ಪುಟ:ತಿಲೋತ್ತಮೆ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

TC೮ ತಿಲೋತ್ತಮೆ. ಮಾನಸಿಂಹ- ನಬಾಬಉಸ್ಮಾನಖಾನನಿಗೆ ನೀನೇನಾದರೂ ಈ ಯುದ್ಧದ ಸಂಬಂಧದಿಂದ ಹೇಳಬಹುದೇನು? ಮಾನಸಿಂಹ-ನಾನೇನೂ ಹೇಳಲಾರೆನು, ನಬಾಬರು ಸ್ವತಃ ಶೂರರೂ, ತರುಣರೂ, ಬಾಹದ್ದರರೂ ಆಗಿರುತ್ತಾರೆ. ಅವರು ಜಾಗ್ರತೆಯಿಂದಲೂ `ಬುದ್ದಿ ಚಾತುರ್ಯದಿಂದಲೂ ತಮ್ಮ ಕೆಲಸಗಳನ್ನು ಮಾಡುವರು. ಅಂದ ಬಳಿಕ ನನ್ನಂಥ ನಿರ್ಬುದ್ಧ ಸ್ತ್ರೀಯು ಅವರಿಗೆ ಅಲೋಚನೆಯೇನು ಹೇಳಬೇಕು? ಅವರಿಗೆ ಅಲೋಚನೆ ಹೇಳುವಮನಸ್ಸು ಮಾಡುವದು ಮೂರ್ಖ ತನವೇ ಸರಿ, ಅವರು ತಮ್ಮ ಕೃತ್ಯದ ಕಡೆಯ ಪರಿಣಾಮವೇನಾದೀತೆಂ ಬದನ್ನು ಮುಂಗಂಡು, ತಮಗೆ ಜಯಪ್ರಾಪ್ತಿಯಾಗುವಂತೆ ಅನುಕೂಲ ಮಾಡಿಕೊಂಡು, ಅವರು ಇಷ್ಟು ಹೊತ್ತಿಗೆ ಯುದ್ಧಕ್ಕಾಗಿ ಟೊಂಕಕಟ್ಟಿ ಸಹ ನಿಂತಿರಬಹುದು. ಮಾನಸಿಂಹ-ಹೀಗೋ, ಒಳ್ಳೆದು, ಸದ್ಯಕ್ಕೆ ನೀನು ನಮ್ಮ ಬಳಿಯ ಇರಬೇಕಾಗುವದು. ಉರ್ಮಿಳಾರಾಣಿಯವರು ನಿಮ್ಮ ಯೋಗಕ್ಷೇಮವನ್ನು ವಿಚಾರಿಸುವಂತೆ ನಾನು ವ್ಯವಸ್ಥೆ ಮಾಡುವೆನು. ಯುದ್ಧವು ಮುಗಿದ ಬಳಿಕ ನಾನು ನಿನ್ನನ್ನು ಕಾಣುವೆನು. ಆಗ ಏನು ಮಾಡುವೆನೆಂಬ ದನ್ನು ಈಗ ಹೇಳುವದಿಲ್ಲ, ನಾನು ನಿನ್ನನ್ನು ಉರ್ಮಿಳಾರಾಣಿಯ ಬಳಿಗೆ ಕಳಿಸುವೆನು. ಈಗ ಹೆಚ್ಚಿಗೆ ಮಾತಾಡಲಿಕ್ಕೆ ನನ್ನ ಮನಸ್ಸು ಸ್ವಸ್ಥವಾಗಿಲ್ಲ. ' ಆಯೇಷ-ಮಹಾರಾಜರೇ, ತಮ್ಮ ಆಜ್ಞೆಗೆ ನಾನು ಹೊರತಿಲ್ಲ: ಆದರೆ ನನ್ನ ಆಪ್ತನಾದ ತೇ ಜಖಾನನೆಂಬವನು ಇಲ್ಲಿ ಪಾಟಣಾಪಟ್ಟಿ 8ಣದಲ್ಲಿರುವನು; ಆತನನ್ನು ಕಂಡು ಸನ್ನಿಧಿಗೆ ಬರುವೆನು, ನನ್ನ ಈ ಮಾತನ್ನು ನಡಿಸುವ ಕೃಪೆ ಮಾಡಬೇಕು. ---(9)