ಪುಟ:ತಿಲೋತ್ತಮೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܦܘ ತಿಲೋತ್ತಮೆ. ಈ ಮೇರೆಗೆ ನುಡಿಯುತ್ತ ಮಾನಸಿಂಹನು ಪಲ್ಲಂಗದ ಮೇಲೆ ಕುಳಿ ತುಕೊಂಡನು. ಆಗ ಉರ್ಮಿಳಾರಾಣಿಯು ಉರ್ಮಿಳಾ-ರಾಜಲಕ್ಷ್ಮಿಯುಮಹಾರಾಜರ ಮುಖಪ್ರಕ್ಷಾಲನಕ್ಕೆ ನೀರು ತರಲಿಕ್ಕೆ ಹೋಗಿದ್ದಾಳೆ, ಈಗ ಬರುವಳು. ಮಹಾರಾಜರು ಆಕೆಯನ್ನು ಕೃಪಾದೃಷ್ಟಿಯಿದ ನೋಡುವದರಿಂದ ನನಗೆ ಬಹಳ ಸಂತೋಷವಾಗು ತದೆ. ನನ್ನ ಹೊಟ್ಟೆಯಲ್ಲಿ ಮಕ್ಕಳಿಲ್ಲ. ರಾಜಲಕ್ಷ್ಮಿಯು ನನ್ನನ್ನು ಅಂತಃಕರಣಪೂರ್ವಕವಾಗಿ ಪ್ರೀತಿಸುವದನ್ನೂ, ನನ್ನ ಮೇಲಿರುವ ಆಕೆಯ ಪ್ರೀತಿಯನ್ನೂ ನೋಡಿದರೆ, ನನಗಂತು ಇರಲಿ, ನೋಡುವವರಿಗೆ ಸಹ ಆಕೆಯು ನನ್ನ ಹೊಟ್ಟೆಯಮಗಳೆಂದು ತೋರುವ ಹಾಗಿದೆ, ಈ ಮೊದಲು ಮಾತೃಸುಖವು ನನಗೆ ಎಂದೂ ಪಾಪ್ಯವಾಗಿದ್ದಿಲ್ಲ; ಅದನ್ನು ರಾಜ ಲಕ್ಷ್ಮಿಯು ನನಗೆ ಒದಗಿಸಿಕೊಟ್ಟಳು! ಮಾನಸಿಂಹ ( ಕನಿಕರದಿಂದ )-ಮಹಾರಾಣೀ, ಇದೇನು? ಕಣ್ಣೀರು ಹಾಕುವೆಯಲ್ಲ! ನಿನ್ನ ಹೃದಯವು ಎಷ್ಟು ಕೋಮಲವಾದದ್ದು! ರಾಜ ಇಕ್ಷಿಯು ನಿಶ್ಚಯವಾಗಿ ನಿನ್ನ ಅನುಗ್ರಹಕ್ಕೆ ಪಾತಳಿರುತ್ತಾಳೆ. ನೀನು ಆಕೆಯನ್ನು ಮಗಳೆಂದು ಭಾವಿಸುತ್ತಿದ್ದರೆ, ಎಲ್ಲ ಬಗೆಯಿಂದ ಆಕೆಯನ್ನು ಆದರಪೂರ್ವಕವಾಗಿ ನಮ್ಮ ಪರಿವಾರದಲ್ಲಿ ಸೇರಿಸಿಕೋ. ಅದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇರುವದು. ಉರ್ಮಿಳಾ--ಅದರೆ ಮಹಾರಾಜರೇ, ಈ ಮಾತು ಹೇಗೆ ಸಾಧಿಸ ಬೇಕು? ಮಾನಸಿಂಹ-ಯಾಕೆ ಸಾಧಿಸುವದಿಲ್ಲ? ರಾಜಲಕ್ಷ್ಮಿಯು ಯಾವಾ ಗಲೂ ನಮ್ಮ ಬಳಿಯಲ್ಲಿರುವದಕ್ಕೆ ಆಕೆಯ ತಾಯಿ-ತಂದೆಗಳು ಒಪ್ಪಿ ಕೊಳ್ಳಲಿಕ್ಕಿಲ್ಲವೇನು? ಉರ್ಮಿಳಾ-ನಿಶ್ಚಯವಾಗಿ ಒಪ್ಪಿಕೊಳ್ಳುವರು. ಆ ಮಾತಿನ ಸಂಶ ಯವು ನನಗಿಲ್ಲ. ಮಾನಸಿಂಹ- ಹಾಗಾದರೆ ಮತ್ತೆ ಯಾತರ ಸಂಶಯವು ನಿನ ಗಿರುವದು? ಉರ್ಮಿಳಾ-ರಾಜಲಕ್ಷ್ಮಿಯು ನಮ್ಮ ಬಳಿಯಲ್ಲಿ ಯಾವಾಗಲೂ