ಪುಟ:ತಿಲೋತ್ತಮೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ನೆಯ ಪ್ರಕರಣ, ಒ೦ದು ವೃಕ್ಷಕ್ಕೆ ಎರಡು ಬಳ್ಳಿಗಳು. 9C% ಹೀಗೆ ಆಯೇಷೆಯು ಬೇಡಿಕೊಳ್ಳಲು, ಅದಕ್ಕೆ ಒಪ್ಪಿಕೊಂಡು ಅಂತಃಪುರಕ್ಕೆ ಸಾಗಿದ್ದ ಮಾನಸಿಂಹನ ಮನಸ್ಸಿನಲ್ಲಿ ಬಗೆಬಗೆಯ ವಿಚಾರ ಗಳು ಉತ್ಸವಾದವು. ಪಠಾಣರು ಪುನಃ ಯುದ್ಧಕ್ಕೆ ಸನ್ನದ್ದರಾದ್ದ ರಿಂದುಂಟಾದ ಸಂತಾಪ, ಒಂದು ಬಗೆಯಿಂದ ನಿರಪರಾಧಿಯಾಗಿದ್ದ ತನ್ನ ಮಗನ ಆಜನ್ಮ ಕಾರಾಗೃಹವಾಸದಿಂದುಂಟಾದ ವಿಷಾದ, ಆಯೇಷೆಯ ಸದ್ಗುಣ-ಸೌಭಾಗ್ಯದ ಯೋಗದಿಂದುಂಟಾದ ಕೌತುಕ ಇವು ಆತನ ಮನಸ್ಸನ್ನು ಚಂಚಲವಾಗಮಾಡಿದವು. ಆದರಲ್ಲಿ ರಾಜಲಕ್ಷ್ಮಿಯ ಒಂ ದೊಂದೇ ಸದ್ಗುಣಗಳು ಆತನಿಗೆ ನೆನಪಾಗಲು, ಆ ಕನ್ಯಾರತ್ನವು ಯಾರಾಗಿರಬಹುದೆಂಬದನ್ನು ತಿಳಕೊಳ್ಳುವ ಇಚ್ಛೆಯು ಆತನಲ್ಲಿ ಉತ್ಪನ್ನ ವಾಯಿತು, ಉರ್ಮಿಳಾರಾಣಿಯ ಪ್ರೀತಿಗೆ ಪಾತ್ರಳಾದ ರಾಜಲಕ್ಷ್ಮಿಯ ಪರಿಚಯವನ್ನು ವಾಚಕರು ಇಷ್ಟರಲ್ಲಿ ಮರೆತಿರಲಿಕ್ಕಿಲ್ಲ. ಹೀಗೆ ಮಾನ ಸಿಂಹನು ಚಿ೦ತಾಯುಕ್ತವಾದ ಔತುಕ್ಯದಿಂದ ಉರ್ಮಿಳಾರಾಣಿಯ ಮಂದಿರವನ್ನು ಪ್ರವೇಶಿಸಲು, ರಾಣಿಯುನಗುತ್ತ ಸಮ್ಮುಖಳಾಗಿ, ಪ್ರೀತಿ ಯಿಂದ ಆತನನ್ನು ಬರಮಾಡಿಕೊಂಡಳು. ಆಗ ಮಾನಸಿಂಹನು ಉರ್ಮಿ ಳಾರಾಣಿಯನ್ನು ಕುರಿತು - ಮಾನಸಿಂಹ-ಮಹಾರಾಜ್, ಒಬ್ಬಳೇ ಕುಳಿತಿರುವೆಯಲ್ಲ, ನಿನ್ನ ರಾಜಲಕ್ಷ್ಮಿಯು ಎಲ್ಲಿದ್ದಾಳೆ? ಉರ್ಮಿಳಾರಾಣಿ-ನನ್ನ ರಾಜಲಕ್ಷ್ಮಿಯು! ಅಂದಬಳಿಕ ರಾಜಲ ಕ್ಷಿಯು ತವವಳಲ್ಲವೆಂದಹಾಗಾಯಿತಲ್ಲ! - ಮಾನಸಿಂಹ-ಹಾಗೇನು ಇಲ್ಲ, ಸಹಜವಾಗಿ ಕೇಳಿದನು. ರಾಜಲ ಕ್ಷಿಯು ಬಹು ಸುಶೀಲೆಯು, ಸರಲ ಹೃದಯದವಳು, ನಾನು ಅಂತಃ ಕರಣಪೂರ್ವಕವಾಗಿ ಆಕೆಯನ್ನು ಪ್ರೀತಿಸುತ್ತೇನೆ. ಆಕೆಯು ಎಲ್ಲಿದ್ದಾಳೆ?