ವಿಷಯಕ್ಕೆ ಹೋಗು

ಪುಟ:ಜ್ವರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊರತು ಮೈಲಿ, ಗೊಬ್ಬರ, ಶಿಡುಬುಗಳೇಳುವ ಮೊದಲು ೩ ದಿವಸ ಸಣ್ಣ ಹುಡುಗರಿಗೆ ಅಥವಾ ದೊಡ್ಡವರಿಗೆ ಅತಿಜ್ವರ ಬರುತ್ತವೆ; ಆದರೆ ಆ ಜ್ವರಗಳು ಆಯಾಂಗದ ಪ್ರತೀಕಾರವಾಯಿತೆಂದರೆ ತಾವೇ ಕಡಿಮೆಯಾಗುವವು. ಅವಕ್ಕೆ ಬೇರೆ ಔಷಧವು ಬಹುಶಃ ಬೇಕಾಗುವದಿಲ್ಲ, ಇ೦ತ ಜ್ವರಗಳಿಗೆ ಲಂಘನವನ್ನು ಮಾಡಲೇಬಾರದು. ಇದರ ಹೊರತು ಸಾಂಸರ್ಗಿಕ ಜ್ವರಗಳ ಲಕ್ಷಣ ಹಾಗು ಉಪಾಯಗಳನ್ನು ಮುಂದೆ ಪ್ರತ್ಯೇಕವಾಗಿ ಕೊಟ್ಟಿದೆ. - (೧) ಅಭಿಚಾರ ಜ್ವರ, ಅಕ್ಷಣ:- ತೃಷೆ, ಮೋಹ, ಮೈಮೇಲೆ ಹುಣ್ಣು, ಭ್ರಮೆ, ಮರ್ಧೆ, ಸಂತಾಪಚಿತ್ರ, ದಾಹ, ಉತ್ತರೆತ್ತರ ರೋಗದ ಬೆಳವಣಿಗೆ ಈ ಲಕ್ಷಣಗಳಾಗಿ ಹೋಮ, ಮಂತ್ರ, ತಂತ್ರಗಳ ವಿಪರೀತ ಕಾರಣಗಳಿಂದ ಈ ಜ್ವರವು ಮನಸ್ಸಿಗೆ ಧಕ್ಕೆ ಕೊಡುತ್ತದೆ. ಉಪಾಯ:-- ಮನಸ್ಸಿಗೆ ಶಾಂತಿಯುಂಟಾಗುವಂಥ ದೃಶ್ಯ ಉಪಾಯ ಗಳನ್ನು ಮಾಡಬೇಕು. ಅವಾವವೆಂದರೆ:-ಹೋಮ, ದೇವರಪೂಜೆ, ವ್ರತ, ತೀರ್ಥಯಾತ್ರೆ, ದೇವರಿಗೆ ಪ್ರದಕ್ಷಿಣೆ ಮುಂತಾದ ಭಾವುಕ ಉಪಾಯಗಳನ್ನು ಮಾಡಿಸಿ ಜ್ವರ ಮುಕ್ತವಾಗಬೇಕು, (೨) ಶಾಪಜ್ವರ ಲಕ್ಷಣ:- ಬ್ರಾಹ್ಮಣ ಗುರು, ವೃದ್ಧ, ಸಿದ್ಧ, ಮಹಾಸಾಧು, ಇವರ ಶಾಪದಿಂದ, ಆವಿಷ್ಕ ವಚನಗಳಿಂದಲೂ ಮನಸ್ಸಿಗೆ ಧಕ್ಕೆಯಾಗಿ ಈ ಜ್ವರಗಳು ಬರುತ್ತವೆ. ಇದರ ಲಕ್ಷಣಗಳು ಅಭಿಚಾರಶದಂತೆಯೇ ತೃಷೆ ಮೋಹಾದಿ ಗಳಾಗುತ್ತವೆ. ಉಪಾಯ:-ಯಾವ ವ್ಯಕ್ತಿಯಿಂದ ಅನಿಷ್ಟ ವಚನದ ಶಾಪವಾಗಿರು ವದೊ ಆ ವ್ಯಕ್ತಿಗೆ ಶರಣುಹವೀಗಬೇಕು; ಇಲ್ಲವೆ ಜಪ, ಹೋಮ, ದಾನ, ವ್ರತಗಳಿಂದ ಮನಸ್ಸಿಗೆ ಶಾಂತಿಯುಂಟಾಗುವಂತೆ ಮಾಡಬೇಕು. ಅಂದರೆ ಜ್ವರಮುಕ್ತನಾಗುವನು, (೩) ಭೀತಿಜ್ವರ. ಲಕ್ಷಣ:-ಭಯಂಕರವಾದ ಶಬ್ದದಿಂದ ಇಲ್ಲವೆ ಸಪ್ಪಳದಿಂದ ಇಲ್ಲವೆ ಮೈ ಮೇಲೆ ದೊಡ್ಡ ಪೇಚು ಬಂದಿರುವದರಿಂದ ಅಥವಾ ಬರುವ ಭಯದಿಂದ