ಪುಟ:ತಿಲೋತ್ತಮೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ಒಪ್ಪಿಕೊಳ್ಳುವಹಾಗಿದ್ದಿಲ್ಲ; ಆದ್ದರಿಂದ ಆತನು ಉಸ್ಮಾನಖಾನನ ಯಾವ ಕೆಲ ಸದಲ್ಲಿಯೂ ಕೈಹಾಕುತ್ತಿದ್ದಿಲ್ಲ. - ಹೀಗೆ ಎಲ್ಲ ರಾಜ್ಯಕಾರಭಾರವನ್ನು ಉಸ್ಮಾನಖಾನನು ಸ್ವತಂತ್ರದಿಂದ ಸಾಗಿಸಹತ್ತಿದನು. ಆತನ ಹೆಸರಿನಿಂದಲೇ ಅರಸೊತ್ತಿಗೆಯು ನಡೆಯ ಹತ್ತಿತು. ಈ ಎಲ್ಲ ಸಂಗತಿಗಳನ್ನು ಮಾನಸಿಂಹನ ಗುಪ್ತಚಾರರು ಮಾನ ಸಿಂಹನಿಗೆ ಆಗಾಗ್ಗೆ ತಿಳಿಸುತ್ತ ಬಂದಿದ್ದರು. ಈ ಸ್ಥಿತ್ಯಂತರದ ಸಮಗ್ರ ವೃತ್ತಾಂ ತವನ್ನು ಮಾನಸಿಂಹನು ರಿಪೋರ್ಟನರೂಪದಿಂದ ಅಕಬರಬಾದಶಹನಿಗೆ ತಿಳಿ ಸಿದ್ದನು. ಪಠಾಣರೊಡನೆ ಬೇಗನೆ ಯುದ್ಧ ಹೂಡಬೇಕಾಗುವದೆಂಬದು ಆ ಅಂಬರಾಧೀಶ್ವರನಿಗೆ ಗೊತ್ತಾಗಿ ಹೋಗಿತ್ತು; ಆದರೂ ಪಠಾಣರು ಒಪ್ಪಂದ ವನ್ನು ಮುರಿಯುವವರೆಗೆ ತಾನು ಯುದ್ಧವನ್ನು ಆರಂಭಿಸಲಿಕ್ಕಿಲ್ಲೆಂದು ಆ ರಜ ಪೂತವೀರನು ನಿಶ್ಚಯಿಸಿದ್ದನು. ಈ ಪ್ರಸಂಗವನ್ನು ಕುರಿತು ಪುರಿಯ ರಾಜ ನಾದ ರಾಮಚಂದ್ರದೇವನೊಡನೆ ಮಾನಸಿಂಹನ ಆಲೋಚನೆಗಳು ನಡೆದಿ ಧ್ವವು, ಒಂದು ವಾರ ಪುರಿಯಲ್ಲಿ ಇರಬೇಕೆಂದು ಗೊತ್ತು ಮಾಡಿಕೊಂಡಿದ್ದ ಮಾನಸಿಂಹನು, ಹತ್ತು ದಿನಗಳಾದರೂ ಪುರಿಯನ್ನು ಬಿಟ್ಟು ಕಿತ್ತಿದ್ದಿಲ್ಲ. ಹೀಗೆ ಮಾನಸಿಂಹನು ಪುರಿಯಲ್ಲಿ ಹತ್ತು ದಿನಗಳಿದ್ದರೂ, ಉಸ್ಮಾನಖಾನನು ಆತನ ಬೆಟ್ಟಿಗೆ ಬರಲಿಲ್ಲ. ಮಾನಸಿಂಹನು ಕಳುಹಿದ ಪತ್ರಕ್ಕೆ ಆತನು ಸಮಾಧಾನ. ಕರವಾಗಿ ಉತ್ತರವನ್ನೂ ಕಳಿಸಲಿಲ್ಲ. ಇದರಿಂದ, ಬಾದಶಹನ ಸಂತುಷ್ಟ ತೆಅಸಂತುಷ್ಟತೆಗಳೆರಡನ್ನೂ ಉಸ್ಮಾನಖಾನನು ಲಕ್ಷಿಸುವಂತೆ ತೋರುತ್ತಿದ್ದಿಲ್ಲ. ಮಾನಸಿಂಹನ ಮನಸ್ಸನ್ನು ನೋಯಿಸಲಿಕ್ಕೂ ಆ ತರುಣನಬಾಬನು ಹಿಂದು ಮುಂದು ನೋಡುತ್ತಿದ್ದಿಲ್ಲ. ಇದರಿಂದ ಮಾನಸಿಂಹನು ಕ್ರೋಧಸಂತಪ್ತ ನಾಗಿದ್ದನು. ಪಠಾಣರನ್ನು ಮಣ್ಣು ಗೂಡಿಸುವಷ್ಟು ಸೈನ್ಯಬಲವೂ ಆತನ. ಬಳಿಯಲ್ಲಿತ್ತು; ಆದರೆ ಮೇಲೆ ಹೇಳಿದಂತೆ ಪಠಾಣರು ಅಡ್ಡ ಹಾದಿಯನ್ನು ತುಳಿಯದೆ, ಅವರ ಮೇಲೆ ಶಸ್ಸಹಿಡಿಯಬಾರದೆಂದು ಆ ನರವೀರನು ನಿಶ್ನ ಯಮಾಡಿದ್ದನು. ಹೀಗಿರುವಾಗ ಉಸ್ಮಾನನು ಮಾನಸಿಂಹನ ದರ್ಶನಕ್ಕೆ ಬರುವನೆಂಬ. ವರ್ತಮಾನವು ಪುರಿಗೆ ಬಂದಿತು. ಕೆಲವು ಅಗತ್ಯದ ಕಾರಣಗಳ ಸಲುವಾಗಿ ಮಹಾರಾಜರ ದರ್ಶನಕ್ಕೆ ಬರುವೆನೆಂದು ಉಸ್ಮಾನಖಾನನು ಹೇಳಿಕಳಿಸಿದ್ದನು.