________________
ಜ್ಯೋತಿಶ್ಯಾಸ್ತ್ರ ಒಮ್ಮೊಮ್ಮೆ ನಾವು 'ನಕ್ಷತ್ರಗಳು' ಬೀಳುವುದನ್ನು ನೋಡುತ್ತೇವೆ. ಇವು ನಿಜವಾಗಿ ನಕ್ಷತ್ರಗಳಲ್ಲ; ಉಲ್ಕೆಗಳು. ನಿಜವಾದ ನಕ್ಷತ್ರಗಳು ಹೀಗೆ ಬಿದ್ದರೆ ವಿಶ್ವದಲ್ಲಿ ಕ್ರಾಂತಿಯುಂಟಾಗುವುದು. ಇವು ವಿಶ್ವದಲ್ಲಿ ಹಾರಾಡು ತಿರುವ ತುಣುಕುಗಳು, ವಿಶ್ವವೆಲ್ಲ ಇಂಧವುಗಳಿಂದ ತುಂಬಿದೆಯೆಂದು ಹೇಳಬಹುದು. ಧೂಮಕೇತುಗಳೂ ಇಂಧವುಗಳ ಗುಂಪೆ ಆಗಿರ ಇದೆ. ಒಂಟೊಂಟಿಯಾಗಿ ಚಲಿಸುವ ಇಂತಹ ತುಣುಕುಗಳ ಒಮ್ಮೆ ಭೂಮಿಯ ವಾತಾವರಣದಲ್ಲಿ ಬರಲು ಘರ್ಷಣದಿಂದ ಕಾಯು ಸುಡಹತ್ತುತ್ತವೆ. ಉರಿಯುವಾಗಲೆ ನಮಗೆ ಕಾಣುವವು. ಕೆಲನಿಮಿಷಗಳಲ್ಲಿ ಸುಟ್ಟು ಬೂದಿ ಯಾಗುವವು. ಭೂಮಿಯ ಸುತ್ತಲೂ ವಾತಾವರಣವಿರದಿದ್ದರೆ ಇಂತಹ ಅನೇಕ ತುಣುಕುಗಳ ಪ್ರಹಾರವನ್ನು ತಾವು ತಡೆಯಬೇಕಾಗುತ್ತಿತ್ತು, ಆದರೆ ನಮ್ಮ ವಾತಾವರಣವು ನಮಗೊಂದು ಕವಚವಾಗಿದೆ. ಇಂತಹ ತುಣುಕುಗಳು ದೊಡ್ಡವಿದ್ದರೆ, ಭೂವಿಯವರೆಗೆ ಸಹ ಮುಟ್ಟುತ್ತವೆ. ಇಂತಹ ಕೆಲವು ಬಂಡೆಗಳು ಭೂಮಿಯ ಮೇಲೆ ಸಿಕ್ಕಿವೆ. ಅವುಗಳನ್ನು ಪದಾರ್ಧ ಸಂಗ್ರಹಾಲಯದಲ್ಲಿಡುವರು. ಏಕೆಂದರೆ ವಿಶ್ವದಲ್ಲಿ ಭೂಮಿಯ ಹೊರಗಿನ ಪ್ರದೇಶಗಳಲ್ಲಿ ಏನಿರಬಹುದೆಂಬುದಕ್ಕೆ ಇವು ಪ್ರತ್ಯಕ್ಷ ಪ್ರಮಾಣ ಗಳಾಗಿರುವವು.