ಪುಟ:ತಿಲೋತ್ತಮೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

na ಅಲೌಕಿಕ ಸ್ತ್ರೀರತ್ನವು! ತಿತು; ಆದರೂ ಜಗತ್ತಿಂಗನು ತನ್ನ ಮುಂದೆ ಮಾಡಿದ ಪ್ರತಿಜ್ಞೆಯನ್ನು ಲೆಕ್ಕಿಸದೆ, ತಿಲೋತ್ತಮೆಯ ಪ್ರಾಪ್ತಿಗಾಗಿ ಹೆಣಗಿದ್ರೂ, ತನ್ನ ಒಪ್ಪಿಗೆಯನ್ನು ಪಡೆಯದೆ ತಿಲೋತ್ತಮೆಯನ್ನು ಲಗ್ನವಾದರೂ ಮಾನಸಿಂಹನಿಗೆ ಮಹಾಪ ರಾಧಗಳಾಗಿ ತೋರಿ, ಆ ಅಪರಾಧಗಳಿಗಾಗಿ ಮಗನನ್ನು ತಾನು ಆಜನ್ಮ ಕಾರಾಗೃಹದಲ್ಲಿ ಇಟ್ಟಿದ್ದು ನ್ಯಾಯವೆಂದು ಆತನು ತನ್ನ ಸಮಾಧಾನಮಾಡಿ ಕೊಳ್ಳುತ್ತ ಬಂದಿದ್ದನು; ಆದರೂ ಪುತಮೋಹವು ಮಾನಸಿಂಹನನ್ನು ನೋಯಿ ಸದೆ ಬಿಡುತ್ತಿದ್ದಿಲ್ಲ. ಆತನು ಏಕಾಂತದಲ್ಲಿ ಕುಳಿತಾಗ ಮಗನನ್ನು ನೆನಿಸಿ ವ್ಯಸನಪಡುತ್ತಿದ್ದನು. ಹೀಗೆ ಒಂದು ದಿನ ಮಾನಸಿಂಹನು ಏಕಾಂತದಲ್ಲಿ ವ್ಯಸನ ಪಡುತ್ತಿರುವಾಗ, ಒಬ್ಬ ಸೇವಕನು ಬಂದು-ಸರಕಾರ, ಕೆಲವು ಜನ ಪಠಾ ಣರು ಒಂದು ಮೇಣೆಯನ್ನು ಜಾಗ್ರತಿಯಿಂದ ರಕ್ಷಿಸುತ್ತ ಪಾಟಣಾಕ್ಕೆ ಬರು ವದಕ್ಕಾಗಿ ಹೊರಟಿದ್ದರು. ಮಾರ್ಗದಲ್ಲಿ ಅಕಸ್ಮಾತ್ತಾಗಿ ನಮ್ಮ ಕೆಲವರು ಸೈನಿ ಕರು ಅವರಿಗೆ ಎದುರಾದರು. ಪಠಾಣರೊಡನೆ ಒಡಂಬಡಿಕೆಯಾಗಿರುವದರಿಂದ, ಹೀಗೆ ಬರುವ ಪಠಾಣರನ್ನು ನೋಡಿ ನಮಗೆ ಶಂಕಿಸಲಿಕ್ಕೆ ಕಾರಣವೇನೂ ಇದ್ದಿಲ್ಲ, ಆದರೆ ನಮ್ಮನ್ನು ನೋಡಿದ ಕೂಡಲೆ ಆ ಪಠಾಣರು ಮೇಣೆಯನ್ನು ಇಳಿಸಿ ಸುಮ್ಮನೆ ನಿಂತುಕೊಂಡರು. ಆಗ ನಾವು ಅವರನ್ನು ಕುರಿತು-ನೀವು ಎಲ್ಲಿಯವರು? ಹೀಗೆ ಮೇಣೆಯನ್ನು ಮಾರ್ಗದಲ್ಲಿ ಯಾಕೆ ನಿಲ್ಲಿಸಿದಿರಿ? ಎಂದು ಪ್ರಶ್ನೆ ಮಾಡಿದೆವು; ಆದರೆ ನಮ್ಮ ಪ್ರಶ್ನೆಗಳಿಗೆ ಪಠಾಣರು ಸರಿಯಾಗಿ ಉತ್ತರ ಕೊಡದೆ, ಎಟ್ಟತನದಿಂದ ನಡೆದುಕೊಂಡದ್ದರಿಂದ ನಮ್ಮಿಬ್ಬರಲ್ಲಿ ಬಹಳ ಮಾತು ಗಳು ಬಳಿಸಿಹೋಗಿ, ಕೈಗೆ ಹತ್ತುವ ಪುಸಂಗವು ಬಂದಿತು, ಆಗ ಮೇಣೆ ಯೊಳಗಿದ್ದ ಸ್ತ್ರೀಯು ತಮ್ಮವರನ್ನು ಸುಮ್ಮನಿರಿಸಿ, ನಮ್ಮನ್ನು ಕುರಿತು ಅಪ್ಪಗಳಿರಾ, ಸುಮ್ಮನೆ ಜಗಳವೇಕೆ? ನಾನು ಮಾನಸಿಂಹರವರನ್ನು ಕಾಣು ವದಕ್ಕಾಗಿಯೇ ಬಂದಿದ್ದೇನೆ; ನನ್ನನ್ನು ಈಗ ಅವರ ಬಳಿಗೆ ಕರಕೊಂಡು ಹೋಗಿರಿ, ಎಂದು ಹೇಳಿದ್ದರಿಂದ, ನಾವು ಆ ಮೇಣೆಯನ್ನು ಪಠಾಣರ ಪರಿ ವಾರದೊಡನೆ ಹೊರಡಿಸಿಕೊಂಡು ಬಂದಿದ್ದೇವೆ. ಈಗ ಆ ಸ್ತ್ರೀಯು ದರ್ಶನಾ ಪೇಕ್ಷಿಯಾಗಿ ಪ್ರಭುಗಳ ಒಪ್ಪಿಗೆಯ ಹಾದಿಯನ್ನು ನೋಡುತ್ತಲಿದ್ದಾಳೆ. ಅಪ್ಪಣೆಯಾದರೆ ಕರಕೊಂಡು ಬರುವೆನು, ಎಂದು ಹೇಳಿದನು. ಸೇವಕನ ಈ ಮಾತುಗಳನ್ನು ಕೇಳಿ ಮಾನಸಿಂಹನು ನನ್ನ ದರ್ಶ