ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೂರ್ಯನ ಸಂಸಾರ ಅಥವಾ ಗ್ರಹಗಳು ೬೩. ಏಕೆಂದರೆ ಅಮಾವಾಸ್ಯೆಯ ಚಂದ್ರನಂತೆ ಇವನು ಕಾಣದಾಗಬೇಕಾದರೆ ನಮಗೂ ಸೂರ್ಯನಿಗೂ ನಡುವೆ ಬರಬೇಕಾಗುವುದ , ಸೂರ್ಯನಿಂದ ನಮಗಿಂತ ದೂರದಲ್ಲಿರುವ ವಸ್ತುವು ಹೀಗೆ ಅಡ್ಡ ಬರುವುದು ಹೇಗೆ ? ಅದರಿಂದ ಮಂಗಳನಿಗೆ ಅಮಾವಾಸ್ಯೆಯಿಲ್ಲ. ತನ್ನ ಪ್ರದಕ್ಷಿಣಾ ಮಾರ್ಗದ ಯಾವ ಭಾಗದಲ್ಲಿ ಅವನಿದ್ದರೂ ಸೂರ್ಯನಿಂದ ಪ್ರಕಾಶಿತವಾದ ಇವನ ಗೋಲಾರ್ಧದ ಬಹುಭಾಗವು ನಮಗೆ ಕಾಣುವುದು. ಇವನು ಸೂರ್ಯನ ಆಚೆಗೆ ಹೋದರೂ ಪೌರ್ಣಿಮೆಯು; ಸೂರ್ಯ ಮಂಗಳರ ನಡುವೆ ಭೂಮಿ ಬಂದರೂ ಪೌರ್ಣಿಮೆಯು. ಆದುದರಿಂದ ಪೌರ್ಣಿಮೆಯಿಂದ ಚತುರ್ದಶಿ, ಮತ್ತೆ ಚತುರ್ದಶಿಯಿಂದ ಪೌರ್ಣಿಮೆ, ಇಷ್ಟೆ ಕಲೆಗಳು ಆಗುವವು. ಬರೀ ಕಣ್ಣಿಗೆ ರಕ್ತವರ್ಣನಾಗಿ ತೋರುವುದರಿಂದ ಕ್ರೂರ ಗ್ರಹವೆಂದೂ ಯುದ್ಧಾಧಿಪತಿಯೆಂದೂ ಇವನು ಕರೆಯಲ್ಪಟ್ಟಿರುವನು. - ದುರ್ಬಿನುಗಳಲ್ಲಿ ಮಂಗಳನ ದೃಶ್ಯವು ಮಹತ್ವದ್ದಾಗಿದೆ. ಎರಡೂ ತುದಿಗೆ ಬಿಳಿಯ ವೇಷ್ಟನಗಳಿದ್ದು ನಡುವೆ ಕಾಲುವೆಗಳಂತಹ ಕಪ್ಪು ಗೆರೆಗಳು ಕಾಣುವವು. ಇವು ನಿಜವಾಗಿಯೂ ಕಾಲುವೆಗಳಾಗಲಿ ಕಾಲುವೆಗಳ ಗುಂಟ ಹಬ್ಬಿದ ಹೊಲಗಳಾಗಲಿ ಇರಬೇಕೆಂದೂ, ಈ ಕಾಲುವೆಗಳು ನಿಜವಾಗಿ ಮಂಗಳನ ಮೇಲಿನ ಜನವಸತಿಯ ದ್ಯೋತಕವೆಂದೂ ತಿಳಿಯಲ್ಪಟ್ಟಿದೆ. ಈ ಕಾಲುವೆಗಳು ಮೊನ್ನೆ ಮೊನ್ನೆ ಎಂದರೆ ೧೮೭೭ನೆಯ ಇಸವಿಯಲ್ಲಿ ಗೊತ್ತುಹಚ್ಚಲ್ಪಟ್ಟಿವೆ. ಮಂಗಳನ ಮೇಲಿರುವ ಜನರೊಡನೆ ವ್ಯವಹಾರ ವನ್ನು ನಡೆಸಬೇಕೆಂದು ಅನೇಕ ಸಾಹಸಿಗಳು ಈಗ ಪ್ರಯತ್ನಿಸುತ್ತಿರು ವುದಕ್ಕೂ ಇದೇ ಕಾರಣ. ಆದರೆ ಮಂಗಳನ ಮೇಲೆ ವಾತಾವರಣವಿದ್ದರೂ ಅದು ಬಹಳ ವಿರಲವಾಗಿದೆ. ಅದರಲ್ಲಿ ಹೆಚ್ಚಿನ ಮೋಡಗಳು ನಿಲ್ಲಲಾರವು. ಅದರಿಂದ ಮಂಗಳನ ಎಲ್ಲ ಭಾಗಗಳಲ್ಲಿಯೂ ವಿಜಾಪುರ ಜಿಲ್ಲೆಯ ಡೋಣಿ ಸಾಲಿನಲ್ಲಿಯಂತೆ ಮಳೆಯ ಅಭಾವವು. ಆದುದರಿಂದ ಮಂಗಳನಲ್ಲಿ ವಾಸ ಮಾಡುವ ಜನರು ಅದರ ಎರಡು ಧ್ರುವಗಳ ಹತ್ತರವಿರುವ ಬರ್ಫದ ವೇಷ್ಟನಗಳು ಕರಗಿ ಹರಿಯುವ ಪ್ರವಾಹವನ್ನು ತಮ್ಮ ಬೆಳೆಗಳಿಗಾಗಿ ಉಪಯೋಗಿಸಿದ್ದರೆ ಆಶ್ಚರ್ಯವೇನು ? ನಾವು ಇದ್ದಷ್ಟು ನದಿಗಳಿಗೆ ಸಹ ಒಡ್ಡು ಹಾಕುವುದಿಲ್ಲ. ಸಾವಿರಾರು ಮೈಲುಗಳ ಆಚೆಯಲ್ಲಿರುವ ಧ್ರುವ