ಪುಟ:ತಿಲೋತ್ತಮೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಯೋಗ. ೧೦೫ ರುತ್ತದೆ. ನೀನು ಜಾಣನಿರುತ್ತೀ, ನಿನಗೆ ಎಲ್ಲ ಮಾತಿನ ತಿಳುವಳಿಕೆಯಿರು ತದೆ; ಅಂದಬಳಿಕ ಹೀಗೆ ಯಾಕೆ ಮಾತಾಡುತ್ತೀ? ವಿಚಾರಮಾಡು, ನಾನು ಇಲ್ಲಿಂದ ಹೋಗುವದರಿಂದ ನಿನಗೆ ಸುಖವಾಗುವದೆಂದು ನಾನು ಭಾವಿಸಿರುವ ದಿಲ್ಲ; ನಾನು ನಿನ್ನ ಕಣ್ಣು ಮರೆಯಾಗುವದರಿಂದ, ಕ್ರಮವಾಗಿ ನನ್ನ ವಿಸ್ಕೃತಿಯಾಗುತ್ತ ಹೋಗಿ ಕಡೆಗೆ ನೀನು ನನ್ನ ಹಂಬಲವನ್ನು ಬಿಟ್ಟು ಬಿಡುವ ಸಂಭವವಿರುತ್ತದೆ. - ಉಸ್ಮಾನ-ಆಯೇಷೇ, ಇದು ನಿನ್ನ ಭ್ರಮವು; ಅಥವಾ ತಪ್ಪು ತಿಳುವಳಿಕೆಯು, ದೂರ ಹೋಗುವದರಿಂದ ಪ್ರಣಯಿಜನರಿಗೆ ಎಲ್ಲಿಯಾ ದರೂ ಸುಖವಾಗುವದೇ? ಅವರು ವಿರಹಾಗ್ನಿ ಯಿಂದ ದಗ್ಗ ರು ಮಾತ್ರ ಆಗ ಬಹುದು, ನಾನು ನಿನ್ನ ದರ್ಶನಕ್ಕಾಗಿ ಈವರೆಗೆ ನಾನಾಗಿ ಎಷ್ಟು ಸಾರೆ ಬಂದಿರುತ್ತೇನೆ ಹೇಳು? ಒಮ್ಮೆ ಮಾತ್ರ ಬಂದಿರುವೆನು; ಅಂದಬಳಿಕ ನನ್ನಿ೦ದ ಒಂದು ವಿಧವಾಗಿ ನೀನು ದೂರವಿದ್ದಂತೆಯೇ ಆಗಿರುವದರಿಂದ, ನನ್ನ ಅಂತ ರ್ದಾಹವು ಕಡಿಮೆಯಾಗತಕ್ಕದ್ದು; ಆದರೆ ಕಡಿಮೆಯೆಲ್ಲಿ ಆಗಿದೆ? ಆಯೇ ಷೇ, ಸುಮ್ಮನೆ ಯಾಕೆ ನನಗೆ ಸಮಾಧಾನಹೇಳುತ್ತೀ? ದೂರ ಹೋಗುವದರಿಂ ದಲೇ ದುಃಖಶಮನವಾಗುತ್ತಿದ್ದರೆ, ನಿನ್ನ ಪ್ರೇಮಕ್ಕೆ ಪಾತ್ರನಾಗಿರುವ ಜಗ ೬ಂಗನು ನಿನ್ನಿಂದ ದೂರ ಹೋಗಿರುವಾಗ ನಿನಗೆಲ್ಲಿ ದುಃಖಶಮನವಾಗಿದೆ? ನೀನು ದಿನಕ್ಕೊಂದು ಚಂದ ಸೊರಗುವದಕ್ಕೆ ಕಾರಣವೇನು ಹೇಳು? ಆಯೇಷ-ಗಂಡಸರಿಗೆ ಎಷ್ಟೋ ದೊಡ್ಡ ದೊಡ್ಡ ಕೆಲಸಗಳಿರುತ್ತವೆ; ಬಲಿಷ್ಠವಾದ ಹಲವು ಆಶೆಗಳು ಅವರನ್ನು ಸುತ್ತು ಹಾಕಿರುತ್ತವೆ; ಮನಸ್ಸಿಗೆ ಬಂದರೆ ಅವರು ಹಲವುಜನ ಸ್ತ್ರೀಯರನ್ನು ಲಗ್ನ ವಾಗಬಹುದು; ಬೇರೆ ಉಪ ಸ್ತ್ರೀಯರನ್ನಾದರೂ ರಕ್ಷಿಸಬಹುದು. ಹೀಗೆ ಗಂಡಸರ ಸಮಾಧಾನಕ್ಕೆ ಹಲವು ಮಾರ್ಗಗಳಿರುವವು; ಆದ್ದರಿಂದ ಉಸ್ಮಾನ, ನೀನು ನನ್ನನ್ನು ಮರೆ ತುಬಿಡು, ಪ್ರಯತ್ನ ಮಾಡಿದರೆ, ಬಹುಬೇಗನೆ ನೀನು ನನ್ನನ್ನು ಮರೆ ತುಬಿಟ್ಟ. ಉಸ್ಮಾನ-ಅಶಕ್ಯವು, ಆಯೇಷ, ತೀರ ಅಶಕ್ಯವು! ನನ್ನ ದೇಹಕ್ಕೆ ಕಬರಸ್ಥಾನದೊಳಗಿನ ತಂಪಾದ ಮಣ್ಣು ಹತ್ತಿದ ಬಳಿಕ ಮಾತ್ರ ಅದರ ದಾಹವು ಶಾಂತವಾದರೆ ಆಗಬಹುದು, ನಿನ್ನನ್ನು ನಾನು ಮರೆತೇನೆಂಬ.