ಪುಟ:ತಿಲೋತ್ತಮೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ತಿಲೋತ್ತಮೆ. ಎಂದು ಕೇಳಿದನು. ಅದನ್ನು ಕೇಳಿ ತಲೆಬಾಗಿಸಿಕೊಂಡು ಕುಳಿತಿದ್ದ ಆಯೇ ಷೆಯು-ನಬಾಬಸಾಹೇಬ, ನಿಮ್ಮನ್ನು ಕರೆಕಳುಹಲಿಕ್ಕೆ ಪ್ರತಿಬಂಧವೇನೂ ಇದಿಲ್ಲ. ಆದರೆ ಬಹಳ ಹೊತ್ತು ವಿಚಾರಿಸಿದಮೇಲೆ ನಾನೇ ನಿಮ್ಮ ಬಳಿಗೆ ಬರುವದು ಯೋಗ್ಯವಾಗಿ ತೋರಿದ್ದರಿಂದ ಬಂದು ಬಿಟ್ಟೆನು. ಉಸ್ತಾನ, ನಾನು ನಿಮ್ಮನ್ನು ಎಂದೂ ಸ್ಮರಿಸುವದಿಲ್ಲೊಂದು ನಿಮ್ಮ ತಿಳು ವಳಿಕೆ ಯಾಗಿರುವಂತೆ ತೋರುತ್ತದೆ! ಒಳ್ಳೆದು ಅದಿರಲಿ, ನನ್ನ ಮನ ಸ್ಸಿನಲ್ಲಿ ನಿಮ್ಮನು ಏನೋ ಕೇಳ ಬೇಕೆಂದು ಬಂದದ್ದರಿಂದ ನಾನು ನಿಮ್ಮ ಬಳಿಗೆ ಬಂದಿರುವೆನು, ಕೇಳಲಾ? ಎಂದು ಪ್ರಶ್ನೆ ಮಾಡಲು, ಉಸ್ಮಾನನು“ಕೇಳು ಆಯೇಷ, ನಿನ್ನ ಮಾತುಗಳನ್ನು ಕೇಳುವದಕ್ಕಾಗಿ ನನ್ನ ಮನಸ್ಸು ಯಾವಾಗಲೂ ಉತ್ಸುಕವಾಗಿರುತ್ತದೆ. ಕೇಳು ಕೇಳು ಏನು ಕೇಳುವದನ್ನು ಬೇಗನೆ ಕೇಳು; ಆದರೆ ಆಯೇಷೇ, ನಾನು ಎಂದಾ ದರೂ ನಿನಗೆ ಕೇಳಲಿಕ್ಕೆ ಪ್ರತಿಬಂಧಮಾಡಿದ್ದೆ ನೆ? ಅಂದಬಳಿಕ ಇಂದೇ ಯಾಕೆ ನನ್ನ ಒಪ್ಪಿಗೆಯನ್ನು ನೀನು ಕೇಳಿಕೊಳ್ಳುತಿ? ಖಾನನ ಈ ಮಾತುಗಳನ್ನು ಕೇಳಿ ಆಯೇಷೆಯು ತನ್ನ ಸೆರ ಗಿನ ಅಂಚನ್ನು ತೀಡುತ್ತ ಖಾನನ ಮೋರೆನೋಡುತ್ತ, ಸುಮ ನೆ .ನಿಂತುಕೊಂಡಳು. ಆಗ ಉ ಸಾನನು-ಆಯೇಷ, ಮಾತಾಡು, ಸಂಕೊ ಚ ಪಡುವದೇಕೆ? ಏನು ಮಾತಾಡಬೇಕೆಂದು ನಿನು ಬಂದಿರುತ್ತಿ? ಈ ಉಸಾ ನನ ಆಶೆಯೇನಾದರೂ ಸಫಲವಾಗುವ ಹಾಗಿರುತ್ತದೇನು? ಎಂದು ಕೇಳಿದನು. ಆಗ ಆಯೇನೆ ಯು ಸೆರಗಿನ ಅಂಚನ್ನು ಬಿಟ್ಟು ಗಾಂಭೀ ರ್ಯದಿಂದ -1(ನೀವು ಯಾವಾಗಲೂ ಯುದ್ಧದ ಸೌರಣೆಯಲ್ಲಿ ಅಥವಾ ವಿಚಾರದಲ್ಲಿ ಮಗ್ನರಾಗಿರುವದರಿಂದ ನಾನು ನಿಮ್ಮನ್ನು ಕರೆಕಳುಹಲಿಲ್ಲು ಮತ್ತು ಈಗ ಮಾತಾಡಲಿಕ್ಕೆ ಪರವಾನಿಗೆಯನ್ನು ಕೇಳಿದೆನು, ಈಗಾ ದರೂ ತಮಗೆ ಕೆಲಸದ ಅವಸರವಿದ್ದರೆ, ಮತ್ತೆ ಯಾವಾಗಾದರೂ ಕೇಳು ವೆನು, ಬರುತ್ತೇನೆ ಹಾಗಾದರೆ, ಎಂದು ಹೊರಡಲು ಸಿದ್ಧಳಾದಳು. ಆಗ 'ಉಸ್ಮಾನನು ಆಕೆಯನ್ನು ಕುರಿತು ದೀನ ಮುದ್ರೆಯಿಂದ-ಆಯೇಟೇ, ಹೀಗೆ ನೀನು ನನ್ನಲ್ಲಿ ಪರಕೀಯತ್ವವನ್ನು ಭಾವಿಸುವದರಿಂದ ನನಗೆ ಬಹಳ ದುಃಖವಾಗುವದು, ನೀನು ನನ್ನೊಡನೆ ನಿರರ್ಥಕ ಮಾತುಗಳ