ಪುಟ:ಜ್ವರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ ಕರ್ಣಪುಲವು ಒಡೆಯಲಿಕ್ಕೆ ಚಿಕಿತ್ಸಾ ಪ್ರಭಾಕರ ಗ್ರಂಥದೊಳಗಿನ ಉಪದಂಶ ಪ್ರಕರಣದಲ್ಲಿ ಯಾವ ಯಾವ ಉಪಾಯಗಳನ್ನು ಹೇಳಿದರೂ ಅನ ನೆಲ್ಲ ಮಾಡತಕ್ಕದ್ದು. - ೩ ಇಂಗು, ಅರಿಷಿಣ ಬೇರು, ಕಾಡ ಕವಡೇಕಾಯಿ, ಸೈಂಧಲವಣ, ದೇವ ದಾರು, ಹಿಪ್ಪಲಿ ಅವುಗಳ ಚೂರ್ಣವನ್ನು ಎಕ್ಕಿಹಾಲಿನಲ್ಲಿ ಅರೆದು, ಅದರಲ್ಲಿ ಶುಪ್ಪ ಕೂಡಿಸಿ, ಕೈಯಾಡಿ ಹಚ್ಚಬೇಕು. ಇದರಿಂದ ಬಹು ತೀವ್ರ ಗುಣವಾಗು ನದು, ೪ ಆರ್ಧತಲಿ ಬಜಿ, ೧೦ ಬಳ್ಳೋಳ್ಳಿ ಬೀಜ ಇವುಗಳನ್ನರೆದು ಹಚ್ಚಿದರೆ ೩ ಲೇಪಗಳೆಎಳಗೆ ಕರ್ಣಮಲದ ನಾಮಶೇಷವಾಗುತ್ತದೆ, ೫ ಕಂಚಾಳ ಗಿಡದ ತೊಗಟೆಯ ಕಷಾಯ ಕುಡಿಸಿ, ಶುಂಠಿ ಮತ್ತು ನೇಪಾಳಬೀಜ ಇವುಗಳನ್ನು ತೆಯು ಗಂಟಿನ ಇಲ್ಲವೆ ಬಾವಿನ ಮೇಲೆ ಹಚ್ಚಬೇಕು. ೬ ಬೆಲ್ಲ, ಗುಗ್ಗುಳ, ಚಿತ್ರವಲ, ಸಾಸಿವೆ ಇವನ್ನು ನೀರಲ್ಲರೆದು ಹಚ್ಚ ಬೇಕು, ೭ ಬಿಳೇಹೂವಿನ ಮಧ್ಯಾಹ್ನ ಮಲ್ಲಿಗೆಯ ಗಡ್ಡಿಯನ್ನು ಹೆರೆದು, ಅದ ರಲ್ಲಿ ೨ ಕೀರು ಹಾಕಿ ಅರೆದು ತುಪ್ಪದಲ್ಲಿ ಕಟ್ಟಿ ಇಳಿಸುವಾಗ ಬೆಲ್ಲ ಹಾಕಿಳಿಸಿ ಅಡಿಕೆಯಷ್ಟು ಗುಳಿಗೆ ಕಟ್ಟಿಡಬೇಕು. ಇವನ್ನು ದಿನಾಲು ೨ ಗುಳಿಗೆ ತಕ್ಕೂ ತಕ್ಕದ್ದು, ಇದಕ್ಕೆ ವರ್ಜ್ಯ ಪದಾರ್ಥಗಳು:-ಇಂಗು, ಸಾಸಿವೆ, ಅವರೇಕಾಯಿ ಇಲ್ಲವೆ ಅವರೆ, ಎಳ್ಳೆಣ್ಣೆ, ಖಾರ, ಹುಳಿಗಳು ವರ್ಜ್ಯ, (ಇದು ತೆಲಗುದೇಶದ ಘನಪಾಠಿಯು ಔಷಧವಾಗಿರುತ್ತದೆ.) - ೮ ಜಿಗಣಿ ಹಚ್ಚಿ ಸಾಕಷ್ಟು ರಕ್ತ ತೆಗೆಯಬೇಕು. ಅದರಿಂದ ಹೆಚ್ಚು ಗ್ಲಾನಿ ಬಂದರೆ ತುಪ್ಪ ಕುಡಿಸಬೇಕು. ೯ ಹುಣಸೀ ರಾಡಿ ಕಾಸಿ ತೇವಿದ್ದಂಥ ಭೂಮಿಯ ಮೇಲೆ ಸುರುವ ಬೇಕು; ಮತ್ತು ೬ದರ ಲೇಪವನ್ನು ಕರ್ಣಮಲಕ್ಕೆ ಮಾಡಬೇಕು. ೧೦ ನೇಪಾಳದ ಬೇರನ್ನು ಲಿಂಬಿ ಹುಳಿಯಲ್ಲಿ ತೆಯ ಕರ್ಣನುಲಕ್ಕೆ ಹಚ್ಚಬೇಕು, ೧೧ ಕರ್ಣಮಲದ ಗಂಟಿಗೆ ವೋಟೀಸು ಕಟ್ಟಿ ಅದನ್ನು ಹಣ್ಣು ಮಾರ ಬೇಕು; ಅದು ಒಡೆದ ಮೇಲೆ ಹಳೇ ತುಪ್ಪ ಇಲ್ಲವೆ ಮಲವನ್ನು ಬತ್ತಿಗೆ ಹಚ್ಚಿ ಅದರ ಛಿದ್ರದೊಳಗೆ ಹಾಕುತ್ತಿರಬೇಕು. ಅದರಿಂದ ಕೀವು ಸೋರು ಪದಲ್ಲದೆ ಗಾಯವು ಮಾಯಹತ್ತುತ್ತದೆ. ಒಳಗೆ ರೋಷವುಳಿದರೆ ಹಣ್ಣಾಗಿ ಎದೆಗೆ ಇಳಿಯ ಹತ್ತುತ್ತದೆ. ಇಲ್ಲವೆ ಮಗಿನಿಂದ ಸೋರಹತ್ತುತ್ತದೆ,