ಪುಟ:ತಿಲೋತ್ತಮೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ತಿಲೋತ್ತಮೆ. ನನ್ನ ಹಣೇಬರಹದಲ್ಲಿ ಹಾಗಾಗುವ ಯೋಗವಿದ್ದಂತೆ ತೋರುವದಿಲ್ಲ. ಇರಲಿ, ನಿನ್ನ ಮುಂದೆ ಹೇಳಬೇಕಾದದ್ದನ್ನು ನಾನು ಹೇಳಿಬಿಟ್ಟೆನು. ಇನ್ನು ಮೇಲೆ ನಾನು ಹೋಗಿಬರುತ್ತೇನೆ, ಅಂಥದೊಂದು ದುಃಖದ ಪ್ರಸಂಗವೇನಾದರೂ ಬಂದರೆ, ಆಗ ನನ್ನನ್ನು ನೆನಿಸು; ಕೂಡಲೆ ನಾನು ಬರುವೆನು; ಆದರೆ ಅಣ್ಣಾ ಉಸ್ಮಾನಾ, ಈ ಜನ್ಮದಲ್ಲಿ ನಮ್ಮಿಬ್ಬರ ಪುನರ್ದಶ್ರನದ ಯೋಗವಿದ್ದಂತೆ ತೋರುವದಿಲ್ಲ. ಈ ದುರ್ದೈವಿಯಾದ ತಂಗಿಯನ್ನು ಮರೆಯಬೇಡ ಕಂಡೆಯಾ! ಯಾವಾಗಲೂ ನನ್ನ ನೆನಪು ಇರಲಿ; ಆದರೆ ಅಣ್ಣಾ, ಅಲ್ಲ ಅಲ್ಲ, ಹಾಗಲ್ಲ. ನಾನು ಹೇಳುವಾಗ ತಪ್ಪಿದೆನು, ನೀನು ನನ್ನನ್ನು ಸರ್ವಥಾ ಸ್ಮರಿಸಬೇಡ. ನನ್ನನ್ನು ಪೂರಾ ಮರೆತುಬಿಡು! ಆಯೇಷೆಯ ಈ ಹೃದಯ ವಿದಾರಕವಾದ ಭಾಷಣಗಳನ್ನು ಉಸ್ಮಾ ನನು ಮನಸ್ಸು ಕಲ್ಲುಮಾಡಿ ಕೇಳುತ್ತ ಕುಳಿತುಕೊಂಡಿದ್ದನು, ಆಕೆಯ ಮಾತು ಮುಗಿದರೂ ಆತನು ತಗ್ಗಿಸಿದ ಮೋರೆಯನ್ನು ಮೇಲಕ್ಕೆ ಎತ್ತಿದ್ದಿಲ್ಲ. ಸುಮ್ಮನೆ ನೆಲವನ್ನು ನೋಡುತ್ತ ಕುಳಿತು ಬಿಟ್ಟಿದ್ದನು. ಮನಸ್ಸಿನೊಳಗಿನ ವಿಚಾರತರಂಗಗಳ ಗಲಿಬಿಲಿಯು ತಗ್ಗಿ ದಮೇಲೆ ಆತನು ಮೇಲಕ್ಕೆ ಮುಖವೆತ್ತಿ ನೋಡಲು, ಆಯೇಷೆಯು ಕಣ್ಣಿಗೆ ಕಾಣಲಿಲ್ಲ. ಆಗ ಆತನು ನಿಟ್ಟುಸುರು ಬಿಟ್ಟನು; ಹತಬುದ್ಧನಾದನು; ಎರಡೂ ಕೈಗಳಿಂದ ತಲೆಯನ್ನು ಹಿಡಿದು ಕೊಂಡು “ ಹಾಯ್ ಹಾಯ್ ” ಎಂಬ ದುಃಖೋ ದ್ವಾರವನ್ನು ಹೊರಗೆ ಡವಿದನು! - ದುಃಖದ ಹೆಚ್ಚಳದಿಂದ ಉಸ್ಮಾನನಿಗೆ ಏನೂ ತೋಚದಾಯಿತು, ಎಂದೂ ಕಣ್ಣೀರು ಹಾಕಿಗೊತ್ತಿಲ್ಲದ ಆ ವೀರನ ಕಣೋಳಗಿಂದ ನೀರುಗಳು ಒಂದೇ. ಸಮನೆ ಸುರಿಯಹತ್ತಿದವು. ಹೀಗೆ ಬಹಳ ಹೊತ್ತು ಅತ್ತು, ಶೋಕವು ಕಣ್ಣೀ ರಿನ ರೂಪದಿಂದ ಸೋರಿಹೋಗಿ ಅದರ ಕಸುವು ಕಡಿಮೆಯಾದಮೇಲೆ, ಉಸ್ಮಾ ನನಲ್ಲಿ ಆಯೇಷಯವಿಷಯದ ನಿರಾಶೆಯನೆಲೆಯೂರಿತು. ಇನ್ನು ಮೇಲೆ ಏನ. ಮಾಡಿದರೂ ಆಯೇಷೆಯ ಪ್ರಾಪ್ತಿಯು ತನಗೆ ಆಗುವದಿಲ್ಲೆಂದು ಆತನ ತಿಳಿದುಕೊಂಡನು. ಆಯೇಷೆಯ ಹೊರತು ಅನ್ಯ ಸ್ತ್ರೀಯನ್ನು ಲಗ್ನವಾಗ ಲಿಕ್ಕಿಲ್ಲೆಂದಂತು ಆತನು ಮೊದಲೇ ನಿಶ್ಚಯಿಸಿದ್ದನು; ಆದ್ದರಿಂದ ಉಸ್ಮಾನನನ್ನು ಆವರಿಸಿದ್ದ ನೀಚವಾದ ವ್ಯಾಮೋಹದ ಆವರಣವು ಈಗ ಹರಿದುಹೋಗಿ