ಪುಟ:ತಿಲೋತ್ತಮೆ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೌಕಿಕ ಸ್ಥಿರತ್ನವು. ೧೧೬ ಭೀರುಗಳೂ, ಅತ್ಯಂತ ಉಜ್ವಲ ವಿಚಾರದ ಧೀರ ಪುರುಷರೂ ಆಗಿರುವರು. - ಮಾನಸಿಂಹ-ಅಮಾ, ಆಯೇಷಾ, ನೀನು ಸ್ತ್ರೀಯರೊಳಗಿನ. ಅಲೌಕಿಕ ಸ್ತ್ರೀ ರತ್ನವಾಗಿರುತ್ತೀ; ಚಿಂತೆಮಾಡಬೇಡ. ನಾನು ನಿಶ್ಚಯ ವಾಗಿ ನಿನ್ನ ಈ ದುಃಖ ನಿವಾರಣಕ್ಕಾಗಿ ಯತ್ನಿಸುವೆನು. ಅಯೇಷೆ-ನನ್ನಂಥ ಚಿಕ್ಕವಯಸ್ಸಿನವಳ ಮುಖದಿಂದ ಇಂಥ ಮಾತುಗಳು ಹೊರಡಬಾರದಾಗಿತ್ತು; ನಾನಾಗಿ ನನ್ನ ಸ್ಥಿತಿಯನ್ನು ತಮ್ಮಂಥ ವಯೋವೃದ್ಧರಮುಂದೆ ಎಂದೂ ಒಡನುಡಿಯತಕ್ಕದಿದ್ದಿಲ್ಲ; ಆದರೆ ಮಹಾರಾಜ, ಉಪಾಯವಿಲ್ಲದೆ ನುಡಿಯಬಾರದ್ದನ್ನು ನಾನು ತಮ . ಮುಂದೆ ನುಡಿದು ಬಿಟ್ಟೆನು. ಯಾಕಂದರೆ, ನಾನು ಮೊದಲೇ ಸತ್ಯ ವನ್ನು ನುಡಿಯುವ ಬಗ್ಗೆ ತಮಗೆ ವಚನ ಕೊಟ್ಟಿದ್ದೇನೆ, ನಾನು ಅಸ ತ್ಯವನ್ನು ನುಡಿದಿದ್ದರೆ, ತಮಗೆ ಅಸಮಾಧಾನವಾಗುತ್ತಿತ್ತೆಂದು ತಿಳಿದು, ನಾನು ಸತ್ಯವನ್ನೇ ಹೇಳಿದೆನು, ನನ್ನ ಈ ನಿರ್ಲಜ್ಜ ತನಕ್ಕಾಗಿ ನನ್ನನ್ನು ಮಹಾರಾಜರು ಕ್ಷಮಿಸಬೇಕು. ಮಾನಸಿಂಹ-ಆಯೇಷೆ, ನಿನ್ನ೦ಥ ಸದ್ಗುಣಮಂಡಿತ ಸ್ತ್ರೀರತ್ನದ ತಪ್ಪನ್ನು ಕ್ಷಮಿಸದಿರಲಿಕ್ಕೆ ನಾನೆಷ್ಟ ರವನು? ನೀನು ಆಪರಾಧಮಾಡಿದ್ದ ರಷ್ಮೆ ನಾನು ಕ್ಷಮಿಸುವದು! ಆದರೆ ಚೆನ್ನಾಗಿ ನೆನಪಿನಲ್ಲಿಡು; ಉದಾ ರಾಂತಃಕರಣದ ಸ್ತ್ರೀಯರನ್ನು ಮಾನಸಿಂಗನು ಬಹಳವಾಗಿ ಮನ್ನಿಸು ವನು, ಅಂಥವರ ದುಃಖವನ್ನು ಕಣ್ಣಿನಿಂದ ನೋಡುವದು ಆತನಿಂದ ಎಂದಿಗೂ ಅಗದು, ಆದರೆ ತಂಗಿ, ಪಠಾಣರು ಪುನಃ ಒಡಿಸಾವಾಂತ ದಲ್ಲಿ ಗೊಂದಲಹಾಕಹತ್ತಿರುವದರಿಂದ, ನಾನು ಯುದ್ಧಕ್ಕಾಗಿ ನಾಳೇ . ಅಲ್ಲಿಗೆ ಹೋಗಬೇಕಾಗಿದೆ. ಯುದ್ಧವು ಮುಗಿಯುವವರೆಗೆ ನೀನು ನನ್ನ ಬಳಿಯಲ್ಲಿರಬೇಕೆಂದು ನಾನು ಇಚ್ಛಿಸುತ್ತೇನೆ. ಆಯೇಷ, ಯುದ್ದದವಿ. ಷಯವಾಗಿ ನೀನೇನಾದರೂ ಹೇಳುವೆಯೇನು? ಆಯೇಷ- ಮಹಾರಾಜ, ಯುದ್ದವಿಷಯವಾಗಿ ನಾನೇನು ಹೇಳಲಿ? ಯುದ್ಧ, ರಾಜ್ಯ ಪದ್ಧತಿ, ಪ್ರಜಾಹಿತ ಮೊದಲಾದವುಗಳ ಕಡೆಗೆ ಲಕ್ಷವನ್ನು ಪೂರಯಿಸುವದು ಬಾದಶಹರ ಕೆಲಸವು, ಅವು ನನ್ನಂಥ ಹೆಂ ಗಸಿಗೆ ಹೇಗೆ ತಿಳಿಯಬೇಕು?