ಪುಟ:ತಿಲೋತ್ತಮೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ಅಥವಾ ಸರಸ-ಪ್ರೇಮ •#%. .೨ನೆಯ ಪ್ರಕರಣ-- ವ್ಯಾಮೋಹ, ನಾಮಾಮ್-ಶಿಖಾಮಣಿಯಾದ ಅಕಬರನ ಆಳಿಕೆಯ ಕಾಲವು ರಾತಮಾನಸಿಂಗನಂಥ ಸ್ವಾಮಿನಿಷ್ಠ ಮಹಾಪ್ರತಾಸಿಯು ಆ ಮೊಗಲ ಬಾದಶಹನ ಪಕ್ಷಪಾತಿಯಾಗಿ ಬಂಗಾಲ, ಬಿಹಾರ, ಒಡಿಸಾಪ್ರಾಂತಗ ಳೊಳಗಿನ ಪಠಾಣರ ರಾಜ್ಯಗಳನ್ನು ಒಂದೊಂದಾಗಿ ನಷ್ಟಪಡಿಸುತ್ತ, ಮೊಗಲ ಸಾಮ್ರಾಜ್ಯವನ್ನು ಹಬ್ಬಿಸತೊಡಗಿರುತ್ತಾನೆ. ಸನ್ ೧೫೯೧ನೇ ಇಸವಿಯ ಬೇಸಿಗೆಯ ಕಟ್ಟ ಕಡೆಯ ಭಾಗವು ಒದಗಿದೆ. ಒಂದುದಿನ ಇಳಿಹೊತ್ತಿನಸಮಯ, ಒಬ್ಬ ತರುಣನು ಅಶ್ವಾರೂಢನಾಗಿ, ವಿಷ್ಣು ಪು ರದಿಂದ ಶಹಾನಾಬಾದಕ್ಕೆ ಹೋಗುವ ಮಾರ್ಗವನ್ನು ಹಿಡಿದು ಭರದಿಂದ ಸಾಗತೊಡಗಿರುತ್ತಾನೆ. ಆ ನವವನ ಸಂಪನ್ಮನ ಪ್ರತಾಪದ ರಭಸಕೂ, ಸೌಂದರ್ಯದ ಸೊಬಗಿಗೂ ತಲೆದೂಗುತ್ತಿರುವಂತೆ, ಮಾರ್ಗದ ಎಡಬಲದ ಗಿಡಬಳ್ಳಿಗಳು ಮೆಲ್ಲಮೆಲ್ಲನೆ ಅಲ್ಲಾಡತೊಡಗಿರುತ್ತವೆ ಮಂದಮಾರುತನು ಸುಳ್ಳನೆ ಸುಳಿಯುತ್ತ ಸುಖಸ್ಪರ್ಶವನ್ನುಂಟುಮಾ ಡತೊಡಗಿರುತ್ತಾನೆ, ವನಪುಷ್ಪಗಳ ಘಮಘಮಿಸುವ ವಾಸನೆಯು ಸುತ್ತು ಮುತ್ತು_ ಇಡಗಿದೆ. ಇಂಥ ಸುಖಮಯ ಸಮಯದಲ್ಲಿ ತರುಣನು ಉಲ್ಲಾಸದಿಂದ ಸಾಗಿದ್ದನು. ಆ ತೇಜಸ್ಸಿಯ ವೈಭವಕ್ಕೆ ಎಣೆಯಿದಿಲ್ಲ; ಅಧಿಕಾರಕ್ಕೆ ಕೊರತೆಯಿದ್ದಿಲ್ಲ; ಅಬ್ಬರಕ್ಕೆ ಅಳವಿದ್ದಿಲ್ಲ. ತನ್ನ ಸತಾ ಶಯದಿಂದ ದಶದಿಕ್ಕುಗಳು ತತ್ತರಿಸುತ್ತಿರುವಂತೆ ಆ ವೀರಶಿರೋನ ಣಿಗೆ ಭಾಸವಾಗುತ್ತಿತ್ತು, ತಾನು ಏಕಾಕಿಯಾಗಿರುವೆನೆಂಬ ಭಯವು. ಲೇಶವಾದರೂ ಆತನನ್ನು ಸೋ೦ಕಿದ್ದಿಲ್ಲ.