ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೂರ್ಯನ ಸಂಸಾರ ಅಥವಾ ಗ್ರಹಗಳು ನೆಪ್ನ (೩೮೮) ಗಳ ಅಂತರಗಳಾಗಿ ಕಂಡುಬರುವವು. ನೆಮ್ರನದ ಶೋಧದಲ್ಲಿ ಇದು ಬಹಳ ಸಹಾಯಕಾರಿಯಾಯಿತು. ಇಪ್ಪತ್ತೆಂಟಕ್ಕ ಸಲ್ಲುವುದೊಂದು ಗ್ರಹವಿರಬೇಕಲ್ಲವೆ? ಈ ಅಂತರದಮೇಲೆ ಚಂದ್ರನಷ್ಟು ದೊಡ್ಡ ಗ್ರಹವಿದ್ದರೂ ಬರಿಯ ಕಣ್ಣಿಗೆ ಕಾಣಬಹುದಾಗಿತ್ತು. ಬಹಳ ದಿವಸ ಗಳವರೆಗೆ ಇದೂ ಒಂದು ಗೂಢವಾಗಿತ್ತು. ಮುಂದೆ ಶೋಧಮಾಡು ವಾಗ ಶಾಸ್ತ್ರಜ್ಞರಿಗೆ ನಾವು ಹಿಂದೆ ಹೇಳಿದ ಕ್ಷುದ್ರ ಗ್ರಹಗಳ ಗುಂಪು ಸಿಕ್ಕಿತು. ಸೂರ್ಯನ ಮನೆಗೆ ಅತಿಧಿಗಳೂ ಬರುವುದುಂಟು. ಧೂಮಕೇತು ಗಳೆಂಬ ಬಾಲವುಳ್ಳ ಚಿಕ್ಕೆಗಳು ಇಂತಹವಾಗಿವೆ. ಇವು ಕೆಲಹೊತ್ತು ಕಾಣಹತ್ತಿ ಮುಂದೆ ಸಣ್ಣವಾಗುತ್ತ ಹೋಗಿ ಕಾಣದಂತಾಗುತ್ತವೆ. ಇವಕ್ಕೊಂದು ಬಾಲವಿದ್ದು ಯಾವಾಗಲೂ ಸೂರ್ಯನಿಂದ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಈ ಧೂಮಕೇತುಗಳು ಯಾವಾಗಲಾದರೊಮ್ಮೆ ಕಾಣುವುದ ರಿಂದ, ಇವುಗಳಿಗೆ ಜನರು ಬಹಳ ಹೆದರುತ್ತಾರೆ. ಇವು ಕಾಣುವಾಗೆಲ್ಲ ಉತ್ಪಾತಗಳಾಗುವವೆಂದು ಸಾಮಾನ್ಯವಾಗಿ ಕಲ್ಪನೆಯಿದೆ. ಇಂತಹ ಅನೇಕ ಧೂಮಕೇತುಗಳು ವಿಶ್ವದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಚಲಿಸುತ್ತಿರ ಬೇಕೆಂದೂ, ಇಂತಹದೊಂದು, ಸೂರ್ಯನ ಹತ್ತಿರ ಬಂದೊಡನೆಯೆ ಅವನ ಆಕರ್ಷಣಕ್ಕೆ ಒಳಪಟ್ಟು ಅವನನ್ನು ಸುತ್ತು ಹಾಕಿಕೊಂಡು ಹೋಗುತ್ತ ದೆಂದೂ ತಿಳಿಯಲ್ಪಟ್ಟಿದೆ. ಹೀಗೆ ಸತ್ತುಹಾಕಿಕೊಂಡು ಹೋಗುವಾಗ ಒಮ್ಮೊಮ್ಮೆ ಇಂತಹ ಧೂಮಕೇತುಗಳು ಸೂರ್ಯಮಾಲೆಯ ಬೃಹದ್ದಹ ಗಳಾದ ಗುರು ಶನಿಗಳ ಆಕರ್ಷಣಕ್ಕೆ ಒಳಪಟ್ಟು ಪುನಃ ತಿರುಗಿಬರುತ್ತವೆ. ಮುಂದೆ ಇವು ಸೂರ್ಯನ ಮನೆಯ ಊಟಕ್ಕೆ ಮೆಚ್ಚಿದವೊ ಏನೊ ಎನ್ನು ವಂತೆ, ಸೂರ್ಯಮಾಲೆಯ ಘಟಕಗಳಾಗಿ ಉಳಿಯುತ್ತವೆ. ಇಂಥವುಗಳಲ್ಲಿ ಹ್ಯಾಲೆ ಎಂಬವನು ಕಂಡುಹಿಡಿದುದು ಮುಖ್ಯವಾಗಿದೆ. ಇದು ಸೂರ್ಯನ ಸುತ್ತಲೂ ೭೮ ವರುಷಗಳಲ್ಲಿ ತಿರುಗುತ್ತದೆ. ಸೂರ್ಯನ ಸಮೀಪಕ್ಕೆ ಬಂದಾಗ ಇದು ಸೂರ್ಯನಿಂದ ಬುಧನಿಗಿಂತ ಹತ್ತರವಿರುವುದು. ಅದೇ ತನ್ನ ಕಕ್ಷೆಯ ಎರಡನೆಯ ಬದಿಗಿದ್ದಾಗ ನೆಮ್ರನಕ್ಕಿಂತ ಆಚೆಯಲ್ಲಿರು ವುದು.