ಪುಟ:ತಿಲೋತ್ತಮೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ತಿಲೋತ್ತಮೆ. ನೀನೇನು ಉಪಾಯವನ್ನು ಯೋಚಿಸಿರುವೆ? ಆಯೇಷ-ಬಾದಶಹರ ಸನ್ನಿಧಿಗೆ ಕುಮಾರ ಜಗತ್ತಿಂಗರವರ ಒಂದು ಅರ್ಜಿಯನ್ನು ಕಳಿಸಬೇಕೆಂದು ಮಾಡಿದ್ದೇನೆ. ಮಾನಸಿಂಹ-ಸುಬೇದಾರನಾದ ನನ್ನನ್ನು ಕೇಳದೆ, ಪ್ರಜೆಗಳಾದ ನೀವು ಬಾದಶಹರ ಕಡೆಗೆ ಅರ್ಜಿಯನ್ನು ಕಳಿಸುವದು ಹೇಗೆ? ಆಯೇಷ-ತಮ್ಮ ಮುಖಾಂತರವಾಗಿಯೇ ಬಾದಶಹರವರ ಕಡೆಗೆ ಅರ್ಜಿಯನ್ನು ಕಳಿಸಬಹುದಾಗಿತ್ತು, ಆದರೆ ಕುಮಾರರಿಗೆ ಶಿಕ್ಷೆಯನ್ನು ವಿಧಿಸಿದವರು ತಾವೇ ಆಗಿರುವದರಿಂದ, ತಮ್ಮ ಮುಖಾಂತರ ಅರ್ಜಿಯನ್ನು ಕಳಿಸುವದರಲ್ಲಿ ಪ್ರಯೋಜನ ಕಾಣದಿರಲು, ನಾವು ಪರಭಾರೆ ಅರ್ಜಿ ಯನ್ನು ಕಳಿಸುವದು ಯೋಗ್ಯವೆಂದು ತಿಳಿದೆವು, ಕುಮಾರರ ಬಂಧ ವಿಮೋಚನಕ್ಕಾಗಿ ತಾವೇ ಪ್ರಯತ್ನ ಮಾಡಿದಲ್ಲಿ ತಮ್ಮ ಕೀರ್ತಿಗೆ ಕಲಂಕ ಉಂಟಾದೀತೆಂದು ತಿಳಿದು, ಈ ಮಾರ್ಗದಿಂದ ಕೆಲಸವನ್ನು ಮಾಡಬೇ ಕಾಯಿತು. ಮಾನಸಿಂಹ-( ಮನಸ್ಸಿನಲ್ಲಿ ಸಂತೋಷ ಪಡುತ್ತ)-ಅರ್ಜಿಯು ಬಾದಶಹರ ಬಳಿಗೆ ಕಳಿಸಲ್ಪಟ್ಟಿದೆಯೋ ಇಲ್ಲವೋ? - ಆಯೇಷೆ-ಅರ್ಜಿಯನ್ನು ಬರೆದು, ಅದರ ಮೇಲೆ ಕುಮಾರರ ಸಹಿ ಯನ್ನು ಮಾಡಿಸಿ, ಅದನ್ನು ಸೇವಕನ ಸಂಗಡ ಬಾದಶಹರಿಗೆ ಮುಟ್ಟು ವಂತೆ ಯೋಗ್ಯ ಬಂದೋಬಸ್ತಿನಿಂದ ಕಳಿಸಿ ಕೊಟ್ಟಿರುತ್ತದೆ, ಸೇವಕನು ಇಷ್ಟು ಹೊತ್ತಿಗೆ ಪ್ರಯಾಗವನ್ನು ದಾಟಿ ಹೋಗಿರಬಹುದು. - ಮಾನಸಿಂಹ-ಜಗಿಂಗನು ಕಾರಾಗೃಹದಲ್ಲಿರುವಾಗ ಆತನ ಸಹಿ ಯನ್ನು ಹೇಗೆ ಮಾಡಿಸಿದಿರಿ? ಏನು ಸುಳ್ಳು ಸಹಿಯನ್ನು ಮಾಡಿಗೀಡಿ ದಿರೋ ಏನು? ಆಯೇಷ-ಮಹಾರಾಜರೇ, ಹಾಗೇನು ಸುಳ್ಳು, ಸಹಿ ಮಾಡಿರುವ ದಿಲ್ಲ. ಕುಮಾರರು ಎಲ್ಲ ವೃತ್ತಾಂತವನ್ನು ಕೇಳಿಕೊಂಡು, ಅರ್ಜಿಯಮೇಲೆ ತಮ್ಮ ಸಹಿಯನ್ನು ಮಾಡಿರುತ್ತಾರೆ. ಮಾನಸಿಂಹ-ನೀವು ಕಾರಾಗೃಹದಲ್ಲಿ ಅವರ ಬಳಿಗೆ ಅರ್ಜಿಯನ್ನು ತಕ್ಕೊಂಡು ಹೋಗಿದ್ದಿರೋ?