ಪುಟ:ತಿಲೋತ್ತಮೆ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ತಿಲೋತ್ತವೆ. ಕಾರಾಗೃಹವಾಸದ ಶಿಕ್ಷೆಯು ವಿಧಿಸಲ್ಪಟ್ಟಿರುತ್ತದೆ. ಉಸ್ಮಾನಖಾ-ಕುಮಾರರಿಗಾದ ಶಿಕ್ಷೆಯ ಯೋಗ್ಯಾಯೋಗ್ಯವನ್ನು ವಿಚಾರಿಸುವ ಅಧಿಕಾರವು ನನಗಿರುವದಿಲ್ಲ. ಈ ವಿಷಯದಲ್ಲಿ ನನಗೆ ಏನೂ ತಿಳಿಯುವದಿಲ್ಲ. ಜಗಕ್ಸಿಂಗರವರು ನನ್ನ ಶತ್ರುಗಳಾಗಿರುತ್ತಾರೆ. ಅನೇಕ ಕಾರಣಗಳಿಂದ ಅವರ ಸರ್ವಸ್ವದ ನಾಶವಾಗಬೇಕೆಂದು ನಾನು ಇಚ್ಛಿಸುತ್ತೇನೆ; ಆದರೂ ಅಂಥ ವೀರರು ಹೀಗೆ ಸೆರೆಮನೆಯಲ್ಲಿ ವಿಪತ್ತನ್ನು ಭೋಗಿಸು ಕೊಳೆಯುವದು ಎಷ್ಟು ಮಾತ್ರವೂ ನನ್ನ ಮನಸ್ಸಿಗೆ ಬರುವದಿಲ್ಲ. ಮಹಾ ರಾಜ, ನಾನೊಂದು ಗೂಢಸಂಗತಿಯನ್ನು ಹೇಳಬೇಕೆಂದು ಮಾಡಿದ್ದೇನೆ, ಹೇಳಲಿಯಷ್ಟೆ? ಮಾನಸಿಂಹ-ಅವಶ್ಯವಾಗಿ ಹೇಳಬೇಕು, ಸಂಕೋಚಪಡುವ ಕಾರಣ ವಿಲ್ಲ. ಉಸ್ಮಾನ-ಜಗಕ್ಸಿಂಗರವರುಆಯೇಷೆಯನ್ನು ಪ್ರೇಮದೃಷ್ಟಿಯಿಂದ ನೋಡಿ ರುವದಿಲ್ಲ; ಮತ್ತು ತಮ್ಮ ವಿಷಯವಾಗಿ ಆಯೇಷೆಯಲ್ಲಿ ಪ್ರೇಮವು ಉತ್ಪನ್ನವಾ ಗಬೇಕೆಂದು ಅವರು ಯಾವಪ್ರಕಾರದ ಯತ್ನ ವನ್ನೂ ಮಾಡಿರುವದಿಲ್ಲ. ಆಯೇ ಪೆಯು ತಾನಾಗಿ ಜಗಕ್ಸಿಂಗರವರಲ್ಲಿ ಅನುರಕ್ತಳಾಗಿರು ತ್ತಾಳೆ. ಆಕೆಯು ತಾನಾ ಗಿಯೇ ತನ್ನ ಹೃದಯವನ್ನು ಕುಮಾರ ಜಗತ್ಸಂಗರವರಿಗೆ ಒಪ್ಪಿಸಿರುವಳು; ಆದರೆ ಜಗಕ್ಸಿಂಗರವರು ಆಯೇಷೆಯ ವಿನಂತಿಯನ್ನು ಕೂಡ ಮನ್ನಿಸಿರುವದಿಲ್ಲ. ಅವರು ಆಕೆಯೊಡನೆ ಬರಿಯ ಪ್ರೇಮಯುಕ್ತ ಭಾಷಣವನ್ನು ಕೂಡ ಎಂದೂ ಮಾಡಿರುವದಿಲ್ಲ. ಜಗತ್ಸಂಗರವರು ನನ್ನ ಶತ್ರುಗಳಾಗಿದ್ದರೂ, ನಾನು ಸತ್ಯ ವನು ಸ್ಮರಿಸಿ, ಮಹಾರಾಜರವರ ಮುಂದೆ ಈ ಮಾತನ್ನು ಹೇಳುತ್ತೇನೆ. ಮಾನಸಿಂಹ-ಹಾಗಿದ್ದರೆ ನೀವು ಜಗತ್ಸಂಗನೊಡನೆ ದ್ವಂದ್ವ ಯುದ ವನ್ನು ಯಾಕೆ ಮಾಡಿದಿರಿ? ಉಸ್ಮಾನ-ಮಹಾರಾಜ, ಬಹು ಗುಪ್ತವಾಗಿ ನಡೆದಿದ್ದ ಈ ನಮ್ಮ ದ್ವಂಧಯುದ್ದದ ಸಂಗತಿಯು ಸಹ ತಮಗೆ ಗೊತ್ತಿರುತ್ತದೆಂದ ಹಾಗಾಯಿತು! ದ್ವಂದ್ವಯುದ್ಧದ ಕಾರಣವನ್ನು ಹೇಳುತ್ತೇನೆ, ಮಹಾರಾಜರು ಕೇಳ ಬೇಕು. ಆಯೇಷೆಯು ನನ್ನ ಪ್ರಾಣವಾಗಿರುವಳು. ಆಕೆಯ ಆಶೆಯಿಂದಲೇ ನಾನು. ಈವರೆಗೆ ಜೀವಿಸಿರುವೆನು; ಆದರೆ ಆಯೇಷೆಯ ಹೃದಯದಲ್ಲಿ ನನಗೆ ಕಿಂಚಿ