ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

LL ಜ್ಯೋತಿಶ್ಯಾಸ್ತ್ರ ಈ ಭಾಗಗಳು ಒಂದನ್ನೊಂದು ಜಗ್ಗುವುದರಿಂದಲೂ ಎಲ್ಲವೂ ಶನಿಯಿಂದ ಜಗ್ಗಲ್ಪಡುವುದರಿಂದಲೂ ಅವು ಹೆಚ್ಚು ಕಡಿಮೆಯಾಗದೆ ಹಾಗೆಯೆ ಉಳಿಯು ವವು. ಶನಿಯ ಮೂಲಸ್ವರೂಪವು ನಮಗೆ ಕಾಣುವುದಿಲ್ಲ. ಅದರಮೇಲಿನ ವಾತಾವರಣವು ಮಾತ್ರ ನಮಗೆ ಕಾಣುತ್ತದೆ. ಅದರಲ್ಲಿ ಘನವಾದ ಮೋಡಗಳಿರುತ್ತವೆ. ಇಲ್ಲಿಗೆ ಬರಿಯ ಕಣ್ಣಿಗೆ ಕಾಣುವ ಗ್ರಹಗಳು ತೀರಿದಂತಾದವು. ಇನ್ನುಳಿದ ಎರಡು ಗ್ರಹಗಳು ದುರ್ಬಿನಿನಲ್ಲಿ ಮಾತ್ರ ಕಾಣುತ್ತವೆ. ಸೂರ್ಯನಿಂದ ಯುರೇನಸದ ಅಂತರವು ೧೮೦ ಕೋಟಿ ಮೈಲುಗಳು. ವ್ಯಾಸವು ೩ಸಾವಿರ ಮೈಲುಗಳು, ಪ್ರದಕ್ಷಿಣಾಕಾಲವು ೮೪ ವರ್ಷಗಳು. ಅಕ್ಷ ಪ್ರದಕ್ಷಿಣಾ ಕಾಲವು ನಿಶ್ಚಿತವಾಗಿ ತಿಳಿದಿಲ್ಲ. ೧೮೪೬ನೆಯ ಇಸವಿಯಲ್ಲಿ ಗ್ಯಾಲೆ (Galle) ಎಂಬವನಿಗೆ ನೆಮ್ರನ್ ಎಂಬ ಮತ್ತೊಂದು ಗ್ರಹವು ಕಾಣಿಸಿತು. ಅದಕ್ಕಿಂತ ಮೊದಲು ಕೆಲವು ಗಣಿತಶಾಸ್ತ್ರಜ್ಞರು ಆಕಾಶದಲ್ಲಿ ಯುರೇನಸದ ಆಚೆಗೆ ಒಂದು ಗ್ರಹವಿರಬೇಕೆಂದು ಲೆಕ್ಕದಿಂದಲೇ ತರ್ಕಿಸಿದ್ದರು. ಸೂರ್ಯನಿಂದ ಈ ಗ್ರಹದ ಅಂತರವು ೨೮೦ ಕೋಟಿ ಮೈಲುಗಳು. ಇದಕ್ಕೆ ಸೂರ್ಯನ ಸುತ್ತಲೂ ತಿರುಗುವುದಕ್ಕೆ ೧೬೫ ವರುಷಗಳು ಬೇಕಾಗುವವು. ಇದರ ವ್ಯಾಸವು ೩೩ ಸಾವಿರ ಮೈಲುಗಳು. ಅಕ್ಷ ಪ್ರದಕ್ಷಿಣಾ ಕಾಲವು ಇನ್ನೂ ನಿಶ್ಚಿತವಾಗಿ ತಿಳಿದಿಲ್ಲ. ಇದಕ್ಕೆ ಒಂದು ಉಪಗ್ರಹವಿದ್ದು ಅದು ಸೂರ್ಯಮಾಲೆಯ ಎಲ್ಲ ಘಟಕಗಳಿಗೆ ಅಪವಾದವಾಗಿರುವಂತೆ ಯಾವಾ ಗಲೂ ಹಿಂಬರಿಕೆಯಾಗಿ ತಿರುಗುವುದು. ಸೂರ್ಯನಿಂದ ಮೇಲೆಹೇಳಿದ ಗ್ರಹಗಳ ಅಂತರಗಳನ್ನು ಪರಿಶೀಲಿಸಿದರೆ ಒಂದು ವೈಲಕ್ಷಣ್ಯವು ಕಂಡುಬರುವುದು. ಅದೇನೆಂದರೆ: ೦,೩೬,೧೨,೨೪,೪೮,೯೬,೧೯೨, ೩೮೪ ಈ ಅಂಕೆಗಳಿಗೆ ಪ್ರತಿಯೊಂದಕ್ಕೆ ನಾಲ್ಕು ಕೂಡಿಸಿದರೆ ೪,೭,೧೦,೧೬, ೨೮,೫೨,೧೦೦,೧೯೬,೩೮೮ ಬರುವವು. ಇವುಗಳಲ್ಲಿ ಭೂಮಿಯ ಅಂತರವು ೧೦ ಎಂದು ತಿಳಿದರೆ, ಉಳಿದವುಗಳು ಅನುಕ್ರಮವಾಗಿ ಬುಧ (೪), ಶುಕ್ರ (೭), ಮಂಗಳ (೧೬), ಕ್ಷುದ್ರಗ್ರಹಗಳ ಗುಂಪು (೨೮), ಗುರು (೫೨), ಶನಿ (೧೦೦), ಯುರೇನಸ್ (೧೯೬),