ಪುಟ:ತಿಲೋತ್ತಮೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ತಿಲೋತ್ತಮೆ. ಹೇಳಲವಶ್ಯವೂ ಇಲ್ಲ. ಈಮೇರೆಗೆ ನುಡಿದು ಉಸ್ಮಾನಖಾನನು ಔಪಚಾರಿಕವಾಗಿ ಸಭಿಕರೆಲ್ಲ ರನ್ನು ಸನ್ಮಾನಿಸುತ್ತ, ಸಭಾಮಂಟಪದಿಂದ ಹೊರಬಿದ್ದನು. ಮಹಾರಾ ಜರು ರಾಮಚಂದ್ರದೇವನನ್ನು ಕುರಿತು-ಮೊಗಲರ ಹಾಗು ಪಠಾಣರ ನಡುವೆ ಆಗಿರುವಒಡಂಬಡಿಕೆಯು ಬೇಗನೆ ಮುರಿಯುವದು, ಎಂದು ನುಡಿದು, ಉದ್ವಿಗ್ನ ಚಿತ್ರದಿಂದ ಸಭಾಸ್ಥಾನದಿಂದ ಹೊರಬಿದ್ದು, ಶ್ರೀ ಜಗನ್ನಾಥನ ಆರತಿ ಯನ್ನು ನೋಡುವದಕ್ಕಾಗಿ ಹೊರಟುಹೋದರು. ಅಂದು ಮಹಾರಾಜರ ಚಿತ್ರಕ್ಕೆ ಸಮಾಧಾನವಿದ್ದಿಲ್ಲ. ಕುಮಾರ ಜಗತ್ಸಂಗನ ವಿಷಯವಾಗಿ ಅವರ ಮನಸ್ಸು ಸ್ವಲ್ಪ ತಿರುಗಿತು. ಕುಮಾರನು, ತಾನು ನುಡಿದಂತೆ ಆಯೇಷೆಯ ವಿಷಯವಾಗಿ ಶುದ್ಧಾಂತಃಕರಣನಾಗಿರುವದನೂ ಉಸ್ಮಾನನ ಮುಖದಿಂದ ಕೇಳಿದಾಗಿನಿಂದ, ಅವರಿಗೆ ಒಂದುಬಗೆಯ ಸಮಾಧಾನವಾದಂತಾಗಿತ್ತು. ಆದರೆ ಅಷ್ಟರಿಂದ ತನ್ನ ಮಗನು ನಿರಪರಾಧಿಯೆಂದು ಆ ನ್ಯಾಯ ನಿಷ್ಟುರನಾದ ಅಂಬರಾಧೀಶ್ವರನು ತಿಳಿಯಲಿಲ್ಲ. ಆತನು ಮರುದಿವಸವೇ (ಪುರಿಯಿಂದ ಹೊರಟನು. ನಬಾಬ ಉಸ್ಮಾನಖಾನನು ಮಹಾರಾಜರ ದರ್ಶನಕ್ಕೆ ಹೋದದ್ದರಿಂದ, ಮಹಾರಾಜರು ತಮ್ಮ ನಬಾಬರನ್ನು ಕಾಣುವದಕ್ಕಾಗಿ ಸ್ವರ್ಣಗಡಕ್ಕೆ ಬರುವರೆಂದು ಪಠಾಣರು ತಿಳಿದಿದ್ದರು; ಆದರೆ ಮಾನಸಿಂಹನು ಸ್ವರ್ಣಗಡಕ್ಕೆ ಹೋಗದೆ ಹಾಗೆಯೇ ಹೋದದ್ದರಿಂದ, ಪಠಾಣರಿಗೆ ಬಹಳ ಅಸಮಾಧಾನವಾಯಿತು. ಇದ ರಿಂದ ಉಸ್ಮಾನನ ದೈಷವು ಹೆಚ್ಚಿತು. ಒಡಂಬಡಿಕೆಯನ್ನು ಬೇಗನೆ ಮುರಿಯಬೇಕೆಂದು ಆತನು ನಿಶ್ಚಯಿಸಿದನು, ಮಾನಸಿಂಹನು ತಾನಾಗಿ ಒಡಂಬಡಿಕೆಯನ್ನು ಮುರಿದರೆ ನೆಟ್ಟಗಾಯಿತು, ಇಲ್ಲದಿದ್ದರೆ ತಾನೆ ಯಾವದೊಂದು ನೆವದಿಂದ ಒಡಂಬಡಿಕೆಯನ್ನು ಮುರಿಯಬೇಕೆಂದು ಆ ತರುಣ ಪಠಾಣನು ಹವಣಿಸಹತ್ತಿದನು. ಆತನು ಯುದ್ದ ಸೌರಣೆಯಲ್ಲಿ ತೊಡ ಗಿದನು. ಯುದ್ಧದಲ್ಲಿ ಸೋಲಲಿ, ಗೆಲ್ಲಲಿ; ಯುದ್ಧ ಮಾಡದೆ ಬಿಡಲಿಕ್ಕಿ ” ೦ಬ ನಿಶ್ಚಯದಿಂದ ಯುದ್ಧದ ಸಾಮಗ್ರಿಗಳನ್ನು ಆತನು ಕೂಡಿಸಹತ್ತಿ ದನು. ಆತನ ಒಲುವಿಗನುಸರಿಸಿ, ಆತನ ವಜೀರನಾದ ಖಿಜರಖಾನನೂ ಮನಃಪೂರ್ವಕ ಸಹಾಯಮಾಡಹತ್ತಿದನು. ಇದರಿಂದ ಸರಳಹೃದಯದ