ಪುಟ:ತಿಲೋತ್ತಮೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ತಿಲೋತ್ತಮೆ. ನಕ್ಕೆ ಬರುವ ಪಠಾಣಸೀಯು ಯಾರಿರಬಹುದೆಂದು ಶಂಕಿಸು, ಆಕೆಯನ್ನು ಕರತರುವದಕ್ಕಾಗಿ ಸೇವಕನಿಗೆ ಆಜ್ಞಾಪಿಸಿದನು. ಸ್ವಲ್ಪ ಹೊತ್ತಿನಮೇಲೆ ಬುರುಕಿಯನ್ನು ಹಾಕಿಕೊಂಡಿದ್ದ ಒಬ್ಬಳೇ ಒಬ್ಬ ಸ್ತ್ರೀಯು ಮಾನಸಿಂಹನ ಎದುರಿಗೆ ಬಂದು ನಿಂತುಕೊಂಡಳು. ಆ ಸ್ತ್ರೀಯ ಈ ದಿಟ್ಟತನವನ್ನು ನೋಡಿ ಮಾನಸಿಂಗನು ಸೋಜಿಗಪಟ್ಟು ಅತ್ಯಂತ ಸೌಜನ್ಯದಿಂದ ಆಕೆಯನ್ನು ಕುರಿತು-ತಾಯಿ, ನೀನು ಯಾರು? ಪರಸ್ತ್ರೀಯರ ಮಾನಭಂಗ ಮಾಡು ವದು ಹಿಂದುಗಳ ಶೀಲವಲ್ಲ. ನಮ್ಮ ಸೈನಿಕರು ವಿವೇಕವಿಲ್ಲದೆ ನಿನ್ನನ್ನು ಇಲ್ಲಿಗೆ ಕರತಂದಿರಬಹುದು, ನಿನ್ನ ಇಚ್ಛೆಯ ವಿರುದ್ಧವಾಗಿ ನಿನ್ನೊಡನೆ ಮಾತಾಡಲಿಕ್ಕಾಗಲಿ, ನಿನ್ನ ಮುಖಾವಲೋಕನ ಮಾಡುವದಕ್ಕಾಗಲಿ ನಾನು ಇಚ್ಛಿಸುದಿಲ್ಲ. ನನ್ನ ಬಳಿಯಲ್ಲಿ ನಿನ್ನ ಕೆಲಸವೇನು ಇಲ್ಲದಿದ್ದರೆ, ನಾನು ನಿನ್ನನ್ನು ಪ್ರತಿಬಂಧಿಸುವದಿಲ್ಲ. ನಿನ್ನ ಇಚ್ಛೆ ಬಂದಲ್ಲಿ ಸಂತೋಷದಿಂದ ಹೊರಟುಹೋಗಬಹುದು, ಪಠಾಣರೊಡನೆ ಈಗ ಒಡಂಬಡಿಕೆಯಾಗಿರುವ ದರಿಂದ, ಒಬ್ಬರು ಒಬ್ಬರಲ್ಲಿಗೆ ಹೋಗಲಿಕ್ಕೆ ಬರಲಿಕ್ಕೆ ಪ್ರತಿಬಂಧವೇನೂ ಇರು ವದಿಲ್ಲ, ಎಂದು ನುಡಿಯುತ್ತಿರಲು, ಆ ಸ್ತ್ರೀಯು ತನ್ನ ಬುರುಕಿಯನ್ನು ತೆಗೆದು ಮಾನಸಿಂಗನಿಗೆ ವಿನಯದಿಂದ ಮುಜುರೆಮಾಡಿ ನಿಂತುಕೊಂಡಳು. ಆಗ ಸಜೀವವಾದ ದೇವತಾಮೂರ್ತಿಯು ತನ್ನ ಗೌರವದಿಂದ ನೋಡುವವ ರಲ್ಲಿ ಲೀನತೆಯನ್ನುಂಟುಮಾಡುತ್ತ, ತನ್ನ ಮಹಿಮೆಯನ್ನೂ, ಶೋಭೆ ಯನ್ನು ಪಸರಿಸುತ್ತಿರುವಂತೆ ಮಾನಸಿಂಗನಿಗೆ ತೋರಿತು. ಆಗ ಆತನು ಆ ಸ್ತ್ರೀಯನ್ನು ಕುರಿತು~ II ಸುಮಂಗಲೆಯೇ, ನೀನು ನನ್ನ ಹೊಟ್ಟೆಯ ಮಗಳಂತೆ ಇರುತ್ತೀ, ನೀನು ಯಾರು? ನನ್ನ ಬಳಿಗೆ ಯಾಕೆ ಬಂದೆ? ಸಂತೋ ಷದಿಂದ ಹೋಗಲಿಕ್ಕೆ ನಾನು ಸಮ್ಮತಿಪಡುತ್ತಿದ್ದರೂ, ನೀನು ನನ್ನ ದರ್ಶನಾ ಪೇಕ್ಷೆಯನ್ನು ಯಾಕೆ ಮಾಡಿದೆ? ನನ್ನ ಪ್ರಶ್ನೆಗಳಿಗೆ ನೀನು ಉತ್ತರಕೊಡ ಲೇ ಬೇಕೆಂದು ನನ್ನ ಆಗ್ರಹವಿಲ್ಲ. ಮನಸ್ಸಿಲ್ಲದಿದ್ದರೆ ಈಗಾದರೂ ನೀನು ನಿನ್ನ ಇಚ್ಛಬಂದಲ್ಲಿಗೆ ಹೋಗಬಹುದು, ಅನ್ನ ಲು, ಆ ಸ್ತ್ರೀಯು-ತಾವು ಹೊಟ್ಟೆಯ ಮಗಳೆಂದು ತಿಳಿದಿರುವದರಿಂದ, ನಾನಾದರೂ ತಮ್ಮನ್ನು ಹಡೆದ ತಂದೆಗೆ ಸಮಾನವೆಂದು ತಿಳಿಯುತ್ತೇನೆ, ನನ್ನ ತಂದೆಯ ಸಂಗಡ ಮಾತಾಡಲಿಕೆ ಮಗಳಿಗೆ ಸಂಕೋಚವೇನು? ನಾನು ನಬಾಬ ಕಾತಲುಖಾನನ ಸಾಕುಮಗಳು;