ಪುಟ:ತಿಲೋತ್ತಮೆ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಯೋಗ . ೧೦೧ ಶೂರಉಸ್ಮಾನನ ಯುದೌತುಕವು ದಿನದಿನಕ್ಕೆ ಅಭಿವೃದ್ಧವಾಗ ತೊಡಗಿತು! -(0) ೧೧ನೆಯ ಪ್ರಕರಣ, ವಿಯೋಗ ಒಂದುದಿನ ಅಂತಃಪುರದ ಉದ್ಯಾನದ ಒಂದು ಮಂದಿರದಲ್ಲಿ ಉಸ್ಮಾ ನನು ಒಬ್ಬನೇ ವಿಚಾರಮಾಡುತ್ತ ಕುಳಿತಿದ್ದನು. ಅಷ್ಟರಲ್ಲಿ Gಾರೋ ಹೊರಗೆ ಮಂಜುಲಸರದಿಂದ-ನಬಾಬಸಾಹೇಬರು ಇಲ್ಲಿ ಒಬ್ಬರೇ ಇರುವರೇನು? ಎಂದು ಕೇಳಿದರು. ಕೇಳುವವಳ ದನಿಯು ತೀರಗುರುತಿ ನದಾಗಿದ್ದರೂ ಉಸ್ತಾನನು ಆಶ್ಚರ್ಯಮಗ್ನನಾದನು. ಇತ್ತ ಎಂದೂ ಅಂತಃಪುರದಿಂದ ಹೊರಬೀಳದೆಯಿದ್ದ ಆಯೇಷೆಯು, ತಾನಾಗಿ ತನ್ನನ್ನು ಕೇಳುತ್ತ ಬಂದದ್ದನ್ನು ನೋಡಿ ಆತನಿಗೆ ಆಶ್ಚರ್ಯ ವಾಗದೆಯೇನು ಮಾಡೀತು? ಖಾನನು ಉತ್ಕಂಠಿತನಾಗಿ-ಯಾರು ಆಯೇಷೇ, ಎರಡನೆ ಯವರಾರೂ ಇಲ್ಲ, ನಾನೊಬ್ಬನೇ ಇದ್ದೇನೆ. ಬಾ, ಏನು, ನನ್ನನ್ನು ಕಾಣಲಿಕ್ಕೆ ಬಂದಿಯೋ ಏನು? ನೀನೇಕೆ ಇಷ್ಟು ಆಯಾಸಪಟ್ಟೆ? ಯಾರ ಸಂಗಡಲಾದರೂ ಹೇಳಿ ಕಳಿಸಿದ್ದರೆ, ನಾನೇ ನಿನ್ನ ಬಳಿಗೆ ಬರುತ್ತಿದೆ ನಲ್ಲ,” ಎಂದು ನುಡಿದು, ಆಕೆಯ ಸ್ವಾಗತಕ್ಕಾಗಿ ಆತನು ಪೀಠದಿಂದ ಎದ್ದು ಬಾಗಿಲಿಗೆ ಬಂದನು. ಆಯೇಷೆಯು ತಲೆಬಾಗಿಸಿಕೊಂಡು ಕೋಣೆಯೊ ಳಗೆ ಬಂದಳು, ಖಾನನು ಆಸನದಲ್ಲಿ ಕುಳಿತುಕೊಂಡನು. ಆಯೇಷೆಯೂ ಸಲ. ಅಂತರದಮೇಲೆ ಕುಳಿತುಕೊಂಡಳು. ಆಗ ಉಸ್ಮಾನನು-ಆಯೇಷೇ, ನನ್ನ ಭಾಗ್ಯವು ಯಾಕ ಉದಯವಾಗಿರಬಹುದು? ಒಮ್ಮಿಂದೊಮ್ಮೆ ನನ್ನ ನೆನಪು ನನಗೆ ಯಾಕೆ ಆಗಿರಬಹುದು? ಕರೆಕಳುಹಿದರೆ ನಾನು ಬರಲಿಕ್ಕಿಲ್ಲ ಬ ಅಪನಂಬಿಗೆಯು ನಿನ್ನಲ್ಲಿ ಯಾಕೆ ಉತ್ಪನ್ನವಾಯಿತು? ಹಾಗೆ ಉತ್ಪನ್ನವಾಗ ದಿದ್ದರೆ, ನನ್ನ ತವಕ ನೀನು ನಡೆದು ಬರಲಿಕ್ಕೆ ಯಾಕೆ ಶ್ರಮಬಟ್ಟ? ಹೇಳು,