ವಿಷಯಕ್ಕೆ ಹೋಗು

ಪುಟ:ಜ್ವರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಟುಕರಣಿ, ದೊಡ್ಡ ಹಿಪ್ಪಲಿ, ಕಕ್ಕೆಕಾಯಿಯೊಳಗಿನ ತಿಳುಲು, ನೆಲಬೇವು, ಅಮೃತಬಳ್ಳಿ, ದಶಮೂಲ, ಮತ್ತು ನೆಲಗುಳ್ಳ ಬೇರು ಇವುಗಳ ಕಷಾಯದಿಂದ ಮತ್ತು ಸ್ವರೂಪವಾದ ಸನ್ನಿಪಾತವು ಕೂಡ ನಾಶವಾಗುವದು. ೨೫ ತಂದ್ರಾ ಮಬ್ಬು.) ಅಕ್ಷಣ:-ಸನ್ನಿಪಾತಜ್ವರದಲ್ಲಿ ಮಬ್ಬು ಬರುತ್ತದೆ, ಅದನ್ನು ಹಂಚಿಕೆ ಗಳಿಂದಲೇ ಕಳೆಯಬೇಕು. ಇದು ಜ್ವರದೊಳಗಿನ ಕಷ್ಟಸಾಧ್ಯವಾದ ಉಪದ್ರ ವವಾಗಿರುತ್ತದೆ. ಯಾವ ಜ್ವರದೊಳಗೆ ಆಮಾಶಯದೊಳಗೆ ಆಮು ಮತ್ತು ಕಫ ಗಳ ಸಂಚಯವಾಗುವದೋ ಆಗ ದೃಢಸನ್ನಿ ಪಾಶವಾಗಿ ಜ್ವರ ಶಾಂತವಾಯಿತಿ ತೆಂದರೆ ಆ ರೋಗಿಗೆ ಮಬ್ಬು ಬರುವದು ಖಂಡಿತು. ಅವನು ಅನ್ನದ ರಸ ಹಾಲು ಇವುಗಳನ್ನು ಸೇವಿಸುವದರಿಂದ, ಹಗಲು ನಿದ್ದೆ ಮಾಡುವದರಿಂದಲ ಅವನ ಕಫವು ಪ್ರಕೋಪವಾಗಿ, ವಾಯುವನ್ನು ವಿರೋಧಿಸಿ, ನರಗಳಲ್ಲಿ ಪ್ರವೇಶಿ ಸುತ್ತದೆ. ಆ ರೋಗಿಯ ಕಣ್ಣುಗಳು ಸದಾ ಅರ್ಧ ಮರ್ಧ ಮುಚ್ಚಿದಂತಾಗು ಇವೆ; ಇಲ್ಲವೆ ನೆಟ್ಟಿಗ್ಗಣ್ಣಿಗೆ ಬಿದ್ದು, ಒಳಗಿನ ಗೊಂಬಿಗಳು ತಿರುಗಿರುತ್ತವೆ; ಮತ್ತು ಕಣ್ಣುಗುಡ್ಡೆಗಳು ಚಂಚಲವಾಗಿ ತೇಜೋಹೀನವಾಗಿರುತ್ತವೆ. ಕಣ್ಣು ರೆಪ್ಪೆಗಳು ಅಚಂಚಲವಾಗಿದ್ದು, ಬಾಯಿ ತೆರೆದಂತೆಯ, ಹಣ್ಣುಗಳು ಹೊರಗೆ ಹಾದಂತೆ ಕಾಣುತ್ತವೆ. ಆ ರೋಗಿಯು ಆಗಾಗ್ಗೆ ಅಂಗಾತ ಮಲಗುವನು ಅವನ ಕಣ್ಣಳಗಿಂದ ಜಿಗುಟು ಹಾಗು ತಂತುಯುಕ್ತವಾದ ಸ್ರಾವವು ಹೊರ ಬೀಳುತ್ತಿರುತ್ತದೆ. ಕಂಠ ಮಾರ್ಗದ ರೆಧವಾಗುತ್ತದೆ. ಈ ಪ್ರಕಾರದ ಕ್ಷಣ ಗಳಾದಾಗ ರಾತ್ರಿಗಳೊಳಗೇ ಸಾಧ್ಯವು, ಬಳಿಕ ಅಸಾಧ್ಯವೆಂದೇ ತಿಳಿಯ ತಕ್ಕದ್ದು. ಮಬ್ಬಿಗ ಉಪಾಯಗಳು:-- ೧ ಲೋಹಭಸ್ಮ, ಬಿಳೆ ಲೋಧನ ಚೆಕ್ಕೆ, ಮೆಣಸು ಮತ್ತು ಗೋರೆ ಜನ ಇವುಗಳನ್ನು ನೀರಲ್ಲಿ ತೆಯು ಒಂದೆರಡು ಸಾರೆ ಅ೦ಜನ ಮಾಡಬೇಕು, ೨ ಸೈಂಧಲವಣ, ಮನಸೀಲ, ಕಟು ಇವುಗಳನ್ನು ಜೇನುತುಪ್ಪದಲ್ಲಿ ತಯು ಅ೦ಜನ ಮಾಡಬೇಕು, ೩ ಶುಂಠಿ, ಮೆಣಸು, ಹಿಪ್ಪಲಿ ಇವನ್ನು ಕಾಡಿಗೆಯಂತೆ ಸಣ್ಣಾಗಿ ಅರೆದು ಭುಗಿನಲ್ಲಿ ಊದಬೇಕು. ೪ ಜಾಜೀ ಹಸಿವು ಮತ್ತು ಎಲೆ, ಮೆಣಸು, ಕಟುಕರೋಣ, ಒಜಿ, ಸೈಂಧಲವಣ ಇವನ್ನೆಲ್ಲ ಕುರಿಯ ಉಚ್ಚಿಯಲ್ಲಿ ಅರೆದು ಮುಗಿನಲ್ಲಿ ಹಿಂಡಬೇಕು,