ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧ನೆಯ ಪ್ರಕರಣ ನಕ್ಷತ್ರಗಳು ಆಕಾಶದಲ್ಲಿ ಎಲ್ಲಕ್ಕೂ ಆಶ್ಚರ್ಯಜನಕವಾದ ಪದಾರ್ಥಗಳೆಂದರೆ, ನಕ್ಷತ್ರ ಗಳು, ಕಾಣಲಿಕ್ಕೇನೊ ಇವು ಬೆಳಕಿನ ಚಿಕ್ಕ ಚಿಕ್ಕ ಚುಕ್ಕೆಗಳಾಗಿ ಕಾಣುತ್ತವೆ. ಆದರೆ ಇವುಗಳ ಸ್ವರೂಪವು ಅದ್ಭುತವಿರುತ್ತದೆ. ನಮ್ಮ ಕಣ್ಣಿಗೆ ಒಂದು ಕಾಲಕ್ಕೆ ಕಾಣುವ ನಕ್ಷತ್ರಗಳ ಸಂಖ್ಯೆಯು ಸುಮಾರು ೩,೦೦೦ ಇರುವುದು. ಅಷ್ಟೆ ನಕ್ಷತ್ರಗಳು ಕೆಳಗಿನ ಗೋಲಾರ್ಧದಲ್ಲಿರುವ ಜನರಿಗೆ ಕಾಣಿಸುವವು. ಅಂತೂ ಮನುಷ್ಯನ ಕಣ್ಣಿಗೆ ಕಾಣಬಹುದಾದ ನಕ್ಷತ್ರಗಳ ಸಂಖ್ಯೆಯ ೬,೦೦೦. ಆದರೆ ದುರ್ಬೀನುಗಳಲ್ಲಿ ನೋಡಿದಂತೆ ಇದರ ಸಂಖ್ಯೆಯು ಕೋಟ್ಯವಧಿ ಬೆಳೆದಿದೆ. ಇವುಗಳ ನಿಜವಾದ ಸಂಖ್ಯೆಯು ಇನ್ನೂ ಎಷ್ಟು ಪಟ್ಟು ದೊಡ್ಡದಿರುವುದೆಂಬುದನ್ನು ಊಹಿಸುವುದಕ್ಕೂ ಕೂಡ ಅಸಾಧ್ಯ. ಇವುಗಳ ಸಂಖ್ಯೆಯು ಅನಂತವಿದ್ದಂತೆ ಇವುಗಳ ಅಂತರವೂ ಅಪಾರವಿದೆ. ಕಾಣಲಿಕ್ಕೆ ಇವೆಲ್ಲವೂ ಚಂದ್ರ ಸೂರ್ಯರ ಬದಿಯ ಇದ್ದಂತೆಯೇ ಕಾಣುವವ, ಆದರೆ ನಿಜವಾಗಿ ಅವು ಸೂರ್ಯನಿಗಿಂತ ಲಕ್ಷಾವಧಿಪಟ್ಟು ದೂರದಲ್ಲಿರುವವು. ತೀರ ಸಮೀಪದ ನಕ್ಷತ್ರವೆ ೨,೩೪೦ ಅಬ್ಬ (೨೩೪,೦೦೦,೦೦,೦೦,೦೦೦) ಮೈಲು ದೂರವಿರುವುದು. ಅದರಿಂದ ಹೊರಟ ಪ್ರಕಾಶವು ನಮಗೆ ಬಂದು ಮುಟ್ಟಲಿಕ್ಕೆ ೪ ವರ್ಷಗಳು ಬೇಕಾಗುವವು. ಈಗ ನಮಗೆ ಗೊತ್ತಿರುವ ನಕ್ಷತ್ರಗಳಲ್ಲಿ ಎಲ್ಲಕ್ಕೂ ದೂರದ ನಕ್ಷತ್ರವು ನಮ್ಮಿಂದ ೮೪೦ ಪರಾರ್ಧ (೮೪ರ ಮುಂದೆ ೧೮ ಪೂಜೆಗಳು) ಮೈಲು ದೂರದಲ್ಲಿರುವುದು. ಅದರಿಂದ ಹೊರಟ ಪ್ರಕಾಶವು ೧೪೦,೦೦೦,೦೦೦ ವರ್ಷಕ್ಕೆ ನಮಗೆ ಬಂದು ತಲುಪುವುದ , ಇವುಗಳ ಆಕಾರವೂ ಅಷ್ಟೇ ಅದ್ಭುತವಾಗಿದೆ. ಒಂದೊಂದು ನಕ್ಷತ್ರವು ನಮ್ಮ ಸೂರ್ಯ ಮಾಲೆಯ ಅರ್ಧಭಾಗವನ್ನೇ ನುಂಗ ವಷ್ಟು ದೊಡ್ಡದಿರುತ್ತದೆ. ಮೊದಲು ನಾವು ಹೊರಡುವುದು ಭೂಮಿಯಿಂದ. ಇದೊಂದು ಗೋಲವು. ಇದರ ಸುತ್ತಳತೆಯು ೨೫,೦೦೦ ಮೈಲು, ಇದನ್ನು ಕವಿ ಸಲಿಕ್ಕೆ ತೀವ್ರವಾದ ಉಗಿಬಂಡಿಗೆ ಸಹ ೨ ದಿವಸಗಳು ಬೇಕಾಗುವವು. ಅದೇ, ಬೆಳಕಿಗೆ ಒಂದು