ಪುಟ:ತಿಲೋತ್ತಮೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೂರರಸರಳ “ದಯ ರ್೯ ತ್ಯಾದರೂ ಸ್ಥಳವು ದೊರೆಯಲೊಲ್ಲದು. ಆಕೆಯು ತನ್ನ ಹೃನ್ಮಂದಿರದ ಸಿಂಹಾಸನದಲ್ಲಿ ಜಗಗರವರನ್ನು ಕುಳ್ಳಿರಿಸಿಕೊಂಡಿರುವಳು. ಅ೦ತೇ ನಾನು ಜಗಂಗರವನು ಶತ್ರುವೆಂದು ತಿಳಿದಿದ್ದೇನೆ. ಜಗಂಗರವರು. ಈ ಜಗತ್ತಿನಲ್ಲಿ ಇಲ್ಲದ ಹಾಗದ ಹೊರತು ಆ ಯೇಸೆಯ ಹೃದಯದಲ್ಲಿ ನನಗೆ. ಸ್ಥಳವು ಸಿಗುವಹಾಗಿಲ್ಲ. ಆಯೇಷೆಯ ಹೃದಯದಲ್ಲಿ ಜಗತ್ಸಂಗರವರು ಇರುವ ದನ್ನು ನೋಡಿ ಉcಟಾಗುವ ಸಂತಾಪಾಗ್ನಿ ಯಲ್ಲಿ ನಾನು ದಗ್ಧನಾಗುತ್ತಿರುವೆನು ಹಿಂದಿನ ಆ ದ್ವಂದ್ವ ಯುದ್ದದಲ್ಲಿ ಜಗತ್ಸಂಗರವರನ್ನು ಕೊಲ್ಲುವದು ನನ್ನಿಂದಾ ಗಲಿಲ್ಲ. ಪುನಃ ಅ೦ಥ ಸ೦ಧಿಯು ಒದಗುವ ಕಾಲವನ್ನು ನಾನು ನಿರೀಕ್ಷಿಸು ತಿರುವೆನು; ಆದರೆ ಜಗತ್ಸಂಗರವರು ಆಜನ್ಮ ಕಾರಾಗೃಹದಲ್ಲಿ ಕೊಳೆಯಹತ್ತಿ ದರೆ, ನನಗೆ ಆ ಸಂಧಿಯು ಹೇಗೆ ದೊರೆಯಬೇಕು? ಆಸ೦ಧಿಯು ದೊರೆಯ ದಿದ್ದರೆ ಜಗತ್ತಿಂಗರವರ ಪರಲೋಕ ಯಾತೆಗೆ, ನಾನು ವಿರೋಚಿತವಾದ ಬೇರೆ ಯಾವ ಉಪಾಯವನ್ನು ಯೋಚಿಸಬೇಕು? ಜಗತ್ತಿ೦ಗರವರು ಮರಣ ಹೊಂದುವವರೆಗೆ ಆಯೇಷೆಯು ಅವರನ್ನು ಮರೆಯುವಂತೆಯಿಲ್ಲವಾದ್ದರಿಂದ, ನಾನು ಅವರನ್ನು ಕೊಲ್ಲಬೇಕಾಗಿದೆ, ಆದ್ದರಿಂದ ಮಹಾರಾಜ, ನಾನು ತಮ್ಮನ್ನು ಬೇಡಿಕೊಳ್ಳುವದೇನಂದರೆ, ತಾವು ಕುಮಾರರನ್ನು ಬಂಧುಮುಕ್ಯವಾಡಿ, ರಣಭೂಮಿಗೆ ಕಳಿಸತಕ್ಕದ್ದು. ಮಾನಸಿಂಹ-ನಿಮ್ಮ ಶತ್ರುತ್ವದ ಪ್ರಕಾರವು ವಿಲಕ್ಷಣವಾಗಿರುತ್ತದೆ. ಜಗತ್ನಿಂಗನು ಆಯೇಷೆಯ ಮೇಲೆ ಎಂದೂ ಪ್ರೇಮಮಾಡದೆಯಿರುವದರಿಂದ, ಆತನಂ ನಿರಪರಾಧಿಯೆಂದು ನೀವೇ ಹೇJತ್ತೀರಿ; ಮತ್ತು ಆತನನ್ನು ಕಾರಾ. ಗೃಹದಿಂದ ಮುಕ್ತಮಾಡಿ ರಣಾಂಗಣಕ್ಕೆ ಕಳಿಸಿರಿ, ಆತನನ್ನು ಕಾಲ್ಲುತ್ತೇನೆ. ಎಂದು ನೀವೇ ಹೇಳುತ್ತೀರಿ; ಇದು............ - ಉಸ್ಮಾನ-ನಾನು ಸ್ವಾರ್ಥ ಸಾಧನಕ್ಕಾಗಿ ಹೇಳುತ್ತೇನೆಂದು ತಿಳಿದು, ನನ್ನ ಮಾತನ್ನು ಅಸತ್ಯವೆಂದು ಭಾವಿಸಬೇಡಿರಿ, ಹೇಳಿಕೊಳ್ಳಬೇಕಾದ ದನ್ನು ನಾನು ಹೇಳಿಕೊಂಡೆನು. ಅದನ್ನು ನಡಿಸುವದು-ಬಿಡುವದು ತಮ್ಮ. ಕಡೆಗೆ, ಇನ್ನು ನನಗೆ ಅಪ್ಪಣೆಕೊಡಬೇಕು, ರಾಜಕೀಯವಾದ ಒಂದೆರಡು. ಮಾತುಗಳನ್ನು ತಮ್ಮ ಮುಂದೆ ಹೇಳಬೇಕಾಗಿತ್ತು; ಆದರೆ ಕಾಗದಪತ್ರಗಳ ಸಹಾಯದಿಂದ ಅವನ್ನು ಪರಸ್ಪರರು ತಿಳಿಸಬಹುದಾದ್ದರಿಂದ, ಈಗ ಅವನು