ಪುಟ:ತಿಲೋತ್ತಮೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وعمه ತಿಲೋತ್ತಮೆ. ವನು. ತಾವು ಮನಸ್ಸು ಮಾಡಿದರೆ, ರಾಜಲಕ್ಷ್ಮಿಯ ಕಷ್ಟ ನಿವಾರಣಕ್ಕೆ ಕ್ಷಣವಾದರೂ ವಿಲಂಬವಾಗಲಿಕ್ಕಿಲ್ಲ. ಮಾನಸಿಂಹ-ಆತನು ನಮ್ಮ ದಂಡಾಳುವಾಗಿರುವನೆ? ಹಾಗಿದ್ದರೆ ನಿಶ್ಚಯವಾಗಿ ರಾಜಲಕ್ಷ್ಮಿಯ ಕಷ್ಟ ನಿವಾರಣವಾಯಿತೆಂದು ತಿಳಿ, ರಾಜ ಲಕ್ಷ್ಮಿ ಯಪತಿಯ, ಆತನ ಆಪೈ ಷ್ಟರೂ ರಾಜಲಕ್ಷ್ಮಿಯನ್ನು ಆದರ ದಿಂದ ಸ್ವೀಕರಿಸುವಂತೆ ನಾನು ಮಾಡುವೆನು; ಆದರೆ ಮಹಾರಾಜ್, ರಾಜಲಕ್ಷ್ಮಿಯು ಗಂಡನಮನೆಗೆ ಹೋದ ಬಳಿಕ ನಿನಗೆ ಆಕೆಯ ವಿಯೋಗ. ದುಃಖವಾಗುವದಲ್ಲ, ಅದಕ್ಕೆ ಹೇಗೆ ಮಾಡುವೆ? - ಉರ್ಮಿಳಾ-ಅದೇಕೆ? ಮಹಾರಾಜರ ಕೃಪೆಯಾದರೆ, ಈ ವಿಯೋಗ ದುಃಖವು ನನಗೆ ಯಾಕೆ ಒದಗುವದು? ರಾಜಲಕ್ಷ್ಮಿಯಗಂಡನು ತಮ್ಮ ಸೈನ್ಯದಲ್ಲಿ ಉಚ್ಚ ಪದವಿಯನ್ನು ಹೊಂದಿ, ತಮ್ಮ ಬಳಿಯಲ್ಲಿ ಇರಹ್ಮ ತಿದನೆಂದರೆ, ನಾನು ರಾಜಲಕ್ಷ್ಮಿಯನ್ನು ನನ್ನ ಬಳಿಯಲ್ಲಿ ಇಟ್ಟು ಕೊಳ್ಳುವೆನು, ತನ್ನ ಬಯಕೆಯು ಪೂರ್ಣವಾದ ಬಳಿಕ, ರಾಜಲಕ್ಷ್ಮಿಯು ಔದಾಸೀನ್ಯವನ್ನು ಬಿಟ್ಟು ಮುಗುಳುನಗೆಯಿಂದ ತಮ್ಮ ಸೇವೆಯನ್ನು ಮಾಡಹತ್ತಿದಳೆಂದರೆ, ಅದನ್ನು ನೋಡಿ ನನಗೆ ಪರಮಾನಂದವಾಗುವದು. ಮಹಾರಾಜರೇ, ತಾವು ನ್ಯಾಯಪಕ್ಷಪಾತಿಗಳಿರುತ್ತೀರಿ, ಧರ್ಮಿಷ್ಟರಿರು ಶ್ರೀ೦; ಆದ್ದರಿಂದ ಚರಣಸೇವಕಳಾದ ಈ ದಾಸಿಯ ಪ್ರಾರ್ಥನೆಗೆ ಕಿವಿ ಗೊಟ್ಟು, ರಾಜಲಕ್ಷ್ಮಿಯ ಕಷ್ಟವನ್ನು ದೂರಮಾಡಬೇಕು. ಈಮೇರೆಗೆ ನುಡಿಯುವಾಗ ಮಹಾರಾಣಿಯ ಕಣೋಳಗಿಂದ ನೀರು ಗಳು ಸುರಿಯಹತ್ತಿದವು, ಆಗ ಮಾನಸಿಂಗನು ಅಕೆಯ ಕೈಯನ್ನು ಹಿಡಿದು ಸ್ನೇಹಭಾವದಿಂದ-ಮಹಾರಾಜ್, ಅವಶ್ಯವಾಗಿ ನಾನು ನಿನ್ನ ಮನೋದಯವನ್ನು ಪೂರ್ಣ ಮಾಡವೆನು; ಎಂಥ ವಿಪತ್ತು ಒದಗಿದರೂ ನಾನು ನನ್ನ ವಚನವನ್ನು ಪಾಲಿಸುವೆನು; ರಾಜಲಕ್ಷ್ಮಿಯ ಕಷ್ಟ ನಿವಾ ಶಣಮಾಡುವ ವಿಷಯದಲ್ಲಿ ಯಾವ ಕೆಲಸ ಮಾಡಬೇಕಾದರೂ ಅದನ್ನು ಮಾಡುವನು; ಈ ಪ್ರಸಂಗದಲ್ಲಿ ಜಗತ್ತಿನ ದೃಷ್ಟಿಯಿಂದ ನಾನು ನೀಚನ್ನೂ ದಯಾಶೂನ್ಯನೂ ಆಗುವ ಪ್ರಸಂಗಒದಗಿದರೂ ನಾನು ಹಿಂದಕ್ಕೆ ಸರಿಯುವ ದಿಲ್ಲ ಎಂದು ನುಡಿಯಲು, ಉರ್ಮಿಳಾರಾಣಿಯು ಆನಂದಪರವಶಳಾಗಿ