ಪುಟ:ತಿಲೋತ್ತಮೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೌಕಿಕ ಸ್ತ್ರೀರತ್ನವು! ೧೧೫ ಆಯೇಷೆ-ಆದಕಾಗಿ ನಾವು ಬಹಳ ಶ್ರಮಪಡಬೇಕಾಯಿತು, ದ್ರವ್ಯದ ಆಶೆಹಚ್ಚಿ ಕಾರಾಗೃಹದ ಕಾವಲುಗಾರರನ್ನು ವಶಮಾಡಿಕೊಂಡೆವು. ಮಾನಸಿಂಹ-ಆಯೇಷೇ, ನೀನು ಬಹು ಬುದ್ದಿ ಶಾಲಿಯಾದ ಸ್ತ್ರೀಯಿ ರು; ಈವರೆಗೆ ಮಾಡಿದ್ದೆಲ್ಲ ನೆಟ್ಟಗಾಯಿತು; ಆದರೆ ಬಾದಶಹರ ಬಳಿಗೆ ಅರ್ಜಿಯು ಮುಟ್ಟುವ ಸಂಭವಹೇಗೆ? ಆಯೇಷೆ-ಅದರ ವ್ಯವಸ್ಥೆಯನ್ನಾದರೂ ಚನ್ನಾಗಿ ಮಾಡಿದ್ದೇನೆ. ಅರ್ಜಿಯು ದಿಲ್ಲಿಗೆ ಹೋದ ಕೂಡಲೆ ಅದು ಬಾದಶಹರ ಕೈಗೆ ಸೇರು ವಂತೆ ಮಾಡಿದ್ದೇನೆ; ಕೂಡಲೆ ನಮ್ಮ ಇಚ್ಛೆಯಂತೆ ಬಾದಶಹರು ಕುಮಾ ರರ ಬಂಧ ವಿಮೋಚನೆಯನ್ನು ಮಾಡುವದರಲ್ಲಿ ಸಂದೇಹವಿಲ್ಲ. ಮಾನಸಿಂಹ-ಆದರೆ ಆಯೇಷೇ, ನೀನು ಅಪರಾಧಿಯಾದ ಕುಮಾ ರನ ಬಂಧ ವಿಮಾಚನಕ್ಕಾಗಿ ಇಷ್ಟು ಕಷ್ಟಪಟ್ಟು ಯಾಕೆ ಪ್ರಯತ್ನ ಮಾಡುತ್ತೀ? ಈ ಪ್ರಶ್ನವನ್ನು ಕೇಳಿ ಆಯೇಷೆಯು ಲಜ್ಜೆಯಿಂದ ತಲೆಯನ್ನು ಬಾಗಿಸಿದಳು. ಆಕೆಯ ಮುಖದಿಂದ ಮಾತುಗಳು ಹೊರಡದಾದವು. ಮಾನಸಿಂಹ-ನನ್ನ ಪ್ರಶ್ನೆಗೆ ಉತ್ತರಕೊಡಲಿಕ್ಕೆ ನೀನು ಸಂಕೋ ಚಪಡುವಂತೆ ತೋರುತ್ತದೆ, ಆದರೆ ನಾನು ಅದಕ್ಕಾಗಿ ಆಗ್ರಹಮಾಡುವ ದಿಲ್ಲ. ಅದಿರಲಿ, ನೀನು ಸ್ವತಃ ಎಂದಾದರೂ ಜಗಂಗನನ್ನು ಕಾಣುವ ದಕ್ಕಾಗಿ ಕಾರಾಗೃಹಕ್ಕೆ ಹೋಗಿದ್ದೆ ಯೋ? ಆಯೇಷೆ-ಇಲ್ಲ. ಮಾನಸಿಂಹ-ಆತನನ್ನು ಕಾಣುವ ಇಚ್ಛೆಯು ನಿನಗೆ ಇರುವದೋ? ಆಯೇಷೆ-ಇಲ್ಲ. ಮಾನಸಿಂಹ--ನಿನ್ನ ವೃತ್ತಾಂತವನ್ನು ಆತನಿಗೆ ತಿಳಿಸಿರುವೆಯೋ? ಆಯೇಷೆ-ಇಲ್ಲ. ಮಾನಸಿಂಹ- ಜಗಂಗನ ಬಂಧವಿಮೋಚನೆಯಾದರೆ ಪರಸ್ಪರ. ನಿಮ್ಮಿಬ್ಬರ ದರ್ಶನವಾಗಬಹುದೋ? ಆಯೇಷ-ಇಲ್ಲ. ಆಯೇಷೆಯ ಪ್ರಣಯದ ವೃತ್ತಾಂತವನ್ನು ಮಾನಸಿಂಗನು ಕೇಳಿ