ಪುಟ:ತಿಲೋತ್ತಮೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಯೋಗ. ೧da, ಸ್ನಾ ಡುತ್ತ ಕುಳಿತುಕೊಂಡರೂ, ಅವನ್ನು ನಾನು ಬಹು ಮಹತ್ವದ ವೆಂದು ಭಾವಿಸುವೆನು. ಆಯೇಷೆ, ಸಾವಿರಾರು ಕೆಲಸಗಳಿದ್ದರೂ ಅವನ್ನು ಬದಿಗಿಟ್ಟು ನಿನ್ನ ಮಾತುಗಳನ್ನು ನಾನು ಕೇಳುತ್ತ ಕುಳಿತುಕೊಂಡೇನು. ನೀನು ಮಾತಾಡುತ್ತಿರುವಾಗ ನಾನು ಎರಡನೆಯ ಕೆಲಸಗಳನ್ನು ಮಾಡ ಲಿಕ್ಕಿಲ್ಲ. ಹು, ಹೃದಯಕ್ಕೆ ಆನಂದವನ್ನೀಯುವ ಮಾತುಗಳನ್ನು ಆಡ ತೂಡಗು, ಸುಮ್ಮನೆ ಕುಳಿತುಕೊಳ್ಳಬೇಡ. ಆಯೇಷೆ (ಸದ್ದ ದಿತ ಕಂಠದಿಂದ)-ನಬಾಬಸಾಹೇಬರೇ, ನನ್ನನ್ನು ನೀವು ಅತ್ಯಂತವಾಗಿ ಪ್ರೀತಿಸುವಿರಿ, ನನ್ನ ಮೇಲೆ ನಿಮ್ಮ ಪರಮಾ ನುಗ್ರಹವಿರುವದು; ಆದರೆ ಅಧಮಾಧಮಳಾದ ನನ್ನಿಂದ ಇಂದಿನವರೆಗೆ ನಿಮಗೆ ದುಃಖವೇ ಆಗಿರುತ್ತದೆ; ಈಗಂತು............ ಈ ಮೇರೆಗೆ ನುಡಿಯುವಾಗ ಆಯೇ ಷೆಯ ಕಣ್ಣುಗಳು ಅಶ್ರುಪೂರ್ಣ ವಾದವು. ಆಗ ಉಸ್ಯಾನನು ಆತುರತೆಯಿಂದ ಉಸ್ಮಾನ-ಆಯೆಷ, ನೀನೆಂದು ನನಗೆ ದುಃಖ ಪಡಿಸಿರುತಿ? ನೀನು ದುಃಖಪಡಿಸಿದೆಯೆಂದು ನಾ ನೆಂದು ನಿನ್ನ ಮುಂದೆ ಆಡಿದ್ದೇನೆ? ನಾನು ನಿನ್ನ ಮೇಲೆ ಅನುಗ್ರಹಮಾಡಿರುವದಾದರೂ ಏನು ಹೇಳು? ಆಯೇ ಷೇ, ನೀನು ಅಧಮಾಧಮಳಲ್ಲ: ನಮ್ಮ ಹಿತಚಿಂತಕಳಾಗಿರುತ್ತೀ; ನಬಾಬನ ಅಂತಃಪುರದ ಪ್ರಕಾಶವಾಗಿರುತ್ತೀ, ಹಲವುಜನ ಸುಂದರಿಯ ರನ್ನು ನಿನ್ನ ಮೇಲೆ ನಿವಾಳಿಸಿ ಚಲ್ಲಬಹುದು! ಆಯೇಷ, ಇಂದು ನೀನು ಹೀಗೇಕೆ ಮಾಡುತ್ತಿ? ಆಯೇಷೆ-ನನ್ನ ಈ ಕೃ ತಮ್ಮ ದೇಹವನ್ನು ಇಲ್ಲಿ ಇನ್ನು ಇಡಬಾರ ದೆಂದು ಮಾಡಿದ್ದೇನೆ. - ಉಸ್ಮಾನ(ಆರ್ತಸ್ವರದಿಂದ)-ಇಲ್ಲಿ ಇರುವದು ನಿನ್ನ ಮನಸ್ಸಿನಲ್ಲಿ ಇಲ್ಲದಿದ್ದರೆ, ನಿನ್ನನ್ನು ಪ್ರತಿಬಂಧಿಸುವವರು ಇಲ್ಲಿ ಯಾರಿದ್ದಾರೆ ಹೇಳು? ಕದಾಚಿತ್ ನಾನು ನಿನ್ನನ್ನು ಪ್ರತಿಬಂಧಿಸುವೆನೆಂದು ನೀನು ತಿಳಿದಿರಬಹುದು. ಆದರೆ ಯೇಷ, ಆನಿನ್ನನ್ನು ನಾನು ಪ್ರತಿಬಂಧಿಸುವದಂತು ಒತ್ತಟ್ಟಿಗೆ ಇರಲಿ' ನಿನ್ನ ಮನಸ್ಸಿಗೆ ಬಾರದ ಕೆಲಸವನ್ನು ನಾನು ಅಪ್ಪಿ ತಪ್ಪಿ ಯಾದರೂ ಮಾಡಲಿ ಕಿಲ್ಲೆಂಬದನ್ನು ಚೆನ್ನಾಗಿ ನೆನಪಿನಲ್ಲಿಡು. ಅದಿರಲಿ, ಆಯೇಷೇಇಂದು