ನು ಮಿಕ್ಕುವುದಿಲ್ಲ. ಕೆಲವು ಕ್ಷುದ್ರ ಗ್ರಹಗಳಂತೂ ಒಂದೆರಡು ಮೈಲುಗಳು ಮಾತ್ರ ವ್ಯಾಸವುಳ್ಳವು ಗಳಾಗಿವೆ. ಹೀಗೆ ಸೂರ್ಯನ ಮನೆತನದಲ್ಲಿ ಚಿಕ್ಕವರು ದೊಡ್ಡವರು ಇರುವಂತೆಯೆ, ಹರೆಯದವರೂ, ಮುದುಕರೂ ಮೃತಪ್ರಾಯರೂ ಇರುವರು. ಮೇಲೆ ಹೇಳಿದ ಗುರುಗ್ರಹವು ಇಷ್ಟು ದೊಡ್ಡದಿರುವುದರಿಂದ ಅದು ಇನ್ನೂ ಪೂರ್ಣ ಆರಿರುವುದಿಲ್ಲ. ಸೂರ್ಯನಂತೆ ಅದಕ್ಕೆ ಸ್ವಲ್ಪ ಸ್ವಲ್ಪ ಕಾಶವಿದ್ದರೂ ಇರಬಹುದಾಗಿದೆ. ಇತ್ತಕಡೆಗೆ ಚಂದ್ರಗೋಲವೂ ಕ್ಷುದ್ರ ಗ್ರಹಗಳೂ ಎಂದೋ ಆರಿ ನಿರ್ಜಿವಿಗಳಾಗಿರಲಿಕ್ಕೆ ಸಾಕು. ಕೆಲವರು ಯಜಮಾನನ ನೆರೆಯಲ್ಲಿದ್ದರೆ, ಕೆಲವರು ಯಜಮಾನನ ಕಣ್ಣಿಗೆ ಸಹ ಕಾಣದಷ್ಟು ದೂರವಿರುವರು. ಶನಿಯಂತೂ ಬೇರೆ ಮನೆಯನ್ನೆ ಮಾಡು ವವರಂತೆ, ಹತ್ತು ಉಪಗ್ರಹಗಳಲ್ಲದೆ ಲಕ್ಷಾಂತರ ಕ್ಷುದ್ರಗ್ರಹಗಳಿಂದ ಕೂಡಿದ ವಲಯದಿಂದ ಮೆರೆಯುವನು. ಇಂತಹ ಸೂರ್ಯನ ಕುಟುಂಬದಲ್ಲಿ ಭೂಲೋಕವು ಸಣ್ಣದೂ ಅಲ್ಲ, ದೊಡ್ಡದೂ ಅಲ್ಲ; ಸನಿಯವೂ ಅಲ್ಲ, ದೂರವೂ ಅಲ್ಲ; ನಿಪುತ್ರಕವೂ ಅಲ್ಲ, ಬಹು ಪುತ್ರಕವೂ ಅಲ್ಲ. ಹೀಗೆ ಮಧ್ಯವರ್ತಿ ಯಾಗಿರುವುದು, - ಹೀಗೆ ಸೂರ್ಯನ ಮನೆಯ ವಿಸ್ತಾರವು ಒಟ್ಟು ೬,೦೦೦,೦೦೦,೦೦೦ ಮೈಲು ವ್ಯಾಸವುಳ್ಳದ್ದಾಗಿರುವುದು. ಸೂರ್ಯನ ಎಲ್ಲಕ್ಕೂ ಸವಿಾಪದ ಗ್ರಹವೆಂದರೆ ಬುಧನು, ಸೂರ್ಯನಿಂದ ಈ ಗ್ರಹದ ಅಂತರವು ಮೂರೂ ಕಾಲು ಕೋಟಿ ಮೈಲು ಇರುವುದು. ಈ ಗ್ರಹದ ವ್ಯಾಸವು ೩೦೦೦ ಮೈಲುಗಳು ; ಎಂದರೆ ಇದು ಭೂಗೋಲದ ೧೯ನೆಯ ಭಾಗದಷ್ಟು ಮಾತ್ರ ಇರುವುದು. ಇದು ಸೂರ್ಯನ ಸೂತ್ತಲೂ ೮೮ ದಿವಸಗಳಿಗೊಮ್ಮೆ ತಿರುಗು ತದೆ. ಎಂದರೆ ಇದರ ವೇಗವು ಒಂದು ನಿಮಿಷಕ್ಕೆ ೨ ಮೈಲು, ತನ್ನ