ಪುಟ:ತಿಲೋತ್ತಮೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ತಿಲೋತ್ತಮೆ. ಅಲ್ಲ ಮಿತ್ರದ್ರೋಹವೂ ಆಗಿರುವದು, ಮೇಲೆ ಹೇಳಿದಂತೆ ಸತ್ವಶಾಲಿಶ್ವದ ಸಮಾನಧರ್ಮದ ಯೋಗದಿಂದ ಜಗಕ್ಸಿಂಗನು ನನ್ನ ಮಿತ್ರನಾಗಿರುತ್ತಾನೆ; ಆದ್ದರಿಂದ ನಾನು ಇನ್ನು ಮೇಲೆ ಜಗಕ್ಸಿಂಗನಿಗೂ ಕೇಡು ಬಗೆಯತಕ್ಕದ್ದಲ್ಲ! ಈಮೇರೆಗೆ ನುಡಿದು ಜಗಕ್ಸಿಂಗನು ಪರಮೋ ದಾರನಾಗಿ, ತನ್ನ ಆ ಔದಾರ್ಯದ ವೈಭವದಲ್ಲಿ ಕೆಲಕಾಲ ಆನಂದಪಟ್ಟನು. ಆಗ ಆತನಿಗೆ ಜಗತ್ತೇ ಆನಂದಮಯವಾಗಿ ತೋರಹತ್ತಿತು. ಈವರೆಗೆ ಆತನಿಗೆ ಎಂದೂ ಆಗದೆಯಿದ್ದ ಸಮಾಧಾನವು ಈಗ ಆಯಿತು! ೧೨ನೆಯ ಪ್ರಕರಣ, ಅಲೌಕಿಕ ಸಿರತ್ನವು! ಆG ಮಾನಸಿಂಹನು ಜಗನ್ನಾಥಪುರಿಯ ಯಾತ್ರೆಯನ್ನು ಮಾಡಿಕೊಂಡು ಪಾಟಣಾಕ್ಕೆ ಬಂದದ್ದನ್ನು ವಾಚಕರು ಬಲ್ಲರಷ್ಟೇ? ಪಠಾಣರೊಡನೆ ಒಡಂಬಡಿಕೆ ಯಾಗಿ ಸದ್ಯಕ್ಕೆ ಯುದ್ಧವು ನಿಂತಂತೆಯಾದ್ದರಿಂದ, ಮಾನಸಿಂಹಗೆ ಸ್ವಲ್ಪ ವಿಶ್ರಾ೦ ತಿಯು ದೊರೆತಹಾಗೆ ಆಗಿದ್ದರೂ, ಆತನ ಮನಸ್ಸಿಗೆ ಸ್ವಸ್ಥತೆಯಿದ್ದಿಲ್ಲ. ಚಂಚ ಲಸ್ವಭಾವದ ಉದ್ದಟರಾದ ಪಠಾಣರು, ಬಹುದಿನ ಒಡಂಬಡಿಕೆಯ ಆತಂಕಕ್ಕೆ ಒಳಗಾಗಿ ಇರದೆ, ಬೇಗನೆ ಒಡಂಬಡಿಕೆಯನ್ನು ಮುರಿದು, ಅವರು ಮತ್ತೆ ತನ್ನೊಡನೆ ಯುದ್ಧಕ್ಕೆ ಅಣಿಯಾಗುವರೆಂದು ಆ ರಜಪೂತ ವೀರಾಗ್ರಣಿಯು ತಿಳಿದುಕೊಂಡಿದ್ದನು; ಆದ್ದರಿಂದ ಆತನ ಯುದ್ದ ವಿಷಯಕವಾದ ತಾಪವು ನಿಜ ವಾಗಿ ದೂರವಾದಂತೆಯಾಗಿದ್ದಿಲ್ಲ. ಇದಲ್ಲದೆ, ತನ್ನ ಮಗನಾದ ಜಗತ್ಸಂಗ ನನ್ನು ಆಜನ್ಮ ಕಾರಾಗೃಹದಲ್ಲಿರಿಸಿದ್ದು, ಬರಬರುತ್ತ ಆ ರಜಪೂತ ವೀರನ ಪಶ್ಚಾತ್ತಾಪಕ್ಕೆ ಕಾರಣವಾಗತೊಡಗಿತ್ತು, ಉಸ್ಮಾನನು ಪುರಿಯಲ್ಲಿ ಮಾನ ಸಿಂಹನನ್ನು ಪ್ರತ್ಯಕ್ಷ ಕಂಡು, ಆಯೇಷೆಯ ವಿಷಯವಾಗಿ ಜಗತ್ತಿಂಗನ. ಮನಸ್ಸು ಪವಿತ್ರವಾಗಿರುತ್ತದೆಂದು ಹೇಳಿದಾಗಿನಿಂದತು, ತನ್ನ ಮಗನು, ಅಂಥ ಘೋರ ಅಪರಾಧಿಯಲ್ಲಿಂದು ಮಾನಸಿಂಹನ ಮನಸ್ಸಿಗೆ ಹೊಳೆಯಹ