ಪುಟ:ತಿಲೋತ್ತಮೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೂರರಸರಳಹೃದಯ ೯೭ ಷಣದ ಯೋಗವು ಆರಂಭಕ್ಕೆ ಒದಗಿತು. ತಮ್ಮ ಸಂಗಡ ನಾನು ಆಡಬಾರ ದಾಗಿದ್ದ ಮಾತುಗಳು ಆಡಿಹೋದವು; ಆದ್ದರಿಂದ ನಾನು ತಮ್ಮ ಸಂಗಡ ಮಾತಾ ಡಲಿಕ್ಕೂ ಕೇವಲ ಅಪಾತ್ರನಿರುತ್ತೇನೆ, ಇನ್ನು ನನಗೆ ಹೋಗಲಪ್ಪಣೆ ಕೂಡ ಬೇಕು; ಆದರೆ ಹೋಗಹೋಗುತ್ತ ನಾನು ಮಹಾರಾಜರನ್ನು ಬೇಡಿಕೊಳ್ಳ ಬೇ ಕೆನ್ನುತ್ತೇನೆ, ನನ್ನ ಬೇಡಿಕೆಯು ಮರ ರಾಜರಮನೆತನಕ್ಕೆ ಸಂಬಂಧಿಸಿದ್ದಿ ರುವ ದರಿಂದ, ಮಹಾರಾಜರ ಮುಂದೆ ಹೇಳಲಿಕ್ಕೂ ನನಗೆ ನಾಚಿಕೆ ಬರುತ್ತದೆ; ಆದರೆ ಕರ್ತವ್ಯವೇದು ಮಹಾರಾಜರಮುಂದೆ ಈಗ ಮಾತಾಡಬೇಕಾಗಿದೆ; ಮಹಾರಾಜರು ಅದನ್ನು ಕೇಳಿಕೊಳ್ಳ ಬಹುದೇನು? ಮಾನಸಿಂಹ-ತಾವು ನಿರ್ಬಾಧವಾಗಿ ಮಾತಾಡಬಹುದು, ಅದನು ಕೇಳಿಕೊಳ್ಳಲು ನಾನು ಸಿದ್ಧನಿರುತ್ತೇನೆ. ತಮ್ಮ ಸಂಗಡ ಯಾವಬಗೆಯಿಂದಲೂ ವಿರೋಧಬೆಳಿಸುವ ಇಚ್ಛೆಯು ನನಗಿರುವದಿಲ್ಲ; ನನ್ನ ಮಾತಿನ ತಾತ್ಪರ್ಯ ವಿಷ್ಟೇ, ನೀವು ನಿಮ್ಮ ಯೋಗ್ಯತೆಗೆ ಅನುರೂಪವಾಗಿ ನಡಕೊಂಡಿದ್ದರೆ, ನಿಮ್ಮ ಹಿತವೇ ಆಗುತ್ತಿತ್ತು. - ಉಸ್ಮಾನಖಾ-ಹೋಗಲಿ, ಇನ್ನು ಆ ವಿರೋಧಕಾರಕವಾದ ಮಾತಿನ ಸುದ್ದಿ ಯೇ ಬೇಡ, ನಾನು ಮಹಾರಾಜರಲ್ಲಿ ಮಾಡಿಕೊಳ್ಳುವ ವಿನಂತಿಯೆ? ನಂದರೆ-ತಾವು ತಮ್ಮ ಪುತ್ರರಾದ ಕುಮಾರಜಗಕ್ಸಿಂಗರನ್ನು ಆಮರಣ ಕಾರಾ ಗೃಹದಲ್ಲಿರಿಸಿರುವಿರೆಂದು ಕೇಳಿದ್ದೇನೆ. ಕುಮಾರರಿಗೆ ಇಂಥ ಭಯಕರ ಶಿಕ್ಷೆ ಯನ್ನು ವಿಧಿಸಲಿಕ್ಕೆ ಮುಂದುಮಾಡಿದ ಹಲವು ಕಾರಣಗಳಲ್ಲಿ, ನಬಾಬನಂದಿ ನಿಯಾದ ಆಯೇಷೆಯಮೇಲೆ ಕುಮಾರರಪ್ರೇಮವಿರುತ್ತದೆಂಬದೊಂದು ಕಾರಣ ವಿರುತ್ತದೆಂತಲೂ ಕೇಳಿದ್ದೇನೆ. ಈ ಮಾತು ನಿಜವೋ? - ಮಾನಸಿಂಹ-ನವಾಬನಂದಿನಿಯಾದ ಆಯೇಷೆಯನ್ನು ಪ್ರೀತಿಸು ವದೂ, ಆಕೆಯು ತನ್ನನ್ನು ಪ್ರೀತಿಸುವಂತೆ ಯತ್ನಿ ಸುವದೂ ನಿಜವಾಗಿ ಜಗ ೬ಂಗನ ಘೋರ ಅಪರಾಧಗಳಾಗಿರುತ್ತವೆ. ಜಗ೦ಗನಿಗೆ ಈಗ ವಿಧಿಸಿರುವ ಶಿಕ್ಷೆಯು, ಆತನ ಈ ಘೋರ ಅಪರಾಧಗಳ ಮಾನದಿಂದ ನನಗೆ ಅಲ್ಪವಾಗಿ ತೋರುತ್ತದೆ: ಆತನು ಕೇವಲ ಉಚ್ಛಂಖಲವೃತ್ತಿಯವನೂ, ರಾಜಕಾರ್ಯ ಗಳ ಅವಹೇಲನ ಮಾಡುವವನೂ, ರಾಜಶತ್ರುವಿನೊಡನೆ ಸ್ನೇಹಬಳಿಸುವವನೂ ಇರುತ್ತಾನೆ. ಈ ಗುರುತರವಾದ ಅಪರಾಧಗಳ ಬಗ್ಗೆ ಆತನಿಗೆ ಆವರಣ