ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬L ಅದೇ ಉಸಿಕ ಮೈಲು ಬೆಳಕು ಬೆಳಕಿಗೆ ಜ್ಯೋತಿಶ್ಯಾಸ್ತ್ರ ಸೆಕಂಡಿನ ೭ನೆಯ ಭಾಗವು ಸಹ ಬೇಕಾಗುವುದಿಲ್ಲ. ವಿಶ್ವದಲ್ಲಿ ನಮಗೆ ಹತ್ತಿರದ ಸಂಬಂಧಿಕರೆಂದರೆ ಸೂರ್ಯಮಾಲೆಯೊಳಗಿನ ಅಣ್ಣ ತಮ್ಮಂದಿರು. ತಂದೆಯಾದ ಸೂರ್ಯನು ನಮ್ಮಿಂದ ೯ ಕೋಟಿ ಮೈಲುಗಳ ಆಚೆಯಲ್ಲಿರು ವನು. ಸೂರ್ಯನ ಗೋಲವು ಸೃದ್ಧಿಗಿಂತ ೧೦ ಲಕ್ಷ ಪಟ್ಟು ದೊಡ್ಡದಿರು ವುದು. ಅದರ ಸುತ್ತಳತೆಯು ೨೫ ಲಕ್ಷ ಮೈಲುಗಳು. ಸೂರ್ಯನ ಸುತ್ತಲು ತಿರುಗುವುದಕ್ಕೆ ಅದೇ ಉಗಿಬಂಡಿಗೆ ೬ ವರುಷಗಳು ಹಿಡಿಯು ವವು. ಬೆಳಕಿಗೆ ೧೨ ಸೆಕಂಡುಗಳು ಬೇಕಾಗುವವು. ಸೂರ್ಯನಿಂದ ಬೆಳಕು ನಮ್ಮನ್ನು ಮುಟ್ಟಲಿಕ್ಕೆ ೮ ಮಿನಿಟುಗಳು ಬೇಕಾಗುವವು. ಉಗಿ ಬಂಡಿಗೆ ೨೦ ವರುಷಗಳು ಹಿಡಿಯುವವು. ಸೂರ್ಯನಿಂದ ನಾವು ಇಷ್ಟು ದೂರದಲ್ಲಿದ್ದರೂ ನಕ್ಷತ್ರಗಳ ಮಾನದಿಂದ ನೋಡಿದರೆ ಇದು ಏನೂ ಅಲ್ಲ. ಬೆಟಲ್ ಟ್ರಸ ಎಂಬ ನಕ್ಷತ್ರದ ಮಧ್ಯದಲ್ಲಿ ಸೂರ್ಯಗೋಲವನ್ನಿಟ್ಟರೆ, ಅವನಿಂದ ೩|| ಕೋಟಿ ಮೈಲುಗಳಮೇಲಿರ ವ ಬುಧನೂ, ಆರುಕೋಟಿ ಮೈಲುಗಳಮೇಲಿರುವ ಶುಕನೂ, ೯ ಕೋಟಿ ಮೈಲುಗಳಮೇಲಿರುವ ಸೃಥ್ವಿಯ ಎಲ್ಲರೂ ಆ ನಕ್ಷತ್ರದ ಒಡಲಿನಲ್ಲಿಯೆ ಅಡಗುವರು. ಅದರ ಒಳಭಾಗದಲ್ಲಿಯೇ ತಮ್ಮ ಪ್ರದಕ್ಷಿಣೆಯ ನ್ನು ಮುಗಿಸುವರು. ಇಂತಹ ಅದ್ಭುತವಾದ ಪದಾರ್ಥಗಳ ಜ್ಞಾನವು ನಮಗೆ ಮೊನ್ನೆ ಮೊನ್ನೆಯವರೆಗೆ ವಿಶೇಷವಾಗಿದ್ದಿಲ್ಲ. ಇವುಗಳ ವಿಷಯವಾಗಿ ವಿಶೇಷ ಶೋಧಮಾಡಿದವನು ಹರ್ಸೆಲ್ಲನು. ಜಗತ್ತಿನಲ್ಲಿ ದೇಶಗಳಿರುವಂತೆ ಆಕಾಶ ದಲ್ಲಿಯೂ ಭಾಗಗಳನ್ನು ಕಲ್ಪಿಸಿರುವರು. ದೇಶಗಳ ಮೇರೆಗಳು ಪರ್ವತ ಗಳಾಗಲಿ, ನದಿಗಳಾಗಲಿ, ಸಮುದ್ರಗಳಾಗಲಿ ಇರುವವು. ಆಕಾಶದ ಮೇಲೆ ಇಂತಹವೇನೂ ಇರುವುದಿಲ್ಲ. ಮೇರೆಗಳೆಲ್ಲ ಕಾಲ್ಪನಿಕವಾಗಬೇಕಾಗಿದೆ. ಆಕಾಶವೆಲ್ಲವೂ ಪ್ರತಿಯೊಬ್ಬನ ಸ್ವತ್ತೇ ಆಗಿರುವುದರಿಂದ ಅವುಗಳ ಮೇರೆಗಳ ವಿಷಯಕ್ಕೆ ಬಡಿದಾಟವಾಗುವ ಕಾರಣವಿಲ್ಲ. ಈ ಕಾಲ್ಪನಿಕ ಮೇರೆಗಳನ್ನು ಗೊತ್ತುಪಡಿಸುವುದಕ್ಕೆ ನಕ್ಷತ್ರಗಳ ಗುಂಪುಗಳು ಬಹಳ ಸಹಾಯಕಾರಿ ಯಾಗಿವೆ. ಇವು ನಿಜವಾಗಿಯೆ ಗುಂಪುಗಳಲ್ಲ. ಒಂದೇ ದಿಕ್ಕಿನಲ್ಲಿ ಕಾಣುವ ನಕ್ಷತ್ರಗಳು ಒಂದರ ಹತ್ತಿರ ಒಂದಿರುವಂತೆ ಕಾಣುತ್ತವಿಷ್ಟೆ, ಇಂತಹ ಗುಂಪುಗಳಿಗೆ ಆಕಾರಗಳನ್ನು ಕಲ್ಪಿಸಿ ಅವುಗಳಿಗೆ ಬೇರೆ ಬೇರೆ ಹೆಸರುಗಳು