ಪುಟ:ತಿಲೋತ್ತಮೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܗܘ ಒಂದು ವೃಕ್ಷಕ್ಕೆ ಎರಡು ಬಳ್ಳಿಗಳು. ಇರುವ ವಿಷಯವಾಗಿ ನನಗೆ ಸಂಶಯವಿಲ್ಲ; ಆದರೆ ಮಹಾರಾಜ, ರಾಜ ಲಕ್ಷ್ಮಿಯನ್ನು ನಮ್ಮ ಪರಿವಾರದಲ್ಲಿ ಸೇರಿಸಿಕೊಂಡ ಮಾತ್ರದಿಂದ ನನಗೆ ಸಮಾಧಾನವಾಗದು. ಆಕೆಗೆ ಎಲ್ಲ ಮಾತಿನಿಂದ ಸುಖವಾಗುವಂತೆ ನಾವು ಮಾಡಬೇಕಾಗುವದು, ರಾಜಲಕ್ಷ್ಮಿಯು ಗುಣಗಳಿಂದಲೂ, ರೂಪದಿಂದಲೂ ಅಪ ತಿನಳಾಗಿರುವಳು: ಆದರೆ ಆಕೆಯ ಗಂಡನಿಗೆ ಆಕೆಯ ಅಂಗೀಕಾರ ಮಾಡಲಿಕ್ಕೆ ಬರುವಹಾಗಿಲ್ಲ ಅಂದಬಳಿಕ ಆಕೆಯನ್ನು ನಮ್ಮ ಪರಿ ವಾರದಲ್ಲಿ ಸೇರಿಸಿಕೊಂಡ ಮಾತ್ರದಿಂದ ಆಕೆಗೆ ಹೇಗೆ ಸುಖವಾಗುವದು? ಮಾನಸಿಂಗ-ಏನಂದಿ? ರಾಜಲಕ್ಷ್ಮಿಯಂಥ ಗುಣಾಢ ಸುಂದರಿಯ ಅಂಗೀಕಾರಕ್ಕೆ ಪ್ರತಿಬಂಧವೆ? ಉರ್ಮಿಳಾ-ಹೌದು ಮಹಾರಾಜ, ಪ್ರತಿಬಂಧವಿರುವದು! ಆಕೆಯ ಗಂಡನು ಮೊದಲು ಆಕೆಯ ಪಾಣಿಗ್ರಹಣವನ್ನು ಬಹು ಆದರದಿಂದ ಮಾಡಿದನು; ಬಹು ಪ್ರೇಮದಿಂದ ಆಕೆಯನ್ನು ತನ್ನ ಬಳಿಯಲ್ಲಿಟ್ಟು ಕೊಂಡನು; ಆದರೆ ರಾಜಲಕ್ಷ್ಮಿಯು ನೀಚಕುಲೋತ್ಪನ್ನಳೆಂಬ ಅಪವಾ ದವು ಉಂಟಾಗಲು, ಆಕೆಯ ಸ್ವೀಕಾರಕ್ಕೆ ಆತಂಕಂಟಾಯಿತು! ಮಾನಸಿಂಹ--ರಾಜಲಕ್ಷ್ಮಿಯು ನಿಜವಾಗಿ ನೀಚಕುಲೋತ್ಪನ್ನ ರುವಳೇನು? ಉರ್ಮಿಳಾ-ನನಗೆ ಗೊತ್ತಿದ್ದಮಟ್ಟಿಗೆ ವಿಚಾರಮಾಡಲು, ರಾಜ ಲಕ್ಷ್ಮಿಯು ನೀಚ ಕುಲೋತ್ಪನ್ನಳೆಂದು ನನಗೆ ತೋರುವದಿಲ್ಲ. ಒಂದು ಪಕ್ಷದಲ್ಲಿ ಕುಲಕ್ಕೆ ಕಲಂಕವಿದ್ದರೂ, ಪಾಪ, ಅದರಲ್ಲಿ ಆಕೆಯ ತಪ್ಪು ಏನು? ರಾಜಲಕ್ಷ್ಮಿಯು ಸಾಕ್ಷಾತ್ ಲಕ್ಷ್ಮಿಯೆಂಬದರಲ್ಲಿ ಸಂಶಯವಿಲ್ಲ. ಹೀಗಿದ್ದು, ಲಗ್ನವಾದಬಳಿಕ ಅನವಶ್ಯಕವಾಗಿರುವ ಕುಲದ ಕಲಂಕವನ್ನು ಮುಂದೆಮಾಡಿ, ಆಕೆಯ ಪತಿಯು ಆಕೆಯ ಅಂಗೀಕಾರಮಾಡದಿರು ವದು ಅಧರ್ಮವಲ್ಲವೇ? ಮಾನಸಿಂಹ-ಮಹಾರಾಜ್, ನಿಶ್ಚಯವಾಗಿ ಅಧರ್ಮವು! ಆ ಗುಣ ವತಿಯಾದ ಸುಂದರಿಯು ಸರ್ವಥ ತ್ಯಾಜ್ಯಳಲ್ಲ. ರಾಜಲಕ್ಷ್ಮಿಯ ಪತಿಯು ಯಾರು? ಆತನು ಎಲ್ಲಿ ಇರುವನು? ಉರ್ಮಿಳೆ-ಅತನು ತನ್ನ ದಂಡಿನೊಳಗಿನ ಒಬ್ಬ ದಂಡಾಳುವಾಗಿರು