ಪುಟ:ತಿಲೋತ್ತಮೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಯೋಗ. ೧೦೭ ನಿನ್ನ ಆಯುಷ್ಯವನ್ನು ದುಃಖಮಯವಾಗಿ ಮಾಡಿಕೊಳ್ಳಬೇಡ, ನೀನು ದುಃಖದಿಂದ ಕಾಲಹರಣ ಮಾಡುವದನ್ನು ನೋಡಿ, ನನ್ನ ಜೀವವು ತಳಮ ಳಿಸುತ್ತದೆ! ನನಗೆ ಸುಖವಾಗಬೇಕೆಂದು ನೀನು ಬಯಸುತ್ತಿರುವೆಯಷ್ಟೆ? ಹಾಗಿದ್ದರೆ ನೀನು ಅನ್ಯ ಸ್ತ್ರೀಯನ್ನು ಲಗ್ನ ಮಾಡಿಕೊಂಡು ಸುಖಿಯಾಗು. ಈ ಸರ್ಪಿಣಿಯ ಮೋಹಪಾಶದಲ್ಲಿ ಸಿಕ್ಕು ವ್ಯರ್ಥ ಗಾಸಿಯಾಗಬೇಡ, ಅಣ್ಣಾ ಉಸ್ಮಾನ, ನನ್ನ ದಿಷ್ಟು ಮಾತನ್ನು ನಡೆಸುವೆಯಾ? ಇಷ್ಟು ಭಿಕ್ಷೆಯನ್ನು ನನಗೆ ಹಾಕುವೆಯಾ? - ಉಸ್ಮಾನ-ಆಯೇಷೆ, ನೀನು ಬೇಕಾದದ್ದು ಅನ್ನು, ಬೇಕಾದಷ್ಟು ಹೇಳು, ನನ್ನನ್ನು ಬದುಕಿಸುವದೂ, ಕೊಲ್ಲುವದೂ ನಿನ್ನ ಕೈಯಲ್ಲಿರು ತದೆ. ನಿನ್ನ ಪ್ರಾಪ್ತಿಯಾಗಲಿಲ್ಲೆಂದು ಈವರೆಗೆ ಕಾಲಹರಣಮಾಡುತ್ತ ಬಂದಂತೆ, ಮತ್ತು ದುಃಖವನ್ನು ಭೋಗಿಸುತ್ತ ಬಂದಂತೆ ಇನ್ನುಳಿದ ದಿನ ಗಳಲ್ಲಿಯಾದರೂ ನಾನು ಮಾಡುವೆನು. ಇನ್ನು ನಾನು ಮಾಡತಕ್ಕ ಕಡೆಯ ಉಪಾಯವು ಒಂದೇ ಉಳಿದಿರುತ್ತದೆ. ನಿನ್ನ ಹೃದಯವನ್ನು ವ್ಯಾಪಿಸಿ ಕುಳಿತು, ನನ್ನನ್ನು ಹೊರದೂಡಿದ ಆ ಜಗತ್ಸಂಗನನ್ನು ಈ ಲೋಕದಿಂದ ಹೊರಹೊರಡಿಸಿ ಪರಲೋಕಕ್ಕೆ ಕಳಿಸುವೆನು. ವಿಶ್ವಪ್ರಯತ್ನ ಮಾಡಿ ಆತ ನನ್ನು ಕೊಲ್ಲುವೆನು, ಆಮೇಲೆಯಾದರೂ ನಿನ್ನ ಹೃದಯವು ಬರಿದಾಗಿ, ಅದನ್ನು ನನಗೆ ಒಪ್ಪಿಸುವ ಅಧಿಕಾರವು ನಿನಗೆ ಬರುತ್ತದೆಯೋ ಇಲ್ಲವೋ? ಆಗಾದರೂ ನನಗೆ ನಿನ್ನ ಹೃದಯದಲ್ಲಿ ಸ್ಥಳವು ದೊರೆಯುವದೋ ಇಲ್ಲವೊ? ಇಷ್ಟು ಮಾಡಿದರೂ ದುರ್ದೆನದಿಂದ ನಿನ್ನ ಹೃದಯದಲ್ಲಿ ಸ್ಥಳವುನನಗೆಸಿಗದಿದ್ದರೆ, ನನ್ನ ವೈರಿಯನ್ನು ಕೊಂದ ಆನಂದದಿಂದ ನನ್ನ ತಾಪವನ್ನು ಕಡಿಮೆ ಮಾಡಿಕೊಳ್ಳುವೆನು. ಈ ಮಾತುಗಳನ್ನು ಕೇಳಿ ಆಯೇಷೆಯ ಕಣ್ಣುಗಳೊಳಗಿಂದ ಘಳಘಳನೆ ನೀರುಗಳು ಬರತೊಡಗಿದವು. ಆಕೆಯು ಬಿಕ್ಕಿ ಬಿಕ್ಕಿ ಅಳುತ್ತ-ಹಾಯ ಹಾ, ಈ ಜಗತ್ತಿನಲ್ಲಿ ದುಃಖದ ಸರವುಗಳನ್ನು ಹರಿಸುವದಕ್ಕಾಗಿಯ `ಆಯೇಷೆಯ ಉತ್ಪತ್ತಿಯಾಗಿರುವಂತೆ ತೋರುತ್ತದೆ! ನನ್ನ ಪ್ರಿಯಬಂಧುವೇ, 'ಉಸ್ಮಾನ, ನಾನು ನಿನ್ನನ್ನು ಮನಮುಟ್ಟಿ ಪ್ರೀತಿಸುತ್ತೇನೆ; ನೀನು ಸುಖ -ದಿಂದಿರುವದನ್ನು ನೋಡಬೇಕೆಂದು ಇಚ್ಛಿಸುತ್ತೇನೆ; ಆದರೆ ದುರ್ದೈವಿಯಾದ