ಪುಟ:ತಿಲೋತ್ತಮೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ತಿಲೋತ್ತಮೆ. ನೀನು ಹೀಗೆ ಯಾಕೆ ನಿಷ್ಣು ರಮಾತನ್ನು ಆಡುತ್ತೀ? ನೀನು ಇಲ್ಲಿಂದ ಹೋಗ ಲಿಕ್ಕೆ ಯಾರೇನು ಅಂಥ ಅಪರಾಧ ಮಾಡಿದ್ದಾರೆ? ನೀನು ಇಲ್ಲಿ ಇರದಿದ್ದರೆ ಮತ್ತೆ ಯಾರು ಇಲ್ಲಿ ಇರಬೇಕು? ನೀನು ಇಲ್ಲಿ ಇರುವದರಿಂದಲೇ ಉಸ್ಮಾ ನನು ಇಲ್ಲಿಯವರೆಗೆ ಜೀವದಿಂದ ಇದ್ದಾನೆ, ನಿನ್ನ ಪ್ರಾಪ್ತಿಯ ಆಶೆಯನ್ನು ಉಸ್ಮಾನನು ಜೀವವಿರುವವರೆಗೆ ಬಿಡಲಾರನು. ನನ್ನ ಆಶಾಭಂಗ ಮಾಡುವದು ನಿನಗೆ ಯೋಗ್ಯವೇ? ನೀನು ಇಷ್ಟು ಕಠಿಣಹೃದಯಳು ಹೇಗಾದೆ? ನನ್ನನ್ನು ಇಲ್ಲಿ ಬಿಟ್ಟು ನೀನು ಹೋಗುವದಾದರೂ ಎಲ್ಲಿಗೆ? ಆಯೇಷೆ(ಅಳುತ್ತ)-ಉಸ್ಮಾನ, ನಾನೇನು ಹೇಳಲಿ? ನನ್ನನ್ನು ಪ್ರೀತಿ ಸುವದರಿಂದ ನಿನಗೆ ಸುಖವಾಗುವ ಹಾಗಿಲ್ಲ ಅಂದಬಳಿಕ ನಿನ್ನ ಕಣ್ಣೆದುರಿಗೆ ಇದ್ದು ನಾನು ನಿನ್ನನ್ನು ದುಃಖಕ್ಕೆ ಈಡು ಮಾಡಲಾ? ಆದರೆ ಏನು ಮಾಡಲಿ? ನಿನಗೆ ಸುಖವನ್ನುಂಟುಮಾಡುವದು ನನ್ನ ಕೈಯಲ್ಲಿರುವದಿಲ್ಲ. ಈ ಪಾಷಾ ಣಹೃದಯದ ಆಯೇಷೆಯನ್ನು ಪ್ರೀತಿಸಿ, ನೀನು ವ್ಯರ್ಥವಾಗಿ ಶರೀರಶೋಷ ಣಮಾಡಿಕೊಳ್ಳುತ್ತೀ, ಈ ಚಾಂಡಾಲಳು ನಿನ್ನ ಕಣ್ಣು ಮರೆಯಾದಹೊರತು, ನಮ್ಮಿಬ್ಬರಿಗೂ ಸುಖವಾಗುವಹಾಗಿಲ್ಲ; ಆದ್ದರಿಂದಲೇ ನಾನು ಇಲ್ಲಿಂದ ಹೋಗುತ್ತೇನೆ. ಮನಸ್ಸು ಕಲ್ಲುಮಾಡಿಕೊಂಡು ಆಯೇಷೆಯ ಮಾತುಗಳನ್ನು ಕೇಳು ತಿದ್ದ ಖಾನನು ಕ್ಷಣಮಾತ್ರ ತಡೆದು, ಆಯೇಷೆಯನ್ನು ಕುರಿತು ಉಸ್ಮಾನ-ಆಯೇಷ, ಹೀಗೆ ದೀನನಾದ ಉಸ್ಮಾನನ ಪ್ರಾಣಹರಣ 'ಮಾಡುವದರಲ್ಲಿ ನಿನಗೇನು ಲಾಭವಿರುತ್ತದೆ ಹೇಳು? ನೀನು ಇರುತ್ತಿರುವ ಮಹಾಲಿನಲ್ಲಿಯೇ ಈ ದೈವಗೇಡಿಯಾದ ಉಸ್ಮಾನನು ಇರುತ್ತಿರುವದರಿಂದ, ಅವನು ತನ್ನನ್ನು ಭಾಗ್ಯಶಾಲಿಯೆಂದು ಭಾವಿಸುತ್ತ ಬಂದಿದ್ದನು; ಆದರೆ ಅಷ್ಟು ಭಾಗ್ಯವೂ ಅವನ ಪಾಲಿಗೆ ಇರಬಾರದೆಂದು ನಿನಗೆ ತೋರುತ್ತದೋ? ನೀನು ಇಲ್ಲಿ ಇರುವದರಿಂದ ಎಂದಾದರೂ ಆತನಿಗೆ ನಿನ್ನ ದರ್ಶನವಾಗುತ್ತಿತ್ತು; ನಿನ್ನ ಮಧುರ ಭಾಷಣಶ್ರವಣದ ಲಾಭವೂ ಆತನಿಗೆ ದೊರೆಯುತ್ತಿತ್ತು. ಅಷ್ಟರಿಂದಲೇ ಆತನು ಸಮಾಧಾನಮಾಡಿಕೊಳ್ಳುತ್ತಿದ್ದನು. ಆದರೆ ಅದೂ ನಿನ್ನ ಮನಸ್ಸಿಗೆ ಬಾರದಹಾಗಾಯಿತಲ್ಲ! ಆಯೇಷೆ-ಉಸ್ಮಾನ, ನಿನ್ನ ಆತ್ಮಸಂಯಮನವು ಅಪೂರ್ವವಾದದ್ದಿ