ಪುಟ:ತಿಲೋತ್ತಮೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೂರರಸರಳಹೃದಯ ೯೫ ನಿಯಮಿತದಿವಸ ಹಗಲು ಒಂಬತ್ತು ತಾಸಿನ ಸುಮಾರಿನಲ್ಲಿ ಮಾನಸಿಂಹನು ದರ್ಬಾರದಲ್ಲಿ ಕುಳಿತಿದ್ದನು. ಆತನ ಮಿತ್ರಮಂಡಲಿಯೊಡನೆ ರಾಜಾರಾಮ ಚಂದ್ರದೇವನೂ ದರ್ಬಾರದಲ್ಲಿ ಕುಳಿತಿದ್ದನು. ಉಸ್ಮಾನಖಾನನು ದರ್ಶನಕ್ಕೆ ಬರುವ ಕಾಲವು ಸಮೀಪಿಸಿದಂತಾಗಿತ್ತು, ಅಷ್ಟರಲ್ಲಿ ಉಸ್ಮಾನನು ಬಂದ ವರ್ತಮಾನವು ಹತ್ತಿದ ಕೂಡಲೆ, ವಾದ್ಯಗಳು ಬಾರಿಸಹತ್ತಿದವು. ಮಾನ ಸಿಂಹನು ಯಾವತ್ತು ಪರಿವಾರದೊಡನೆ ಉಸ್ಮಾನಖಾನನ ಸನ್ಮಾನಾರ್ಥವಾಗಿ ಎದ್ದು ಹೊರಗೆ ಬಂದನು. ಆತನು ಉಸ್ಮಾನಖಾನನನ್ನು ಉಚಿತವಾಗಿ ಸನ್ಮಾ ನಿಸಿ, ಖಾನನ ಕೈ ಹಿಡಿದು, ಆತನನ್ನು ದರ್ಬಾರದೊಳಗೆ ಕರಕೊಂಡು ಹೋಗಿ, ಆತನಸಲುವಾಗಿಯೇ ಸಿದ್ಧ ಪಡಿಸಿದ ಸಿಂಹಾಸನದಲ್ಲಿ ಆತನನ್ನು ಕುಳ್ಳಿರಿಸಿದನು; ತಾನು ತನ್ನ ಆಸನದಲ್ಲಿ ಕುಳಿತುಕೊಂಡನು. ಪರಸ್ಪರ ಕುಶಲಪ್ರಶ್ನೆಗಳಾ ದವು. ಸ್ವಾಜಾಇಸಾಖಾನನ ಗುಣಗಳನ್ನು ಶ್ಲಾಘಿಸಿ, ಆತನ ಮರಣ ಸ್ಕರ ಮಾನಸಿಂಹನು ವ್ಯಸನ ಪಟ್ಟನು. ಉಸ್ಮಾನನ ಸುಂದರರೂಪವನ್ನೂ, ಆತನ ತೇಜಸ್ವಿ ತೆಯನ್ನೂ ನೋಡಿ ದರ್ಬಾರದ ಜನರು ಆತನ ವಿಷಯವಾಗಿ ಆದರವುಳ್ಳವರಾಗಿದ್ದರು. ಆ ತರುಣ ನಬಾಬನು ಭರಝರಿಯ ಪೋಷಾಕು ಹಾಕಿಕೊಂಡಿದ್ದನು. ಆತನ ಶಿರೋಭೂಷಣದಲ್ಲಿ ಸುಂದರವಾದ ತುರಾಯಿಯು ಒಪ್ಪುತ್ತಿತ್ತು, ಟೊಂಕದ ಎಡಗಡೆಯಲ್ಲಿ ಖಡ್ಡವು ಅಲೆದಾಡುತ್ತಿತ್ತು, ಒಟ್ಟಿಗೆ ಖಾನನ ಪೊಷಾಕು ಅತ್ಯುತ್ಕೃಷ್ಟವಾಗಿತ್ತು; ಆದರೆ ಖಾನನ ಸುಂದರವಾದ ಸೌಮ್ಯ ಮೂರ್ತಿಯು ವಿಚಾರಯುಕ್ತವೂ, ಉದಾಸವೂ ಇದ್ದದ್ದರಿಂದ, ಖಾನನು ಚಿಂತಾಮಗ್ನನಾಗಿರುವಂತೆ ತೋರುತ್ತಿದ್ದನು. ಆಗ ಮಹಾರಾ ಜರು ಉಸ್ಮಾನನನ್ನು ಕುರಿತು-IC ಓಡಿಸಾದಲ್ಲಿ ಇದ್ರೂ, ನನಗೆ ಓಡಿಸಾದ ನಬಾಬರ ದರ್ಶನವಾದೀತೆಂದು ತೋರಿದ್ದಿಲ್ಲ. ತಮ್ಮ ಆಗಮನವಾದದ್ದೆಂದು ಭಾಗ್ಯವೆಂದು ನಾನು ತಿಳಿಯುವೆನು. - ಮಾನಸಿಂಹನ ಈ ಮಾರ್ಮಿಕ ಭಾಷಣವು ಉಸ್ಮಾನನ ಅಂತಃಕರಣಕ್ಕೆ ನಟ್ಟ ತು. ಆತನು ಕೆಲಹೊತ್ತು ವಿಚಾರಮಾಡಿ ತಮ್ಮ ಮಾತು ಯೋಗ್ಯ ವೆಂತಲೇ ಹೇಳಬೇಕಾಗುವದು; ಯಾಕಂದರೆ, ನಮ್ಮ ಮೇಲೆ ತಮ್ಮ ಪ್ರೇಮವೇ ಅಷ್ಟು ಇರುತ್ತದೆ, ಆದರೆ ಮಹಾರಾಜ, ನಾವು ತಮ್ಮ ಗುಲಾಮರು, ಗುಲಾ ಮರ ದರ್ಶನದಿಂದ ಯಾರಿಗಾದರೂ ಆನಂದವಾಗುವ ಸಂಭವವಿರುವದೋ?