ಪುಟ:ತಿಲೋತ್ತಮೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೌಕಿಕ ಸ್ತ್ರೀರತ್ನವು ೧೧೩ ನನ್ನ ಹೆಸರು ಆಯೇಷ. ಪ್ರಳುಗಳ ಬಳಿಯಲ್ಲಿ ಇದಕ್ಕಿಂತ ಹೆಚ್ಚಿಗೆ ವಿಜ್ಞಾ ಪಿಸುವದು ಏನೂ ಇರುವದಿಲ್ಲ. (C ಆಯೇಷೆ ” ಎಂಬ ಶಬ್ದ ವು ಕಿವಿಗೆ ಬಿದ್ದ ಕೂಡಲೆ ಮಾನಸಿಂಗನಿಗೆ ಬಹಳ ಆಶ್ಚರ್ಯವಾಯಿತು. ಆಯೇಷೆಯು ಹೀಗೆ ಸಾಮಾನ್ಯಳಂತೆ ಅಕ ಸ್ಮಾತ್ ಬಂದದ್ದರ ಕಾರಣವನ್ನು ಆತನು ತಿಳಿಯದಾದನು. ಇದರಿಂದ ಆತನ ಕೌತುಕವು ಮತ್ತಿಷ್ಟು ಹೆಚ್ಚಿ, ಆತನು ಆಯೇಷೆಯನ್ನು ಕುರಿತು, ಮಾನಸಿಂಗ-ಆಯೇಷೇ, ನೀನು ಹೆಚ್ಚಿಗೆಯೇನು ಹೇಳದಿದ್ದರೂ, ನಿನ್ನಿಂದ ಹಲವು ಸಂಗತಿಗಳನ್ನು ನಾನು ಕೇಳಿಕೊಳ್ಳಬೇಕಾಗಿದೆ; ಆದರೆ ನೀನು ನನ್ನ ಪ್ರಶ್ನೆಗಳಿಗೆ ಸಮಾಧಾನಕಾರಕಗಳಾದ ಉತ್ತರಗಳನ್ನು ಕೊಟ್ಟರೆ, ನನಗೆ ಬಹಳ ಸಂತೋಷವಾಗುವದು. ಆಯೇಷ-ಮಹಾರಾಜ, ಆಯೇಷೆಯ ಕಳೆದುಹೋಗಿದ್ದ ಆಯುಷ್ಯ ದೊಳಗಿನ ಯಾವ ಸಂಗತಿಗಳೂ ಗುಪ್ತವಾಗಿಯಿಡುವಂತೆ ಉಳಿದಿರುವದಿಲ್ಲ; ಅಂದಬಳಿಕ ನಾನು ಸುಳ್ಳು ಹೇಳಿ ಮಹಾರಾಜರನ್ನು ಯಾಕೆ ಅಸಮಾಧಾನ ಪಡಿಸಲಿ? ಕೇಳಬೇಕಾದದ್ದನ್ನು ಮಹಾರಾಜರು ನಿಶ್ಯಂಕೆಯಿಂದ ಕೇಳಬೇಕು. ಮಾನಸಿಂಹ-ನೀನು ಸ್ವಜನರನ್ನು ಓಡಿಸಾಪ್ರಾಂತದಲ್ಲಿ ಬಿಟ್ಟು ಒಬ್ಬಳೇ ಪಾಟಣಾಕ್ಕೆ ಯಾಕೆ ಬಂದೆ? ಆಯೇಷೆ ( ವಿಚಾರಿಸುತ್ತ ಕೆಲಹೊತ್ತು ಸುಮ್ಮನೆನಿಂತು )-ಕುಮಾರ ಜಗನ್ಸಿಂಗರವರನ್ನು ಬಂಧುಮುಕ್ತಮಾಡಿಸುವದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಈ ಮಾತನ್ನು ಕೇಳಿ ಮಾನಸಿ೦ಗನಿಗೆ ಆಶ್ಚರ್ಯವಾಯಿತು. ಆತನು ಮಗನ ಕಾರಾಗೃಹವಾಸಕ್ಕಾಗಿ ಮನಸ್ಸಿನಲ್ಲಿ ಯಾವಾಗಲೂ ಚಿಂತಿಸುತ್ತಿರುವ ದನ್ನು ವಾಚಕರುಮರೆತಿರಲಿಕ್ಕಿಲ್ಲ: ಆದರೆ ಈವೊತ್ತಿನವರೆಗೆ ಕುಮಾರನ ಮುಕ್ತ ತೆಯವಿಷಯವಾಗಿ ಒಂದಾದರೂಆಲೋಚನೆಯು ಆತನಿಗೆಹೊಳೆದಿದ್ದಿಲ್ಲ. ಈಗ ಆಯೇಷೆಯು ಅನಾಯಾಸವಾಗಿ ಮಗನ ಬಂಧವಿಮೋಚನಕ್ಕಾಗಿ ಯತ್ನಿಸ ತೊಡಗಿರುವದನ್ನು ನೋಡಿ, ಆತನಿಗೆ ಒಂದು ವಿಧದಿಂದ ಸಮಾಧಾನವಾ ದಂತಾಯಿತು. ಅವನು ಬಹು ಸಮಾಧಾನದಿಂದ ಆಯೇಷೆಯನ್ನು ಕುರಿತು ಮಾನಸಿಂಗ-ಅಪರಾಧಿಯಾದ ಕುಮಾರನ ಬಂಧವಿಮೋಚನಕ್ಕಾಗಿ