ಪುಟ:ತಿಲೋತ್ತಮೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ತಿಲೋತ್ತಮೆ. ದ್ದನು. ಈ ರಮಣಿಯ ಅತ್ಯಂತಪ್ರೇಮವು ಜಗತ್ತಿಂಗನ ಮೇಲಿರುತ್ತದೆ ಬದಾದರೂ ಆತನಿಗೆ ಗೊತ್ತಿತ್ತು, ಜಗತ್ತಿಂಗನ ಬಂಧವಿಮೋಚನಕ್ಕಾಗಿ ಆಯೇಷೆಯು ಈ ಪರಿ ಸಾಹಸ ಮಾಡುವದನ್ನು ನೋಡಿ, ಜಗಂಗನ ಹಿತಕ್ಕಾಗಿ ಈಕೆಯು ತನ್ನ ಪ್ರಾಣವನ್ನಾದರೂ ಅರ್ಪಿಸದೆಯಿರಳೆಂಬದು ಮಾನಸಿಂಗನ ಮನಸ್ಸಿಗೆ ಹೊಳೆದು, ಇಂಥ ಅಕ್ರಮಪ್ರೇಮದ ಆಯೇ ಷೆಯನ್ನು ತನ್ನ ಮಗನಾದ ಜಗತ್ತಿಂಗನು ಪ್ರೀತಿಸದಿರುವದನ್ನು ನೆನಿಸಿ, ಆತನು ಅಸಮಾಧಾನಪಟ್ಟನು. ಆಯೇಷೆಯು ಜಗತ್ತಿಂಗನ ಹಿತಕ್ಕಾಗಿ ಇಷ್ಟು ಕಷ್ಟ ಪಡುತ್ತಿದ್ದರೂ, ಆತನ ದರ್ಶನಾಪೇಕ್ಷೆಯನ್ನು ಕೂಡ ಮಾಡ ದಷ್ಟು ಆಕೆಯು ನಿಸ್ಸಹಳಾಗಿರುವದನ್ನು ನೋಡಿ, ಮಾನಸಿಂಹನ ವಜ) ದಂಥ ಹೃದಯವು ಕೂಡ ಕರಗಿತು. ಆತನಲ್ಲಿ ಆಯೇಷೆಯ ವಿಷಯವಾಗಿ ದಯೆಯು ಉತ್ಪನ್ನವಾಯಿತು, ಜಗತ್ಸಂಗನ ಬಂಧವಿಮೋಚನೆಯಾದ ನಂತರ ಈ ದೇವಕನೆಯ ಮಾನಸಿಕಸಂತಾಪವನ್ನು ದೂರಮಾಡಲು ಮನ ಸ್ಸಿನಲ್ಲಿ ಆತನು ಸಂಕಲ್ಪಿಸಿದನು. ಆತನು ಆಯೇಷೆಯಮನಸ್ಸನ್ನು ಪೂರ್ಣ ತಿಳಿದುಕೊಳ್ಳುವದಕ್ಕಾಗಿ ಆಕೆಯನ್ನು ಕುರಿತು-ತಂಗೀ, ಜಗ೦ಗನು ಕೃತಘ್ನನು, ಅತ್ಯಂತನೀಚನು; ಅಂಥವನ ಬಂಧವಿಮೋಚನಕ್ಕಾಗಿ ನೀನೇಕೆ ಇಷ್ಟು ಕಷ್ಟ ಪಡುವೆ? ಎಂದು ಪ್ರಶ್ನೆ ಮಾಡಲು, ಆಯೇಷೆಯು ಏನೂ ಉತ್ತರಕೊಡಲಾರದೆ ಸುಮ್ಮನೆ ನಿಂತುಕೊಂಡಳು. ಆಕೆಯು ಮೋರೆ ತಗ್ಗಿಸಿ ನೆಲವನ್ನು ನೋಡಹತ್ತಿದಳು, ಅಕೆಯ ಮುಖವು ಚಿಂತೆಯಿಂದ ಆವರಿಸಿತು' ಆಗ ಮಾನಸಿಂಗನು, ಮಾನಸಿಂಗ-ಸುಶೀಲೆಯೇ, ಯಾಕೆ? ಈ ಪ್ರಶ್ನೆಗೆ ಉತ್ತರಕೊಡಲಿ ಕ್ಕೆ ನೀನೇಕೆ ಹಿಂದುಮುಂದು ನೋಡುವೆ? ಆಯೇಷ-ಮಹಾರಾಜ, ನಾನೇನು ಉತ್ತರ ಕೊಡಲಿ? ದೀಪಕ್ಕೆ ('ನೀನು ಮಂದಿಯ ಸಲುವಾಗಿ ಯಾಕೆ ಸುಡುತ್ತಿ” ಯೆಂದು ಯಾರಾದ ರೂ ಕೇಳಿದರೆ, ಅದು ಏನು ಉತ್ತರ ಕೊಡಬೇಕು? ಜ್ವಲನ ವ್ಯಾಪಾರವು ದೀ ಪದ ಸ್ವಭಾವಗುಣವಾಗಿರುವಂತೆ, ಜಗಕ್ಸಿಂಗರ ಸಲುವಾಗಿ ತಾಪ ಪಡುವದು ನನ್ನ ಸ್ವಭಾವ ಗುಣವಾಗಿರುತ್ತದೆ, ಮೇಲಾಗಿ ಜಗ ಂಗರು ಕೃತಘ್ರ ರಲ್ಲ; ಮ ಹಾರಾಜರಿಗೆ ತೋರುವಂತೆ ಅವರು ನೀಚರೂ ಆಗಿರುವದಿಲ್ಲ. ಅವರು ಪಾಪ