ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೂರ್ಯನ ಸಂಸಾರ ಅಥವಾ ಗ್ರಹಗಳು ಸುತ್ತಲೂ ತಿರುಗಿ ಹನ್ನೆರಡು ವರುಷಗಳಲ್ಲಿ ಒಂದು ಪ್ರದಕ್ಷಿಣೆಯನ್ನು ಮುಗಿಸುತ್ತದೆ. ತನ್ನ ಸುತ್ತಲೂ ತಾನು ಹತ್ಯೆ ಗಂಟೆಗಳಲ್ಲಿ ಒಂದು ಸುತ್ತು ತಿರ`ಗುತ್ತದೆ. ಎಂದರೆ ಗುರುಗ್ರಹದ ಮೇಲಿದ್ದವರಿಗೆ ದಿನಮಾನವು ೧೦ ಗಂಟೆಯ ದು. ವರ್ಷಮಾನವು ೧೨ ವರ್ಷಗಳದು. ಭೂಮಿಯಂತೆ ಇದು ಘನರೂಪವಾಗಿರದೆ ಇನ್ನೂ ವಾಯುರೂಪಸ್ಥಿತಿಯಲ್ಲಿಯೆ ಇರು ವುದು. ಇದರ ಸುತ್ತಲೂ ೯ ಉಪಗ್ರಹಗಳುಂಟು. ಅವುಗಳಲ್ಲಿ ಎಲ್ಲಕ್ಕೂ ದೊಡ್ಡದು ಮಂಗಳನಷ್ಟು ಇರ ವುದು. ಭೂಮಿಯ ಸುತ್ತಲೂ ಹೀಗೆ ೯ ಉ ಪ ಗ್ರ ಹ ಗ ಳು ತಿರುಗುತ್ತಿದ್ದರೆ ಎಷ್ಟು ಶೋಭೆಯಾಗಬಹುದು. ಒಂದೊಂದು ರಾತ್ರಿಯಲ್ಲಿ ನಾಲ್ಕಾರು ಚಂದ್ರಗಳು ! ಒಬ್ಬ ಚಂದ್ರನು ಪೂರ್ಣಬಿಂಬನಾದರೆ ಇನ್ನೊಬ್ಬನು ಅಷ್ಟಮಿಯ ಚಂದ್ರನಂತೆ ಅರ್ಧಬಿಂಬನು ! ಒಬ್ಬ ಚಂದ್ರನಿಗೆ ರಾತ್ರಿಯಲ್ಲಿ ಗ್ರಹಣವಿದ್ದರೆ, ಇನ್ನೊಬ್ಬ ಚಂದ್ರನ ಹಗಲು ಸೂರ್ಯನನ್ನು ಮರೆಮಾಡುವನು ! ಇಂತಹ ಎಷ್ಟೋ ದೃಶ್ಯಗಳು ಗುರುವಿನ ಮೇಲೆ ಕಾಣುತ್ತಿರಬಹ ದ . ಆದರೆ ಅವುಗಳನ್ನು ನೋಡುವ ಸ ದೈವವು ಯಾರಿಗೂ ಇಲ್ಲ. ಏಕೆಂದರೆ ಆತನು ವಾಯುರೂಪನಾಗಿಯೂ ಅತ್ಯುಷ್ಣ ರಾಗಿಯ ಇರುವನು. ಆದುದರಿಂದ ಅಲ್ಲಿ ಜೀವಿಗಳು ವಾಸಿಸಲಾರವು. ಮುಂದೆ ಅದು ತಣ್ಣಗಾದಮೇಲೆ ಮಾತ್ರ ಅಲ್ಲಿ ಪ್ರಾಣಿಗಳು ವಾಸಿಸುವ ಸಂಭವವಿದೆ. ಆತನ ಚಂದ್ರಗಳಲ್ಲಿ ನಾಲ್ಕು ದೊಡ್ಡ ಚಂದ್ರಗಳಮೇಲೆ ಪ್ರಾಣಿಗಳು ಇರಬಹ ದು. ಮುಂದಿನ ಗ್ರಹವೆ ಶನಿಯು, ಗುರುವಿನಂತೆ ಇದೂ ಬಹಳ ದೊಡ್ಡದು. ಎಂದರೆ ೭೫,೦೦೦ ಮೈಲು ವ್ಯಾಸವುಳ್ಳುದು, ಒಂದು ಸೆಕೆಂಡಿಗೆ ಆರು ಮೈಲುಗಳಂತೆ ಇದು ೩೦ ವರುಷಗಳಲ್ಲೊಮ್ಮೆ ಸಾವಕಾಶವಾಗಿ ಸೂರ್ಯನ ಸುತ್ತಲೂ ತಿರುಗುವುದು, ತನ್ನ ಸುತ್ತಲು ಮಾತ್ರ ಗುರುವಿನಂತೆ ಹತ್ಯೆ ಗಂಟೆಗಳಲ್ಲಿ ತಿರುಗುವುದು, ಸೂರ್ಯನಿಂದ ಇದರ ಅಂತರವು ೮೯ ಕೋಟಿ ಮೈಲುಗಳು. ಸೂರ್ಯನ ಪರಿವಾರಕ್ಕಿಂತಲೂ ಶನಿಯ ಪರಿವಾರವು ವಿಚಿತ್ರ ವಾದುದು, ಹತ್ತು ಉಪಗ್ರಹಗಳು ಹತ್ತು ಮಾರ್ಗವಾಗಿ ತಿರುಗುವವು. ಶನಿಯ ಸುತ್ತಲೂ ವಿಲಕ್ಷಣವಾದುದೊಂದು ವಲಯವು ಕಾಣುವುದು. ಇದಲ್ಲ ಒಂದೇ ಹಾಸಿಗೆಯಾಗಿರದೆ ಇದರಲ್ಲಿ ನಡು ನಡುವೆ ಭಾಗಗಳಿರುವವು.