ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೦೪ ](೯) ಪಾಕ್ಷಿಕ, ಮಾಸಿಕ, ಹಾಗು ವಾರ್ಷಿಕ ವಿಷಮಜ್ವರಗಳು, ಲಕ್ಷಣ:-ನಾಲ್ಕರ ಚಳಿ ಜ್ವರಗಳು ಹೇಗೆ ತಪ್ಪದೆ ನಾಲ್ಕನೇ ದಿವಸ ಬರುವವೋ, ಆದರಂತೆ ಶರೀರದಲ್ಲಿ ಮನೆ ಮಾಡಿಕೊಂಡ ಕೆ ಕೆಲವು ಜ್ವರ ಗಳು ೧೫ ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ಇಲ್ಲವೆ ವರ್ಷಕ್ಕೊಂದಾವರ್ತಿ ತಪ್ಪದೆ ಬರುತ್ತಿರುತ್ತವೆ. ಇದರ ಲಕ್ಷಣಗಳಾದರೂ ನಾಲ್ಕರ ಜ್ವರದಂತೆಯೇ, (ಹಂಸರಾಜ ನಿದಾನ ನೋಡಿರಿ.) ಉಪಾಯಗಳು, ೧ ನಾಲ್ಕರ ಜ್ವರದ ಉಪಾಯಗಳನ್ನು ಮಾಡತಕ್ಕದ್ದು , ೨ ಜ್ವರ ಬರುವ ಮೊದಲು ಏಳು ದಿವಸ ಸುವರ್ಣಮಾಲಿನೀವಸಂತ ಕಪಾಯ ಇಲ್ಲವೆ ಮರಕ ಅಥವಾ ನಾಲ್ಕರ ಚಳಿಜ್ವರದ ಅಪಾಯಗಳನ್ನು ಕಡತಕ್ಕದ್ದು; ಇಲ್ಲವೆ ಬೇವು, ನೆಲಗುಳ್ಳ ಬೇರು, ಅಮೃತಬಳ್ಳಿ, ಶುಂಠಿ ಇವು ಗಳ ಕಾಥೆ-ನಿಕಾಧೆ ಕೊಡುತ್ತಿರಬೇಕು. * 4 ಭೂತ-ಭೈರವ ರಸವನ್ನು ಕೊಡಬೇಕು. (೧೦) ಏಕಾಂಗ ಜ್ವರ, ಲಕ್ಷಣ:-ಯಾವ ಜ್ವರವು ದೇಹದ ಒಂದೇ ಮಗ್ಗಲಿಗೆ (ಎಡಕ್ಕೆ ಇಲ್ಲವೆ ಬಲಕ್ಕೆ) ಬರುವದೆ ಅದಕ್ಕೆ ಏಕಾಂಗವ್ವ ರವೆನ್ನುವರು. ಯಾವ ಮಗ್ಗಲು ಜ್ವರ ಬರುವದೆ ಆ ಭಾಗದ ಹೆಸರು ಅದಕ್ಕೆ ಬರುವದು; ಅಂದರೆ ಎಡಭಾಗಕ್ಕೆ ಜ್ವರ ಬಂದರೆ ವಾಮಾಂಗಲ್ವರ, ಬಲಭಾಗಕ್ಕೆ ಬಂದರೆ ಸಾಂಗಜ್ಜರವೆನ್ನುತ್ತಾರೆ. ಇದಾದರೂ ವಿಷವಾದ ಒಂದು ಪ್ರಕಾರವು. ಏಕಾಂಗ ಜ್ವರಕ್ಕೆ ಉಪಾಯಗಳು. ೧ ಪ್ರಸಿದ್ದ ವೈದ್ಯರಲ್ಲಿ ದೊರೆಯುವ ಏಕಾಂಗವೀರವೆಂಬ ಮಾತ್ರೆಯನ್ನು ಅನುಪಾನದೊಡನೆ ಕಡತಕ್ಕದ್ದು ; ಇಲ್ಲವೆ ಹೇಮಗರ್ಭ ಮಾತ್ರೆಯನ್ನಾಗಲಿ ಹೇಮಗರ್ಭ ವೋಟಳಿ ರಸವನ್ನಾಗಲಿ ಕೊಡಬೇಕು, - ೨ ೧ ಮಾಸಿ ಕಸರಿ, ೧ ಮಾಸಿ ಆಂಬರ, ೧ ಮಾಸಿ ಬಂಗಾರದ ವರ್ಕ, ೧ ಮಾಸಿ ಬೆಳ್ಳಿ ವಕ. ಇವನ್ನು ಜೇನುತುಪ್ಪದಲ್ಲಿ ತೆಗ್ಗಟ್ಟು ಮರು ಮರು ತಾಸಿಗೊಮ್ಮೆ ಗಂಜಿ ಗಂಜಿಯಷ್ಟು ನೆಕ್ಕಿ ಸತಕ್ಕದ್ದು. (ಮೇಲಿನ ಪ್ರಮಾಣವನ್ನು ದಾಸಿಯ ಬದಲು ಗುಂಜಿಯಂತಿ ಹಿಡಿದರೂ ಹಿಡಿಯ ಬಹುದು.)