ಪುಟ:ತಿಲೋತ್ತಮೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ ತಿಲೋತ್ತಮೆ. ಗುಲಾಮರು ಬಂದದ್ದರಿಂದ ಭಾಗೋದಯವಾಯಿತೆಂದು ಯಾರಾದರೂ ತಿಳ ಕೊಳ್ಳಬಹುದೋ? ಅನ್ನಲು, ಮಾನಸಿಂಹನ ವ್ಯಂಗೋಕ್ಕಿಗೆ ಬಡ್ಡಿ ಸಹಿತ ವಾಗಿ ಉಸ್ಮಾನನು ಉತ್ತರಕೊಟ್ಟಂತೆಯಾದದ್ದರಿಂದ, ಅಂಬರಾಧೀಶ್ವರನು ಸ್ವಲ್ಪ ರೇಗಿಗೆದ್ದನು. ಆತನು ಉಸ್ಮಾನನಿಗೆ-ಒಮ್ಮೊಮ್ಮೆ ಗುಲಾಮರೂ ಸ್ವಾಭಿಮಾನವನ್ನು ಕಾಯ್ದು ಕೊಳ್ಳಬೇಕಾಗುತ್ತದೆ. ಎಷ್ಟೋ ಗುಲಾಮರು ಸ್ವಾಭಿಮಾನ ಪ್ರೇರಿತರಾಗಿ ಸ್ವಾಮಿತ್ವವನ್ನು ಪಡೆದಿರುತ್ತಾರೆ; ಆದರೆ ಅದೆಲ್ಲ ಅವರವರ ಗುಣವನ್ನವಲಂಬಿಸಿರುತ್ತದೆ. ತಾವು ಮೊಗಲರ ಆಧೀನತೆಯನ್ನು ಸ್ವೀಕರಿಸಿರುತ್ತೀರಿ. ಅವರೊಡನೆ ಏಕರೂಪವಾಗುವದು ಬಿಡುವದು ನಿಮ್ಮ ಇಚ್ಛೆಯನ್ನವಲಂಬಿಸಿರುತ್ತದೆ, ಎಂದು ನುಡಿದನು. ಮಹಾರಾಜರ ಈ ಮಾತಿ ನಿಂದ ಖಾನನ ಮನಸ್ಸು ಬಹಳವಾಗಿ ನೊಂದಂತೆ ತೋರಿತು. ಆತನು ದುಃಖಿ ತನಾದನು, ಅವನ ಮೋರೆಯು ಕೆಂಪಾಯಿತು. ಮಾನಸಿಂಹನು ಖಾನನ ಮೋರೆಯಮುಂದೆ ಆತನನ್ನು ಗುಲಾಮನೆಂದು ಕರೆದನು! ಖಾನನು ಅಷ್ಟು ನೊಂದುಕೊಂಡರೂ, ಅಷ್ಟು ಸಿಟ್ಟಾದರೂ ಆತನು ತನ್ನ ಸಿಟ್ಟನೆಲ್ಲ ನುಂಗಿ ಕೊಂಡನು. ಖಾನನ ಸಹನಶೀಲತೆಯು ಅಪೂರ್ವವಾದದ್ದಿ ಇು, ಶೌರ್ಯಸಾಹಸಗಳಲ್ಲಿಯಾದರೂ ಆತನ ಕೈಯು ಮುಂದಾಗಿತ್ತು, ಶೌರ್ಯವಿದ್ದಲ್ಲಿ ಸಹನಗುಣವಿರುವದು ಕೇವಲ ದುರ್ಲಭವಾಗಿದ್ದರೂ, ಅವೆರಡೂ ಗುಣಗಳು ಖಾನನಲ್ಲಿ ವಾಸಿಸುತ್ತಿದ್ದವು. ಆಯೇಷೆಯಷಯದ ಪ್ರೇಮಪ್ರಸಂಗದಲ್ಲಿಖಾನನ ಆತ್ಮಸಂಯಮನವು ಆಗಾಗ್ಗೆ ಪ್ರಕಟವಾದದ್ದನ್ನು ವಾಚಕರು ಅರಿತಿರುವರು. ಆ ಆತ್ಮಸಂಯಮನವನ್ನು ಖಾನನು ಈಗಲೂ ಪ್ರಕಟಿಸಿದನು, ಬಹಳ ಹೊತ್ತು ಸುಮ್ಮನೆ ಕುಳಿತುಕೊಂಡು ಖಾನನು ಮಾನಸಿಂಹನನ್ನು ಕುರಿತು ಎನಯದಿಂದ ಉಸ್ಮಾನಖಾ-ಮಹಾರಾಜ, ನಾನು ತಮ್ಮ ಸಂಗಡ ಜಗಳಾಡಲಿಕ್ಕೆ ಬಂದಿರುವದಿಲ್ಲ. ತಮ್ಮಂಥ ಶ್ರೇಷ್ಠ ಅಧಿಕಾರಿಗಳೊಡನೆ ನನ್ನ೦ಥ ಕುದ ಸೇವಕನು ವಾದಿಸುವದು ಯುಕ್ತವೂ ಅಲ್ಲ, ನಾನು ಎಷ್ಟೋ ಸಂಗತಿಗಳನ್ನು ಕುರಿತು ಮಹಾರಾಜರ ಆಲೋಚನೆಯನ್ನು ಕೇಳಿಕೊಳ್ಳ ಬೇಕೆಂತಲೂ, ಮಹಾ * ರಾಜರನ್ನು ಬೇಡಿಕೊಳ್ಳಬೇಕೆಂತಲೂ ಬಂದಿದ್ದೆನು, ಆದರೆ ನನ್ನ ದುರ್ದವ ದಿಂದ ಮೊದಲ ತುತ್ತಿಗೇ ನೊಣ ತಿಂದಂತೆ ವಿರೋಧ ಉತ್ಪನ್ನವಾಗುವ ಸಂಭ)