ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಂಗಿ ಸೊಪ್ಪನ್ನು ಆಡಿನ ಇಲ್ಲವೆ ಆಕಳ ಹಾಲಲ್ಲಿ ಕುಚ್ಚಿ ಕೈ ಕಾಲು ಗಳಿಗೂ ಶಿಲೆಗಂ ತಿಕ್ಕಿದರೆ ಕಡಲೆ ನಿದ್ದೆ ಬರುತ್ತದೆ. & ಅಫಂದ ಅರ್ಕವನ್ನು ಬಗಲೊಳಗೆ ಜೇ ಕಳಿಯಿಂದ ಚಿರಬೇಕು; ಆದರೆ ಮಲಾವರೋಧವಾಗಿದ್ದರೆ ಮಾತ್ರ ಈ ಉಪಾಯ ಮಾಡಬಾರದು. (೧೧) ನಾಲಿಗೆಯ ಮೇಲೆ ಮುಳ್ಳು ಎದ್ದಿದ್ದರೆ, - ೧ ನೆಲವರಿ (ಸೆನಾ ಮುಖಿ) ಯ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಿಸಿ ನಾಲಿಗೆಗೆ ತಿಕ್ಕಬೇಕು, ೨ ಕರೇಖರ್ಜೂರವನ್ನು ಬೇನತುಪ್ಪದಲ್ಲಿ ಇಲ್ಲವೆ ನೀರಲ್ಲಿ ತೆಯು ನಾಲಿ ಗೆಗೆ ತಿಕ್ಕಬೇಕು, (೧೨) ಜ್ವರರೋಗಿಗೆ ಇಲ್ಲದೆ ಇತರ ರೋಗಿಗಳಿಗೆ ಶಾಸ್ತೋತ್ರ ಖ್ಯಾನ ಮಾಡಿಸುವ ವಿಧಾನವು. ಮಿಕ್ಕ ಎಲ್ಲ ರೋಗಿಗಳಿಗೆ ಸ್ನಾನ ಮಾಡಿಸುವದೇ ಪ್ರಶಸ್ತವಾಗಿದೆ; ಆದರೆ ಜ್ವರರೆಗಿಗೆ ಹಾಗಲ್ಲ; ಆದರೂ ಅವನಿಗೆ ಬೇರೆ ಬಗೆಯಿಂದ ಉಚ್ಚ ಕಡಿಮೆ ಮಾಡುವ ಸಲುವಾಗಿ ಸ್ನಾನಮಾಡಿಸುವದು ಅತ್ಯವಶ್ಯವಾಗಿರುತ್ತದೆ, ಅವನ ಎಲ್ಲ ಅವಯವಗಳಿಗೆ ಒಮ್ಮೆಲೆ ಸ್ನಾನ ಮಾಡಿಸುವದು ಬಹು ಘಾತುಕವು. ಅವಗಾ ಹನ, ಪರೀಷೇಕ, ಆದ್ರ್ರವಸ್ತ್ರ ಬಂಧ ತ, ಶೀತಲೇಪನ, ಶೀತ ವಸ್ತ್ರ ಪರಿಧಾನ ಮುಂತಾದ ಕ್ರಿಯೆಗಳು, ಬೇರೆ ಬೇರೆ ಅಂಗ- ಪ್ರತ್ಯಂಗಗಳಿಗೆ ಹೆಚ್ಚು ಕಡಿಮೆ ಮಾನದಿಂದ ಮಾಡಿಸಲಿಕ್ಕೆ ಅಡ್ಡಿಯಾರುವದಿಲ್ಲ. ಇದರಂತೆ ಪ್ರತಿಯೊಂದು ಜ್ವರ ದಲ್ಲಿ ವಿಶೇಷವಾಗಿ ವಿಷಮಜ್ವರದಲ್ಲಿ ತಲೆಯ ಮೇಲೆ ಬರ್ಫ ಇಲ್ಲವೆ ತಣ್ಣೀರಿನ ಪಟ್ಟಿಯನ್ನು ಅವಶ್ಯವಾಗಿ ಹಾಕಬೇಕು; ಹಾಗು ಅವನ್ನು ಆಗಿಂದಾಗ್ಗೆ ಬದ ಲಿಸಬೇಕು. ಅದರಿಂದ ಜ್ವರದ ವೇಗವು ಕುಗ್ಗಿ ನಾಡಿಯು ಶಾಂತವಾಗಿ ಹಾರ ಹತ್ತುತ್ತದೆ; ಆದರೆ ೧೦೦ ಇಲ್ಲವೆ ಅದಕ್ಕೂ ಕಡಿಮೆ ಅಂಶಉಷ್ಣತೆಯು -- ಗಿಯ ಮೈಯಲ್ಲಿ ಕಂಡು ಒಂದರ ಮೇಲಿನ ಉಪಾಯವನ್ನು ಒಮ್ಮೆಲೆ ನಿಲ್ಲಿಸಿ ಬಿಡಬೇಕು, ರೋಗಿಗೆ ಸ್ನಾನ ಮಾಡಿಸುವಾಗಲೂ, ಶೀತಲಲೇಪ ಮಾಡುವ ಗಲಂ ಅವನ ಶರೀರವು ತೀರ ತಂಪಾದರೆ ಇಲ್ಲವೆ ಅವನಿಗೆ ಚಳಿಚಳಿಯಾಗು ಧರೆ ಅಥವಾ ಹೆಚ್ಚು ದುಸ್ಸಿ ಹಗಳು ತೋರಿಬಂದರೆ ಕೂಡಲೆ ಆ ಉಪಾಯಗಳನ್ನು ಬಿಟ್ಟು, ಬೆಚ್ಚನ ಅರಿವೆ.ಅಂಚಡಿಗಳನ್ನು ಉಡಿಸಿ, ಹೆದರಿಸಿ ತುಸ ಕಾಯಬೇಕು,