ಪುಟ:ತಿಲೋತ್ತಮೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C೦೬ ತಿಲೋತ್ತಮೆ. ಮಾತನ್ನು ನೀನು ಮರೆತುಬಿಡು. ನಿನಗೆ ನಾನು ಒಮ್ಮೆ ಹೇಳಿರುವೆನಷ್ಟೇ, ನಿನ್ನ ಪ್ರಾಪ್ತಿ ಯ ಆಶೆಯಿಂದಲೇ ನಾನು ಪ್ರಾಣಧಾರಣಮಾಡಿರುತ್ತೇನೆ. ಆಯೇ ಷೇ, ಪ್ರಖರವಾದ ಉಷ್ಣತೆಯಿಂದ ಕಲ್ಲ ಕರಗುತ್ತದೆ; ಈಶ್ವರೀ ತಂ ತ್ರದಿಂದ ಉಸುಬಿನ ಬೈಲು ಇದ್ದಲ್ಲಿ ಸಮುದ್ರ ವಾಗುತ್ತದೆ; ಅದರಂತೆ ಉಸ್ಕಾ ನನು ಜೀವದಿಂದ ಇದ್ದರೆ, ಆಯೇಷೆಯು ಎಂದಾದರೂ ಆತನ ಪ್ರೇಮದ ಸ್ವರೂಪವನ್ನು ತಿಳಿದುಕೊಂಡಾಳು, ಆತನ ಪ್ರೇಮಯಾಚನೆಯು ಎಂದಾ ದರೂ ಸಫಲವಾದೀತು ಎಂದು ಆತನು ತಿಳಿದುಕೊಂಡಿದ್ದನು; ಆದರೆ ದುರ್ಭಾ ಗ್ಯನಾದ ಉಸ್ಮಾನನು ಅಷ್ಟು ಪುಣ್ಯವನ್ನು ಮಾಡಿರುವದಿಲ್ಲ; ಅವನ ಕೋರಿ ಕೆಯು ಸಫಲವಾಗುವ ಆಶೆಯು ತೋರುವದಿಲ್ಲ! ಆಯೇಷೆ-ಉಸ್ಮಾನ, ಸತ್ಯವಾಗಿ ಹೇಳುತ್ತೇನೆ, ನಿನ್ನ ಪ್ರೇಮವು ಅತ್ಯಂತ ಶ್ರೇಷ್ಠವಾದದ್ದಿ ರುತ್ತದೆ. ಅದನ್ನು ಹೋಲುವ ಪ್ರೇಮವು ಈ ಜಗ ತಿನಲ್ಲಿ ದೊರೆಯುವದು ಶಕ್ಯವಲ್ಲ. ನಿನ್ನ ಪ್ರೇಮದ ಸ್ವರೂಪವನ್ನು ನಾನು ತಿಳಿದುಕೊಂಡಿಲ್ಲೆಂದು ನೀನು ಅನ್ನು ; ಆದರೆ ಹಾಗೆ ತಿಳಿಯಬೇಡ, ನಿನ್ನ ಪ್ರೇಮದ ಸ್ವರೂಪವನ್ನು ನಾನು ಪೂರ್ಣವಾಗಿ ಅರಿತುಕೊಂಡಿರುತ್ತೇನೆ; ಆದರೆ ನಿನ್ನ ಮನೋದಯದಂತೆ ಅದಕ್ಕೆ ಪ್ರತಿಫಲವನ್ನು ಕೊಡಲು ನಾನು ಸಮರ್ಥಳಿರದ್ದರಿಂದ, ನಾನು ನಿನಗೆ ಅಷ್ಟು ಪಾಷಾಣಹೃದಯಿಯಾಗಿಯೂ, ಅಧಮಾಧಮಳಾಗಿಯೂ ತೋರುತ್ತೇನೆ! ಅಣ್ಣಾ, ಉಸ್ಮಾನ, ನಿನ್ನ ಸಲು ವಾಗಿ ನಾನು ಬೇಕಾದದ್ದನ್ನು ಮಾಡಲು ಸಿದ್ಧಳಿರುತ್ತೇನೆ. ನಿನ್ನ ಹಿತಕ್ಕಾಗಿ ಆಯೇಷೆಯು ತನ್ನ ಪ್ರಾಣವನ್ನಾದರೂ ಈಡಾಡುವಳು! ಆದರೆ ಆಯೇ ಹೆಯ ಅಧಿಕಾರವನ್ನು ಮೀರಿದ ಮಾತಿನ ಸಲುವಾಗಿ ನೀನು ಕೊರಗಹತ್ತಿದರೆ, ಆಕೆಯೇನು ಮಾಡಬೇಕು, ನೀನೇ ಹೇಳು? ನನ್ನ ಹೃದಯವನ್ನು ನಾನು ಒಬ್ಬನಿಗೆ ಕೊಟ್ಟು ಬಿಟ್ಟಿದ್ದೇನೆ. ಅದರಮೇಲೆ ನನ್ನ ಅಧಿಕಾರವು ಉಳಿದಿರು ವದಿಲ್ಲ. ನನಗೆ ಬೇಕಾದಷ್ಟು ದುಃಖವಾಗಲಿ, ಸುಖವಾಗಲಿ; ನನಗೆ ಪರ ಪುರುಷರ ವಿಚಾರಮಾಡಲಿಕ್ಕೆ ಬರುವಹಾಗಿಲ್ಲ, ಉಸ್ಮಾನ, ಈ ವರೆಗೆ ನನ್ನನ್ನು ಕಮಿಸುತ್ತ ಬಂದಂತೆ, ಈಗಾದರೂ ಕ್ಷಮಿಸು, ನಿನ್ನನ್ನು ನಾನು ಕೈಜೋ ಡಿಸಿ ಬೇಡಿಕೊಳ್ಳುತ್ತೇನೆ, ಸೆರಗೊಡ್ಡಿ ಪ್ರಾರ್ಥಿಸುತ್ತೇನೆ. ನನ್ನ ದಿಷ್ಟು ಬೇಡಿಕೆಯನ್ನು ಪೂರ್ಣಮಾಡು, ಈ ದೈವಹೀನಯ ಮಬ್ಬಿಗೆಬಿದ್ದು,