________________
ಸೂರ್ಯನ ಸಂಸಾರ ಅಥವಾ ಗ್ರಹಗಳು ಹೋಗುವ ಬಂಡಿಯು ಹಿಂದೆ ಹೋದಂತೆ ಕಾಣುವುದಿಲ್ಲವೆ? ಭೂಮಿಯು ಸೂರ್ಯನ ಸುತ್ತಲು ತಿರುಗುವುದು. ಹೀಗೆ ತಿರುಗುವ ಭೂಮಿಯ ಮೇಲಿಂದ ನಾವು ಉಳಿದ ಗ್ರಹಗಳ ಕಡೆಗೆ ನೋಡುವೆವು. ಅದರಿಂದಲೆ ಗ್ರಹಗಳು ಒಮ್ಮೊಮ್ಮೆ ಹಿಂಬರಿಕೆಯಾಗಿ ಹೋದಂತೆ ತೋರುವವು. ಬುಧನು ತನ್ನ ಕಕ್ಷೆಯ ಯಾವ ಭಾಗದಲ್ಲಿದ್ದರೂ ಭೂಮಿಯ ಮೇಲಿನಿಂದ ನೋಡುವವರಿಗೆ ಸೂರ್ಯನಿಂದ ಕೆಲವೊಂದು ಅಂತರದ ಒಳಗೆಯೆ ಇರುವಂತೆ ಕಾಣುವನು. ಇದರಿಂದ ಅವನು ಸೂರ್ಯೋದಯ ವಾದ ಕೂಡಲೆ ಉದಯಿಸಿ ಸೂರ್ಯಾಸ್ತದನಂತರ ಕೆಲವುವೇಳೆ ಮಾತ್ರ ಪಶ್ಚಿಮ ಕ್ಷಿತಿಜದಮೇಲೆ ಕಾಣುವನು. ಅಧವಾ ಸೂರ್ಯೊದಯಕ್ಕೆ ತುಸು ಮುಂಚೆ ಉದಯಿಸಿ ಸೂರ್ಯೋದಯದವರೆಗೆ ಪೂರ್ವಕ್ಕೆ ಕಾಣಿಸು ವನು. ಒಮ್ಮೊಮ್ಮೆಯಂತೂ ಅಮಾವಾಸ್ಯೆಯ ಚಂದ್ರನಂತೆ ಸೂರ್ಯನ ಸಂಗಡಲೇ ಉದಯಿಸಿ ಅವನ ಸಂಗಡಲೆ ಮುಳುಗುವುದರಿಂದ ಕಾಣದಾಗು ವನು. ಇದಕ್ಕೆ ನಾವು ಅಸ್ತ್ರವನ್ನು ತೇವೆ. ಹೀಗೆ ಅಸ್ತನಾದಾಗ ಸೂರ್ಯನ ಆಚೆಗಿರುವನು. ಇಲ್ಲವೆ ಸೂರ್ಯನಿಗೂ ನಮಗೂ ನಡ ವೆ ಇರುವನು. ಹೀಗಿದ್ದಾಗ ಒಮ್ಮೊಮ್ಮೆ ಸೂರ್ಯಬಿಂಬದಮೇಲೆ ಕಪ್ಪು ಚುಕ್ಕೆಯಂತೆ ಕಾಣುವನು. ಬುಧನ ಮುಂದಿನ ಗ್ರಹವೆಂದರೆ ಶುಕ್ರನು, ಸೂರ್ಯನಿಂದ ಇವನ ಅಂತರವು ೬೭೦ ಲಕ್ಷ ಮೈಲುಗಳು. ಶುಕ್ರಗೋಲದ ವ್ಯಾಸವು ೬,೭೦೦ ಮೈಲುಗಳು ಎಂದರೆ ಸಾಧಾರಣವಾಗಿ ಭೂಮಿಯಷ್ಟೆ ಇರುವನು. ಈತನ ಪ್ರದಕ್ಷಿಣಾ ಕಾಲವು ೨೨೫ ದಿವಸಗಳು. ಅಕ್ಷ ಪ್ರದಕ್ಷಿಣೆಯ ಕಾಲವೂ ಅಷ್ಟೆ, ಆದುದರಿಂದ ಬುಧನಂತೆಯೆ ಶುಕ್ರನ ಸ್ಥಿತಿ. ಒಂದು ಗೋಲಾರ್ಧದಮೇಲೆ ನಿತ್ಯವಾದ ಬೇಸಿಗೆ ; ಇನ್ನೊಂದರಲ್ಲಿ ಅಚ್ಚಳಿಯದ ಹಿಮಕಾಲ. ಬುಧನ ಕಲೆಗಳಂತೆಯೆ ಶುಕ್ರನ ಕಲೆಗಳು, ಬುಧನಂತೆಯೆ ಶುಕ್ರನೂ ಒಮ್ಮೊಮ್ಮೆ ವಕ್ರನಾಗಿ ಚಲಿಸುವನು. ಅ ವ ನ೦ತೆ ಯೆ ಮಂಜಾವು ಸಂಜೆಗಳಲ್ಲಿ ಮಾತ್ರ ಕಾಣಿಸುವನು. ಶುಕ್ರನು ನಿಮಿಷಕ್ಕೆ ಮೈಲಿನಂತೆ ಓಡುತ್ತಿರುವನು. ಶುಕ್ರಲೋಕದಲ್ಲಿಯ ಒಂದು ದಿವಸವೆಂದರೆ ನಮ್ಮ ೨೨೫ ದಿವಸಗಳು. ಒಂದು ವರ್ಷವೆಂದರೂ ಅದೇ ಅವಧಿಯು.