ಪುಟ:ತಿಲೋತ್ತಮೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಯೋಗ ೧೦೯ -ನೀನು ಸಾದಿ ಆಶ್ರನವು ನನ್ನ ಅಂದ. ನಿರ್ಧಾರದ ಉಸ್ಮಾನನು ಗ್ರಹಣಮುಕ್ತನಾದ ಸೂರ್ಯನಂತೆ ಪ್ರಕಾಶಿಸಹತ್ತಿದನು. ಆಗ ವೀರೋಚಿತವಾದ ಸಾಹಸದ ಊರ್ಮಿಗಳು ಒಂದೊಂದಾಗಿ ಆತನಲ್ಲಿ ಮೊಳೆದೋರಹತ್ತಿದವು. ಆತನು ತನ್ನ ಮನಸ್ಸಿನೊಳಗೆ- CC ಆಯಷೇ, ಪಿಯ ಭಗಿನಿಯಾದ ಆಯೇಷೇ, ನಿನ್ನ ಪವಿತ್ರ ಪ್ರೇಮದ ಗುರುತು ಮೋಹಾಂಧನಾದ ನನಗೆ ಮೊದಲು ಹತ್ತಲಿಲ್ಲ: ಆದರೆ ನಿನ್ನ ನಿರ್ಧಾರದ ಆಚರಣೆಯೆಂಬ ದಿವ್ಯಾಂಜನವು ನನ ಅಂಧತ್ವವನ್ನು ದೂರಮಾಡಿತು. ನೀನು ಸಾಧಿಯರ ಶಿರೋಭೂಷಣವಾಗಿರುತ್ತಿ; ನಮ್ಮಂಥ ಅಧಮ ಪುರು ಷರ ನಷ್ಟವಾದ ಪೌರುಷವನ್ನು ಪುನಃ ಹುಟ್ಟಿಸುವ ದಿವೌಷಧಿಯಾಗಿರುತ್ತೀ! ಎಲೆ ಸತ್ವಶೀಲೆಯಾದ ಸ್ತ್ರೀರತ್ನವೇ, ಏನು ನಿನ್ನ ಪ್ರಭಾವವು, ಏನು ನಿನ್ನ ಮನೋನಿಗ್ರಹವು! ಇಂಥ ಅಕ್ರಮ ಪ್ರೇಮದ ದಿವ್ಯ ಮೂರ್ತಿಯಾದ ನೀನು ಕೈ ಜೋಡಿಸಿ ಪ್ರಾರ್ಥಿಸುತ್ತಿರುವಾಗ, ನಿನ್ನನ್ನು ಹೆಂಡತಿಯಾಗಿ ಗ್ರಹಿಸಲಿಕ್ಕೆ ಒಪ್ಪದ ಆ ಮಹಾನುಭಾವನಾದ ಜಗತ್ಸಂಗನೂ ಧನ್ಯನೆಂತಲೇ ಹೇಳಬೇಕಾಗುವದು, ಪರವರದಿಗಾರ ಅಲ್ಲಾ, ನಿನ್ನ ಲೀಲೆಯು ಅಗಾಧವಾದದ್ದು. < ಆಯೇಷೆ-ಆಯೆಷೆ ” ಯೆಂದು ಯಾವಾಗಲು ಕನ ಕರಿಸುತ್ತ ಕೃಶನಾದ ನನಗೆ ಆಯೇಷೆಯ ಪ್ರಾಪ್ತಿಯಾಗಲೊಲ್ಲದು, ಜಗತ್ತಿಂಗ ನಿಗೆ ಸರ್ವಸ್ವವನ್ನು ಒಪ್ಪಿಸಿ ಈತನೇ ಪತಿಯೆಂದು ನೆರೆನಂಬಿ ಸಾಧ್ಯಶಿರೋ ಮಣಿಯಾಗಿ ಆಚರಿಸುವ ಆಯೇಷೆಯನ್ನು ಹೆಂಡತಿಯೆಂದು ಸ್ವೀಕರಿಸಲಿಕ್ಕೆ ಜಗತ್ತಿಂಗನು ಒಲ್ಲನು. ಇದರಲ್ಲಿ ನನ್ನನ್ನು ಹಳಿಯಬೇಕೋ-ಆಯೇಷ 'ಯನ್ನು ಹಳಿಯಬೇಕೊ-ಜಗ೦ಗನನ್ನು ಹಳಿಯಬೇಕೆ? ವಿಚಾರ ಮಾಡಿ ನೋಡಲು, ನಾವು ಮೂವರೂ ಸತ್ವಶಾಲಿಗಳಾದದ್ದರಿಂದ ಸಮಾನ ಧರ್ಮವುಳ್ಳವರಾಗುವೆವು, ಅಂದಬಳಿಕ ನಮ್ಮ ಮೂವರಲ್ಲಿ ಮಿತ್ರತ್ವವು ಇರ ಲಿಕ್ಕೆ ಬೇಕು; ಹೀಗಿರದೆ, ನನ್ನ ಪಾಣಿಗ್ರಹಣಮಾಡಲು ಒಪ್ಪದೆ, ನನ್ನ ವಿಷ ಯವಾಗಿ ಬಂಧುಪ್ರೇಮವನ್ನು ತಾಳಿರುವ ಆಯೇಷೆಗೆ- “ ನೀನು ನನ್ನ ಪಾಣಿಗ್ರಹಣಮಾಡೆ ” ೦ದು ನಾನು ಒತ್ತಾಯಗೊಳಿಸುವದು ಭಗಿನೀ ದೊ ಹವೂ, ಮಿತ್ರದ್ರೋಹವೂ ಆಗಿರುವದಲ್ಲವೆ? ಆಯೇಷೆಯು ನನ್ನ ತಂಗಿಯು, ನನ್ನ ಪ್ರಿಯ ಮಿತ್ರಳು; ಅಂದಬಳಿಕ ಆಕೆಯ ಪತಿಯಾದ ಜಗತ್ತಿಂಗನನ್ನು ನಾಶಗೊಳಿಸುವದಕ್ಕಾಗಿ ನಾನು ಯತಿ'ಸುವರು ಅತ್ಯಂತ ಕೃತಘ್ನತೆಯಷ್ಟೇ.